ವಿಜಯ ದರ್ಪಣ ನ್ಯೂಸ್…..
ಸಂಘದ ಅಧ್ಯಕ್ಷರನ್ನು ಬಿಟ್ಟು ಉದ್ಘಾಟನೆ ಮಾಡಿ ತೆರಳಿದ ಸಚಿವ ಕೆ ಹೆಚ್ ಮುನಿಯಪ್ಪ

ದೇವನಹಳ್ಳಿ : ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಸರಿಯಾದ ಸಮಯಕ್ಕೆ ಬಂದು ಉದ್ಘಾಟಿಸಿದ್ದಾರೆ, ಆದರೆ ತರಾತುರಿಯಲ್ಲಿ ಸಂಘದ ಅಧ್ಯಕ್ಷರನ್ನು ಬಿಟ್ಟು ಉದ್ಘಾಟನೆ ಮಾಡಿ ತೆರಳಿದ್ದಾರೆ.
ಅಧಿವೇಶನವಿರುವ ಕಾರಣ ಬೇಗ ಆಗಮಿಸಿ ಉದ್ಘಾಟಿಸಿ ಹೊರಟಿದ್ದಾರೆ, ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೇ ಉದ್ಘಾಟಿಸಿದ್ದು ಕೆಲಕಾಲ ಗೊಂದಲ ಸೃಷ್ಟಿಯಾಗಿ ಮಾತಿನ ಚಕಮಕಿ ನಡೆದು ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.
ಈ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ ಸಂಘಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಎದ್ದು ಹೊರನಡೆದರು.ಒಟ್ಟಿನಲ್ಲಿ ಸಂಘದ ಎರಡನೇ ಅಂತಸ್ತಿನ ಕಟ್ಟಡ ಉದ್ಘಾಟನೆಗೆ ಅಧ್ಯಕ್ಷರನ್ನು ಕಡೆಗಣಿಸಿ ಮಾಡಿರುವುದು ಸಾರ್ವಜನಿಕ ವಲಯದಲ್ಲೂ ಸಹ ಬೇಸರ ವ್ಯಕ್ತವಾಗಿದೆ.










