ವಿಜಯ ದರ್ಪಣ ನ್ಯೂಸ್…..
ಸಾಂಪ್ರದಾಯಿಕ , ಭಕ್ತಿ ಭಾವದಿಂದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ

ಶಿಡ್ಲಘಟ್ಟ : ಸಮಾಜದಲ್ಲಿ ಸಾಕಷ್ಟು ಹಣವಿದ್ದರೂ ಜನರಲ್ಲಿ ನೆಮ್ಮದಿ ಇಲ್ಲದಿರುವುದಕ್ಕೆ ಧರ್ಮದ ತಳಹದಿಯ ಕೊರತೆಯೇ ಕಾರಣ, ಕೇವಲ ಹಣದಿಂದ ಆರೋಗ್ಯವನ್ನಾಗಲಿ ಅಥವಾ ಜ್ಞಾನವನ್ನಾಗಲಿಕೊಳ್ಳಲು ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಮಠದ ಶ್ರೀ ಪೂರ್ಣಾನಂದ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿಯ ಶ್ರೀಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಲಕ್ಷ್ಮೀ ಪೂಜಾ ಸಮಿತಿ ಹಾಗೂ ಬೆಳ್ಳೂಟಿ ಪ್ರಗತಿ ಬಂಧು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ‘ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ’ ಪೂಜಾ ಕೈಂಕರ್ಯಗಳಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ನಾವು ಮಾಡುವ ಲಕ್ಷ್ಮಿ ಪೂಜೆಯು ಸಾರ್ಥಕವಾಗಬೇಕಾದರೆ ನಮ್ಮ ಸಂಪತ್ತು ಧರ್ಮದ ಹಾದಿಯಲ್ಲಿ ಬಂದಿರಬೇಕು,ಭಗವಂತನ ಅನುಗ್ರಹವಿದ್ದರೆ ಮಾತ್ರ ಆರೋಗ್ಯ, ಶಾಂತಿ ಮತ್ತು ಮತ್ತು ಸಮೃದ್ಧಿ ನೆಲೆಸಲು ನೆಲೆಸ ಸಾಧ್ಯ ಎಂದು ಹೇಳಿದರು.
ಮನುಷ್ಯನ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು ಪ್ರಮುಖವಾಗಿವೆ ಇದರಲ್ಲಿ ಧರ್ಮದ ಹಾದಿಯಲ್ಲಿ ಗಳಿಸಿದ ಸಂಪತ್ತು (ಅರ್ಥ) ಮಾತ್ರ ನಮಗೆ ನಿಜವಾದ ಸುಖ ಮತ್ತು ಶಾಂತಿಯನ್ನು ನೀಡಲು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರವು ದಾನ, ಆರೋಗ್ಯ ಮತ್ತು ವಿದ್ಯಾ ದಾನದ ಮೂಲಕ ಲೋಕ ಕಲ್ಯಾಣ ಮಾಡುತ್ತಿದೆ ಎಂದು ಶ್ಲಾಘನೀಯ ಮಾತುಗಳನ್ನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಪ್ರಸಾದ್ ಮಾತನಾಡಿ ಗ್ರಾಮಾಂತರ ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕ್ ಮತ್ತು ಗ್ರಾಮೀಣ ಸಂಘಟನೆಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ವೇಳೆ ಡಾ॥ ಡಿ. ಶ್ರೀವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಈ ಪೂಜಾ ಕಾರ್ಯದಲ್ಲಿ ನೂರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ಮಹಾಲಕ್ಷ್ಮಿಯ ಪೂಜೆಯನ್ನು ನೆರವೇರಿಸಿದರು,ಗ್ರಾಮದ ಸುಭಿಕ್ಷೆ ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು, ವೇದಿಕೆಯಲ್ಲಿರುವ ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಮೂಹಿಕ ಶ್ರೀಲಕ್ಷ್ಮೀ ಪೂಜಾ ವ್ಯವಸ್ಥಾಪನಾ ಸಮಿತಿ ಬೆಳ್ಳೂಟಿ ವ್ಯಾಪ್ತಿಯ ಅಧ್ಯಕ್ಷರಾದ ಹಿತ್ತಲಹಳ್ಳಿ ಕೆ.ಸುರೇಶ್,ಕೆ.ಎಂ. ಎಫ್. ಮಾಜಿ
ನಿರ್ದೇಶಕರಾದ ಶ್ರೀನಿವಾಸ್ ರಾಮಯ್ಯ,ರೈತ ಸಂಘದ ಮುಖಂಡರಾದ ಬೆಳ್ಳೂಟಿ ಮುನಿಕೆಂಪಣ್ಣ,
ಯೋಗ ಶಿಕ್ಷಕರಾದ ಆನೂರು ಶ್ರೀನಿವಾಸ್,ಸುಗಟೂರು ನಾಗೇಶ್, ಹುಜುಗೂರು ಬಚ್ಚೇಗೌಡ,ದೇವರಾಜ್, ಲಕ್ಷ್ಮೀದೇವಮ್ಮ, ಕಲ್ಪನಾ ಮುನಿರಾಜು,ಹೆಚ್.ಕೆ. ನಾಗೇಶ್‌ಗೌಡ, ಚಿಕ್ಕಣ್ಣ,ಬೆಳ್ಳೂಟಿ ವಲಯದ ಮೇಲ್ವಿಚಾರಕಿ ಮೇಘನಾ,ರಾಮಚಂದ್ರ,ಹಾಗೂ ನೂರಕ್ಕೂ ಹೆಚ್ಚು ಮಹಿಳೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.









