ವಿಜಯ ದರ್ಪಣ ನ್ಯೂಸ್…
ಇಂದು ಚಿಂತಕ ಆನಂದ್ ಕುಮಾರ್ ಜಿ.ಅವರ” ಕರುನಾಡ ಕಂದ” ಕೃತಿ ಲೋಕಾರ್ಪಣೆ

ಬೆಂಗಳೂರು : ಪತಂಜಲಿ ಯೋಗಾಶ್ರಮ ಟ್ರಸ್ಟ್ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಸಂಯುಕ್ತ ಆಶ್ರಯದಲ್ಲಿ ದಿನಾಂಕ 16.08.2026 ಭಾನುವಾರ ಬೆಳಗ್ಗೆ 9=30 ಗಂಟೆಗೆ ಯುವಕವಿ, ಚಿಂತಕ ಕನಕಪುರದ ಆನಂದ್ ಕುಮಾರ್ ಜಿ ಅವರ ಕರುನಾಡ ಕಂದ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ, ಉಪನ್ಯಾಸ , ಗುರುವಂದನೆ ಸಮಾರಂಭವು ಬೆಂಗಳೂರಿನ ವಿಜಯನಗರದ 17 ನೇ ಕ್ರಾಸ್ ನಲ್ಲಿ ಇರುವ ರೂಪಾಲಿ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ.ಹೇಮಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಸಂಸ್ಥಾಪಕರು, ರಾಷ್ಟ್ರೀಯ ಮಟ್ಟದ ಯೋಗ ಗುರೂಜಿ ಶ್ರೀ ಶ್ರೀ ಪ್ರಕಾಶ್ ಯೋಗಿ ಗುರೂಜಿ ದಿವ್ಯ ಸಾನಿಧ್ಯ ವಹಿಸಿ ನಡೆಸಿ ಕೊಡಲಿರುವ ಈ ಕಾರ್ಯಕ್ರಮವು, ಸಾಂಸ್ಕೃತಿಕ ಚಿಂತಕ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿಸಿರಾ ಕೃತಿ ಲೋಕಾರ್ಪಣೆ ಮಾಡುವರು, ಸಮಾರಂಭವನ್ನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ವೀಣಾ ಎನ್.ವಿನೋದ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ದಾಸ ಸಾಹಿತ್ಯ ಸಂಶೋಧಕರು, ವಿಜಯ ಕಾಲೇಜಿನ ಪ್ರಾಧ್ಯಾಪಕ ಡಾ.ಆರ್.ವಾದಿರಾಜ್ ವಹಿಸುವರು. ಕೃತಿ ಕುರಿತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿಗಳಾದ ಕೂ.ಗಿ.ಗಿರಿಯಪ್ಪ, ಶಿಕ್ಷಕ, ಸಾಹಿತಿ ಗುಂಡೀಗೆರೆ ವಿಶ್ವನಾಥ್ ಮಾತನಾಡುವರು.ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞರಾದ ಡಾ.ವಿ.ರಘು, ಸಂಸ್ಕೃತ ವಿ.ವಿಯ ಪ್ರಾಧ್ಯಾಪಕರಾದ ಡಾ. ಪ್ರಭುಸ್ವಾಮಿ, ಪ್ರಖ್ಯಾತ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









