ವಿಜಯ ದರ್ಪಣ ನ್ಯೂಸ್……
ಮನೆಗಳ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗ್ತಿದೆ : ಶಾಸಕ ಬಿ ಎನ್ ರವಿಕುಮಾರ್

ಶಿಡ್ಲಘಟ್ಟ : ವಸತಿ ಇಲಾಖೆಯ ಮನೆಗಳ ಹಂಚಿಕೆಯಲ್ಲಿ ಮುಸ್ಲಿಮರಿಗೆ ಅನ್ಯಾಯ ಆಗ್ತಿದೆ ಎಂದು ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸಿಎನ್ ರವಿಕುಮಾರ್ ಧ್ವನಿ ಎತ್ತಿದ ಪ್ರಸಂಗ ನಡೆಯಿತು.
ನಗರದ ಸ್ಲಂ ಬೋರ್ಡ್ ಮುಸ್ಲಿಂ ಸಮುದಾಯಕ್ಕೆ 2 ಹಂತದಲ್ಲಿ 1,112 ಮನೆಗಳು ಮಂಜೂರಾಗಿದ್ದು, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸುವಂತೆ ಶಾಸಕ ಬಿ.ಎನ್.ರವಿಕುಮಾರ್ ಅವರು ಸದನದಲ್ಲಿ ಒತ್ತಾಯ ಮಾಡಿದರು.
ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಗೆ ಕೇಳಿದ್ದ ಚುಕ್ಕೆ ಪ್ರಶ್ನೆ ವೇಳೆ ಮಾತನಾಡಿದ ಅವರು, ನಾನು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಒದಗಿಸಿದ ಉತ್ತರ ಸಮಂಜಸವಾಗಿಲ್ಲ ಎಂದರು.
2018-19ನೇ ಸಾಲಿನಲ್ಲಿ 500 ಮನೆ, 2020-21ರಲ್ಲಿ 612 ಮನೆ ಸೇರಿ ಒಟ್ಟು 1,112 ಮನೆಗಳ ಪೈಕಿ ಅರ್ಹ ಫಲಾನು ಭವಿಗಳಿಗೆ 474 ಮನೆಗಳು ಮಾತ್ರ ದಕ್ಕಿವೆ. ಉಳಿದ ಮನೆಗಳು ಇಲಾಖೆ ಅಧಿಕಾರಿಗಳ, ಗುತ್ತಿಗೆದಾರರ ಬಳಿ ಕೆಲಸ ಮಾಡುವ ಅಧಿಕಾರಿಗಳು, ಮಧ್ಯವರ್ತಿಗಳು ಕಟ್ಟಿಕೊಂಡಿದ್ದಾರೆ ,ಒಂದೇ ಸರ್ವೆ ನಂಬರ್‌ನಲ್ಲಿ 70 ಮನೆಗಳನ್ನು ಒಬ್ಬರೇ ಕಟ್ಟಿಕೊಂಡಿದ್ದಾರೆ ಎಂದು ದೂರಿದರು.
ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ಸಲ ಸಚಿವರು ಮತ್ತು ಇಲಾಖೆ ಅಧಿ ಕಾರಿಗಳಿಗೆ ದೂರು ಕೊಟ್ಟಿದ್ದರೂ ತಪ್ಪಿತಸ್ಥರ ವಿರುದ್ಧ ತನಿಖೆ ಆಗಲಿ, ಕಾನೂನು ಕ್ರಮ ಆಗಲಿ ಆಗಿಲ್ಲ ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಈ ವಿಚಾರ ಪ್ರಸ್ತಾಪಿಸಿ ವಸತಿ ಇಲಾಖೆಯ ವಿವಿಧ ನಿಗಮಗಳಿಂದ ಕ್ಷೇತ್ರದ ಮುಸ್ಲಿಮರಿಗೆ ಯಾವ ರೀತಿಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ಸವಿಸ್ತಾರವಾಗಿ ವಿವರಿಸಿದರು.
ಇದಕ್ಕೆ ಉತ್ತರ ನೀಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಪುರಸ್ಕೃತ ಯೋಜನೆಗೆ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯು ಪರ್ಮನೆಂಟ್ ವೇಟಿಂಗ್ ಲಿಸ್ಟ್ ಮೂಲಕ ಕ್ರಮಾಂಕವಾರು ಆಯ್ಕೆ ಮಾಡಲಾಗುತ್ತಿದೆ ಎಂದುನಿರ್ಧರಿಸಿದ್ದೇವೆ .
ಒಂದು ಮನೆ ನಿರ್ಮಾಣಕ್ಕೆ 7 ಲಕ್ಷ ರೂ.ಗಳು ಬೇಕು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆ ಇಂದ 1 ವರೆ ಲಕ್ಷ ರೂ.ಗಳು ಕೊಡಲಿದೆ ರಾಜ್ಯ ಸರ್ಕಾರ 1 ಲಕ್ಷ 20 ಸಾವಿರ ರೂ.ಗಳನ್ನು ಕೊಡ್ತೇವೆ ಫಲಾನುಭವಿಗಳಿಗೆ 4 ವರೆ ಲಕ್ಷ ರೂ.ಗಳು ಕೊಡಬೇಕು ,
ಆದ್ರೆ ಫಲಾನುಭವಿಗಳು ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಅಂತ ಸಿಎಂ ಗಮನಕ್ಕೆ ತಂದು ಮನವಿ ಮಾಡಿದ್ದೇನೆ ಎಂದರು.
ಆ ಕಾರಣದಿಂದ ಸರ್ಕಾರದಿಂದ 4 ಲಕ್ಷ ರೂ.ಗಳನ್ನು ಕೊಡಲಾಗ್ತಿದೆ, ಈಗಾಗಲೇ ಎರಡು ಕಂತಿನಲ್ಲಿ ಮನೆಗಳನ್ನ ನಿಡೀದ್ದೇವೆ ,ಶಿಡ್ಲಘಟ್ಟಕ್ಕೆ 500 ಮನೆಗಳನ್ನ ನೀಡಿದ್ದೇವೆ 75 ಮನೆಗಳು ಶಾಸಕರ ವಿವೇಚನೆ ಇಂದ ನೀಡು ವುದಾಗಿದೆ ಈ ಸಂಬಂಧಿಸಿದಂತೆ ಚರ್ಚಿಸಲು ನಾಳೆ ಸಭೆ ಕರೆಯುವುದಾಗಿ ತಿಳಿಸಿದರು.
ಇತ್ತೀಚೆಗೆ ನಮ್ಮ ಸರ್ಕಾರ ಬಂದ ಮೇಲೆ ನಾನು ಸಿಎಂ ಸಿದ್ದರಾಮಯ್ಯ ಅವರ ಬಳಿ ಸಮಸ್ಯೆ ಮನವರಿಕೆ ಮಾಡಿ ಫಲಾನುಭವಿ ವಂತಿಗೆ ಕಟ್ಟಲಾಗುತ್ತಿಲ್ಲ ಇದರಿಂದ ಜನರು ಮನೆ ಇಲ್ಲದೆ ಬೀದಿಯಲ್ಲಿ ಇದ್ದಾರೆ ಹಾಗಾಗಿ ವಂತಿಗೆಯನ್ನು ನಾವೇ ಸರ್ಕಾರದಿಂದ ಕಟ್ಟೋಣ ಎಂದು ನಿರ್ಧರಿಸಿದ್ದೇವೆ ಎಂದರು.








