ನೇಚರ್ ರೆಸಾರ್ಟ್ನಲ್ಲಿ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಸಾವು
ವಿಜಯ ದರ್ಪಣ ನ್ಯೂಸ್….
ನೇಚರ್ ರೆಸಾರ್ಟ್ನಲ್ಲಿ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಸಾವು

ಶಿಡ್ಲಘಟ್ಟ : ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಚಿಂತಡಪಿ ಗ್ರಾಮದ ಬಳಿ ಇರುವ ನೇಚರ್ ರೆಸಾರ್ಟ್ನಲ್ಲಿ ಈಜಲು ಹೋದ ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಉದ್ಯೋಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಎಫ್ಇಎಸ್ ಸಂಸ್ಥೆ ಸಿಬ್ಬಂದಿ ರೇಖಾ ಮೃತ ಪಟ್ಟವರು ಎಫ್ಇಎಸ್ ಸಂಸ್ಥೆಯ ಸಿಬ್ಬಂದಿಗೆ ರೆಸಾರ್ಟ್ನಲ್ಲಿ 2 ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿ ಕೊಂಡಿದ್ದು, ಅದರಲ್ಲಿ ಭಾಗವಹಿಸಿದ್ದ ರೇಖಾ ಅವರು, ತರಬೇತಿ ಮುಗಿಸಿ ಕೊಂಡು ತಮ್ಮ ಸಹೋದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ.
ಮುಂಜಾಗ್ರತೆ ಕ್ರಮ ಕೈಗೊಳ್ಳದ ರೆಸಾರ್ಟ್ನ ನಿರ್ಲಕ್ಷ್ಯದಿಂದಲೆ ಈ ಸಾವು ಎಂದು ರೇಖಾ ಕುಟುಂಬದವರು ದೂರಿದ್ದಾರೆ ,ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ ,
ಚಿಂತಡಪಿ ಗ್ರಾಮದ ಬಳಿ ಇತ್ತೀಚೆಗಷ್ಟೆ ಆರಂಭವಾದ ಖಾಸಗಿ ರೆಸಾರ್ಟ್ನಲ್ಲಿ ಎಫ್ಇಎಸ್ ಸ್ವಯಂ ಸೇವಾ ಸಂಸ್ಥೆ ತಮ್ಮ ಸಿಬ್ಬಂದಿಗೆ 2 ದಿನಗಳ ವಸತಿಸಹಿತ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ರೇಖಾ ಕೂಡ ಭಾಗವಹಿಸಿದ್ದಳು.
ಮೊದಲ ದಿನದ ತರಬೇತಿ ಮುಗಿಸಿಕೊಂಡು ಸಂಜೆ 6.30ರ ಸುಮಾರಿಗೆ ರೇಖಾ ತನ್ನ ಕೆಲ ಸಹುದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಿದ್ದಾರೆ, ಕೆಲ ಕಾಲ ಈಜಾಡಿದ ಅವರು, ನಂತರ ಅಸ್ವಸ್ಥಗಳಾಗಿದ್ದು, ಕೂಡಲೆ ಜತೆ ಯಲ್ಲಿದ್ದವರು ಅವರನ್ನು ಈಜುಕೊಳದಿಂದ ಮೇಲೆತ್ತಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ ಅಷ್ಟರಲ್ಲಾಗಲೇ ರೇಖಾ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ನಿಯಮದಂತೆ ಸಂಜೆ 6 ಗಂಟೆಯ ನಂತರ ಈಜು ಕೊಳದಲ್ಲಿ ಈಜಾಡುವುದು ನಿಷಿದ್ಧ ,ಆದರೆ ರೆಸಾರ್ಟ್ನವರು ಈಜಾಡಲು ಅಲ್ಲಿ ಅವಕಾಶ ಕೊಟ್ಟಿದ್ದಾರಲ್ಲದೆ, ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ ಇದರಿಂದಲೆ ರೇಖಾ ಮೃತಪಟ್ಟಿದ್ದಾರೆಂದು ಅವರ ಕುಟುಂಬದವರು ದೂರಿದ್ದಾರೆ.
ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ರೇಖಾ ಅವರ ಪತಿ ರಾಜು ಕುಟುಂಬದವರು, ಕುಂದಲಗುರ್ಕಿ ಗ್ರಾಮಸ್ಥರು ರೆಸಾರ್ಟ್ ಮಾಲೀಕರ ವಿರುದ್ಧ ಕಿಡಿ ಕಾರಿದರಲ್ಲದೆ ಶವಪರೀಕ್ಷೆ ನಡೆಸದಂತೆ ತಡೆ ಹಾಕಿದರು.
