--Ads--

ವಲಸೆ ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ , ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

On: March 10, 2026 2:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವಲಸೆ ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ , ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವ

ಕೊಡಗು: ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ಇತರೆಡೆ ಅಸ್ಸಾಂ ಹಾಗೂ ಇನ್ನಿತರ ಕಡೆಗಳಿಂದ ಬಂದತಹ ವಲಸೆ ಕಾರ್ಮಿಕರಿಂದ ಇತ್ತಿಚಿನ ದಿನಗಳಲ್ಲಿ ನಡೆಯುತ್ತಿರುವ ದೌರ್ಜನ್ಯ ಹಾಗೂ ಮಾರುಕಟ್ಟೆಯಲ್ಲಿ ಮಾರುತ್ತಿರುವ ತಂಬಾಕು ಉತ್ಪನ್ನಗಳ ಹಾಗೂ ಇನ್ನಿತರ ವಸ್ತುಗಳ ಮಾರಾಟದಿಂದಾಗಿ ಕೊಡಗು ಜಿಲ್ಲೆಯ ಜನತೆಯ ಮೇಲೆ ಆಗುತ್ತಿರುವ ದುಷ್ಪರಿಣಾಮ ಹಾಗೂ ಕೆಲವು ಗ್ರಾಮಿಣ ಭಾಗದಲ್ಲಿ ಸಂಜೆಯ ಸಮಯ ಮಧ್ಯಪಾನ ಸೇವಿಸಿ ಸ್ಥಳಿಯರಿಗೆ ಕಿರಿ ಕಿರಿ ಉಂಟು ಮಾಡಿತ್ತಿರುವುದು ಕಂಡು ಬರುತ್ತ್ತಿದೆ.

ಜಿಲ್ಲೆಯ ಹಲವು ಮಾರುಕಟ್ಟೆಯಲ್ಲಿ ಇವರುಗಳು ವ್ಯಾಪಾರಕ್ಕೆ ಇಳಿದು ಅಶುಚಿತ್ವವಾದ ತಿಂಡಿ ತಿನಿಸುಗಳನ್ನು ಮಾರುತ್ತಿದ್ದಾರೆ ಹಾಗೂ ಇದಕ್ಕೆ ಯಾವುದೇ ಆಹಾರ ಇಲಾಖೆಯ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದಲ್ಲದೇ ತಂಬಾಕು ಉತ್ಪನ್ನಗಳಾದ ಗುಡ್ಕ ಬೀಡಿ ಸಿಗರೇಟ್‌ಗಳನ್ನು ಕೂಡ ಮಾರುತ್ತಿದ್ದಾರೆ , ಇವುಗಳಲ್ಲಿ ಕೆಲವರು ಅಪರಾಧ ಪ್ರಕರಣಗಳಲ್ಲಿ ಕೂಡ ಭಾಗಿಯಾಗಿದ್ದು ಮುಂದಿನ ದಿನಗಳಲ್ಲಿ ಕೊಡಗಿಗೆ ಮಾರಕವಾಗುವ ಲಕ್ಷಣಗಳು ಕಂಡು ಬರುತ್ತಿವೆ .

ಕೆಲ ದಿನಗಳ ಹಿಂದೆ ಸ್ಥಳಿಯ ವಾಹನ ಚಾಲಕನ ಮೇಲೆ ಹಲ್ಲೆ ಖಂಡಿಸಿ ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಇವರುಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಇವರ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ರವಿಗೌಡ ,ಉಪಾಧ್ಯಕ್ಷ ನಾಗೇಶ್ , ಕಾರ್ಯದರ್ಶಿ ಅಕ್ಷಿತ್, ಮಹಿಳಾ ಘಟಕದ ಕಾರ್ಯದರ್ಶಿ ಲಿಲ್ಲಿಗೌಡ, ಎನ್‌ಸಿಐಬಿ ಯ ಜಾನ್ಸನ್ ಪ್ರವೀಣ್, ಸಮಿತಿ ಸದಸ್ಯರುಗಳಾದ ಪುನೀತ್.ಕಿರಣ್ ಹಾಗೂ ಇನ್ನೂ ಇತರರು ಪಾಲ್ಗೊಂಡಿದ್ದರು

WhatsApp

Join Now

Telegram

Join Now

Instagram

Join Now