--Ads--

ಹೆಚ್ಚಿಗೆ ಗ್ರಾಮದಲ್ಲಿ  ನಿವೇಶನ ದೊರಕಿಸಿ ಕೊಡುವಂತೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ರಾಮಯ್ಯಗೆ ಗ್ರಾಮಸ್ಥರು ಮನವಿ 

On: March 14, 2026 3:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹೆಚ್ಚಿಗೆ ಗ್ರಾಮದಲ್ಲಿ  ನಿವೇಶನ ದೊರಕಿಸಿ ಕೊಡುವಂತೆ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ರಾಮಯ್ಯಗೆ ಗ್ರಾಮಸ್ಥರು ಮನವಿ 

ತಾಂಡವಪುರ ಮಾರ್ಚ್ 14 :ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೆಚ್ಚಿಗೆ ಗ್ರಾಮದಲ್ಲಿ ನಿವೇಶನದ ಸಮಸ್ಯೆ ತುಂಬಾ ಇದ್ದು ನಿವೇಶನವನ್ನು ದೊರಕಿಸಿ ಕೊಡುವಂತೆ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ  ಅವರಲ್ಲಿ ಗ್ರಾಮಸ್ಥರು ಮನವಿ ಮಾಡಿದರು

ಅವರು ಇಂದು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೆಜ್ಜೆಗೆ ಗ್ರಾಮದಲ್ಲಿ ತಾಲೂಕು ಆಡಳಿತ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಮಸ್ಯೆ ಹಾಲಿಕೆ ಜನ ಸಂಪರ್ಕ ಸಭೆ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ರಾಮಯ್ಯ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಬಳಿಕ ಮಾತನಾಡಿದ ಅವರು ನಿವೇಶನದ ಸಮಸ್ಯೆ ತುಂಬಾ ಇದೆ ಎಂದು ಮನವಿ ಮಾಡಿದ್ದೀರಿ. ನಿಮ್ಮ ಮನವಿಗೆ ನಾವು ಸ್ಪಂದಿಸಿ ನಿವೇಶನ ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ ನಿಮ್ಮ ಗ್ರಾಮದ ಅಕ್ಕಪಕ್ಕ ಯಾವುದಾದರು ಸರ್ಕಾರಿ ಭೂಮಿ ಇದ್ದರೆ ನೋಡಿ ಅಥವಾ ಯಾರಾದರೂ ಭೂಮಿಯನ್ನು ಕೊಡುವುದಾದರೆ ಭೂಮಿಯನ್ನು ಕೊಂಡುಕೊಂಡು ನಿಮ್ಮ ಗ್ರಾಮದ ಬಡವರಿಗೆ ನಿವೇಶನ ದುರಹರಿಸಿಕೊಳ್ಳಲ
ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಇದೆ ವೇಳೆ ಗ್ರಾಮಸ್ಥರು ಗ್ರಾಮದ ಸಮುದಾಯ ಭವನಕ್ಕೆ ಹೆಚ್ಚುವರಿ ಅನುದಾನ ದುರಕಿಸಿಕೊಡಬೇಕು ಹಾಗೂ ಗ್ರಾಮದ ರಸ್ತೆ ಮತ್ತು ಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಜೊತೆಗ ಶಿಥಿಲ ವ್ಯವಸ್ಥೆಯಲ್ಲಿರುವ ವಿದ್ಯುತ್ ಕ್ರಮಗಳನ್ನು ತಿರುವಗೊಳಿಸಿ ಹೊಸ ಕಮಗಳನ್ನು ಅಳವಡಿಸಬೇಕು ಹಾಗೂ ರೈತರ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಚರಂಡಿ ವ್ಯವಸ್ಥೆಯನ್ನು ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಾ ಯತೀಂದ್ರ ಸಿದ್ರಾಮಯ್ಯ ಸ್ಥಳದಲ್ಲಿ ಇದ್ದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕರೆದು ರೈತರ ಗದ್ದುಗಳಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಅಲ್ಲದೆ ನಿಮ್ಮ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತಾನೆ ಎಂದು ಭರವಸೆ ನೀಡಿದರು

ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂದನ್ ಬಾಬು ಜಿ. ಪಂ ಮಾಜಿ ಸದಸ್ಯದ ದಯಾನಂದ ಮೂರ್ತಿ ರೇವಮ್ಮ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ಕಲ್ಮಳ್ಳಿ ಸುರೇಶ ಬಾಬು ಹುಳಿಮಾವು ನಟರಾಜು ತಾಲೂಕು ಕುರುಬ ಸಮಾಜದ ಮುಖಂಡ ಕೆಂಪಣ್ಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆ ಎಸ್ ಹುಂಡಿ ನಂಜಯ್ಯ ಕೆಎಸ್ ರವಿ ಗ್ರಾಮದ ಮುಖಂಡರಾದ ಪದ್ಮ ಪಾಣಿ ರಮೇಶ್ ಹೆಜ್ಜೆಗೆ ಭಾಸ್ಕರ್ ಪುಟ್ಟಣ್ಣ ಮಡಿವಾಳ ಸಮಾಜದ ಮುಖಂಡ ಪ್ರಸನ್ನ ಗೋಪಾಲಕೃಷ್ಣ ಗಿರೀಶ್ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿ ವಿಜಯಕುಮಾರ್ ಆಪ್ತ ಸಹಾಯಕರಾದ ಶಿವ ಸ್ವಾಮಿ ಪ್ರದೀಪ್ ಕುಮಾರ್ ಮುಖಂಡರಾದ ನಗರ್ಲೆ ಮನು ಶಿವಮೂರ್ತಿ ಪ್ರಜ್ವಲ್ ಅಡಕನಹಳ್ಳಿ ಮಾದಪ್ಪ ಗ್ಯಾರಂಟಿ ಯೋಜನೆಯ ಸದಸ್ಯ ರವಿ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಧಿಕಾರಿ ಜರಾಲ್ಡ್ ರಾಜೇಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಕಾರ್ಯದರ್ಶಿ ಮನ್ನೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಹಾಜರಿದ್ದರು

WhatsApp

Join Now

Telegram

Join Now

Instagram

Join Now