ಸಿದ್ದಗಂಗೆಯ ಗೋಸಲಶ್ರೀ ಪ್ರಶಸ್ತಿ ಶಾಂತಕುಮಾರ್‌ ಮೂಲಕ ತಾಲೂಕಿಗೆ ಸಂದ ಗೌರವ : ಎನ್‌.ಎಸ್‌.ನಟರಾಜು

ವಿಜಯ ದರ್ಪಣ ನ್ಯೂಸ್……

ಸಿದ್ದಗಂಗೆಯ ಗೋಸಲಶ್ರೀ ಪ್ರಶಸ್ತಿ ಶಾಂತಕುಮಾರ್‌ ಮೂಲಕ ತಾಲೂಕಿಗೆ ಸಂದ ಗೌರವ : ಎನ್‌.ಎಸ್‌.ನಟರಾಜು

ನೆಲಮಂಗಲ : ಸಮಾಜಮುಖಿಯಾದ ಕೆಲಸಗಳನ್ನು ನಿಸ್ವಾರ್ಥದಿಂದ ಮಾಡಿದಾಗ ಮಾತ್ರದ ಜನಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ, ಸಮಾಜವನ್ನು ಕಟ್ಟುವಲ್ಲಿ ಪ್ರತಿಯೊಬ್ಬರು ಪ್ರಾಮಾಣಿಕವಾಗಿರಬೇಕು ಎಂದು ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ಕೇಂದ್ರಘಟಕದ ಮಾಜಿ ನಿರ್ದೇಶಕ ಎನ್‌.ಎಸ್‌.ನಟರಾಜು ಕರೆನೀಡಿದರು.

ನಗರದ ಭಿನ್ನಮಂಗಲ ವಿನಾಯಕನಗರದಲ್ಲಿರುವ ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಕೊಂಡಿದ್ದ ಎನ್‌.ಎಸ್‌.ಶಾಂತಕುಮಾರ್‌ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಷರ ಅನ್ನ ಆಶ್ರಯವೆಂಬ ತ್ರಿವಿಧ ದಾಸೋಹದ ಮೂಲಕ ದೇಶಾದ್ಯಂತ ತನ್ನದೇ ಆದ ವಿಶೇಷರೀತಿಯಲ್ಲಿ ಪ್ರಸಿದ್ದಿ ಯನ್ನು ಪಡೆದಿರುವಂತಹ ತುಮಕೂರಿನ ಶ್ರೀಸಿದ್ದಗಂಗಾ ಮಠದ ಜಾತ್ರಾಮಹೊತ್ಸವದಲ್ಲಿ ಪ್ರತಿವರ್ಷ ನೀಡುವ ಗೋಸಲಶ್ರೀ ಪ್ರಶಸ್ತಿಗೆ ಈ ಭಾರಿ ನೆಲಮಂಗಲ ನಗರ ನಿವಾಸಿಗಳಾದ ಎನ್‌.ಎಸ್‌.ಶಾಂತಕುಮಾರ್‌ ಅವರಿಗೆ ಪ್ರದಾನ ಮಾಡಿದ್ದು ನಮ್ಮ ತಾಲೂಕಿನ ಹೆಮ್ಮೆಯಾಗಿದೆ.

117 ವರ್ಷಗಳಿಂದ ಸಿದ್ದಗಂಗಾ ಮಠದಿಂದ ಪ್ರಶಸ್ತೀ ಪ್ರದಾನ ಮಾಡಲಾಗುತಿದ್ದು ಶ್ರೀಮಠದ ಅತ್ಯುನ್ನತ ಗೌರವವೆಂದೆ ಬಣ್ಣಿಸಲಾಗುತ್ತದೆ, ನನಗೆ ತಿಳಿದಂತೆ ಇದೇ ಮೊದಲಭಾರಿಗೆ ನೆಲಮಂಗಲಕ್ಕೆ ಲಭಿಸಿರುವುದು ಎಲ್ಲರಿಗೂ ಸಂತವನ್ನುಂಟುಮಾಡಿದೆ, ಸಮಾಜವನ್ನು ಮತ್ತಷ್ಟುಸಂಘಟಿಸಿ ಸದೃಡಗೊಳಿಸುವಲ್ಲಿ ಪ್ರತಿಯೊಬ್ಬರು ನಿಸ್ವಾರ್ಥವಾಗಿ ಕೈ ಜೋಡಿಸಬೇಕು , ಶಾಂತಕುಮಾರ್‌ ಅವರಿಗೆ ಪ್ರಶಸ್ತೀಯನ್ನು ನೀಡಿರುವುದು ಮತ್ತಷ್ಟುಸೇವೆಯನ್ನು ಮಾಡುವುದರೊಂದಿಗೆ ಯುವಕರನ್ನು ಒಗ್ಗೂಡಿಸಿಕೊಂಡು ಸೇವಾಮನೋಭಾವವನ್ನು ಅವರಲ್ಲಿಯೂ ಹುಟ್ಟುಹಾಕಲಿ , ಸಮಾಜವನ್ನು ಸಂಘಟಿಸಲಿ ಎಂಬುದಾಗಿದೆ ಎಂದರು.

ಮಹಾಸಭಾ ಮಹಿಳಾ ಘಟಕದ ರಾಜ್ಯಕಾರ್ಯದರ್ಶಿ ರಾಜಮ್ಮಪ್ರಕಾಶ್‌ ಮಾತನಾಡಿ ಶಾಂತಕುಮಾರ್‌ ಅವರು ಶ್ರೀಮಠದ ಸದ್ಬಭಕ್ತರಾಗಿದ್ದು ಮಠದ ಸಂಸ್ಥೆಯಲ್ಲಿ ಸಾಮಾನ್ಯ ನೌಕರನಾಗಿದ್ದುಕೊಂಡು ತಮ್ಮ ನಿಸ್ವಾರ್ಥ ಸೇವಾಮನೋಭಾವನೆಯಿಂದಾಗಿ ಶ್ರೀಮಠದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿರುವುದು ಯುವಕರಿಗೆ ಮಾದರಿಯಾಗಿದೆ, ಯುವಕರು ನಮ್ಮ ಆಚಾರ ವಿಚಾರಗಳನ್ನು ಅರಿತು ಸನ್ಮಾರ್ಗದಲ್ಲಿ ಸಮಾಜವನ್ನು ಬಲಪಡಿಸಬೇಕು, ಅವಕಾಶ ದೊರೆತ ಕಡೆಗಳಲ್ಲಿ ಸಮಾಜಬಾಂದವರನ್ನು ಬಲಪಡಿಸಲು ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದರು.

ಗೋಸಲ ಶ್ರೀ ಪ್ರಶಸ್ತಿ ಪುರಸ್ಕೃತ ಎನ್‌.ಎಸ್‌.ಶಾಂತಕುಮಾರ್‌ ಮಾತನಾಡಿ ಸಿದ್ದಗಂಗಾ ಮಠದ ಆಶ್ರಯದಲ್ಲಿ ಬೆಳದ ನನಗೆ ಅಕ್ಷರದೊಂದಿಗೆ ಆದಾಯಕ್ಕಾಗಿ ಉದ್ಯೋಗವನ್ನು ನೀಡಿದ್ದ ಮಠ ಇಂದು ಶ್ರೀಮಠದ ಅತ್ಯುನ್ನತ ಪ್ರಶಸ್ತಿಯನ್ನು ನೀಡುವ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟುಹೆಚ್ಚಿಸಿದ್ದು ನನ್ನ ಪೋಷಕರಿಗೆ ನೆಮ್ಮದಿಯನ್ನು ಕರುಣಿಸಿದಂತಾಗಿದೆ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ಶಾಂತಕುಮಾರ್‌ ಅವರನ್ನು ಸಂಭ್ರಮ ಸಡಗರದಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ನರೆದಿದ್ದ ಮುಖಂಡರುಗಳು ಮೆಚ್ಚುಗೆಯ ಮಾತುಗಳನ್ನಾಡಿದರು.

ಸಂದರ್ಭದಲ್ಲಿ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ಜಿಲ್ಲಾ ಮಾಜಿಕಾರ್ಯದರ್ಶಿ ಎನ್‌.ಬಿ.ದಯಾಶಂಕರ್‌,ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೇದಾವತಿಮಂಜುನಾಥ್‌, ರಾಜ್ಯ ಯುವಘಟಕದ ಮಾಜಿಕಾರ್ಯದರ್ಶಿ ಕೊಟ್ರೇಶ್‌.ಆರ್‌, ಮಾಜಿನಿದೇರ್ಶಕ ಎಂ.ಬಿ.ಮಂಜುನಾಥ್‌, ಬಸವೇಶ್ವರಯುವಕ ಸಂಘದ ಅಧ್ಯಕ್ಷ ಎನ್‌.ಎಸ್‌.ಶ್ರೀಗಣೇಶ್‌, ಟೌನ್‌ಸೊಸೈಟಿ ಅಧ್ಯಕ್ಷ ಚನ್ನಬಸವರಾಜು, ನಿರ್ದೇಶಕ ಕಾರ್ತಿಕ್‌, ಸಾಹಿತಿ ಬಿದಲೂರು ಸೋಮಣ್ಣ, ಮುಖಂಡರಾದ ಜಗದೀಶ್‌,ಬೋರ್‌ವೆಲ್‌ ರಾಜಣ್ಣ ಕೆ.ಸಿ.ಅಣ್ಣಪ್ಪ, ಹರೀಶ್‌, ಸಿದ್ದರಾಜು, ಆರ್‌.ಉಮೇಶ್‌,ಪ್ರಸಾದ್‌, ಮಂಜುಳಾಸುರೇಶ್‌, ಪೂರ್ಣೀಮಾ, ವಿಜಯಕುಮಾರಿ, ಶೋಭಾ,ಸೌಮ್ಯ,ಸುಮ ಮತ್ತಿತರರಿದ್ದರು.

!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!

“ಶ್ರೀ ಹರಿದಾಸ ವೆಂಕಟೇಶ ನವರತ್ನ ಮಾಲಿಕೆ”

ಬೆಂಗಳೂರು : ಶ್ರೀ ಸುಧ್ಯಾನ ಸಂಗೀತಧಾರಾ ವತಿಯಿಂದ ನಡೆದ “ಹರಿದಾಸ ಸಾಹಿತ್ಯ ಸಿಂಚನ” ಎಂಬ ಶೀರ್ಷಿಕೆ ಅಡಿಯಲ್ಲಿ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಸಿದ್ಧ ಹರಿದಾಸರ ಪದಗಳ ಘೋಷ್ಠಿ ಗಾಯನ ಬೆಂಗಳೂರಿನ ಮಾನಂದಿ ನಂಜುಂಡ ಶೆಟ್ಟಿ ಸಭಾಂಗಣದಲ್ಲಿ ನೆರವೇರಿತು.

ಈ ಕಾರ್ಯಕ್ರಮಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ಬಿ.ಆರ್.ಪ್ರಕಾಶ್ ಮತ್ತು ಶ್ರೀ ಅಮಿತ್ ಶರ್ಮಾ (ಕೀಬೋರ್ಡ್), ಶ್ರೀ ಅಶ್ವಿನ್ ಲಕ್ಷ್ಮೀನಾರಾಯಣ್ (ಕೊಳಲು), ಶ್ರೀ ಶ್ರೀನಿವಾಸ ಕಾಖಂಡಕಿ ಮತ್ತು ಶ್ರೀಪಾದ್ ಕಾಖಂಡಕಿ (ತಬಲಾ) ಹಾಗೂ ಶ್ರೀ ಕೆ.ಎಸ್. ರಮೇಶ್ (ರಿದಂಪಾಡ್) ಸಹಕರಿಸಿದರು.