ವಿಜಯ ದರ್ಪಣ ನ್ಯೂಸ್…..
ವಿಜೃಂಭಣೆಯಿಂದ ನಡೆದ ಶ್ರೀ ಕರಗದಮ್ಮ ಹೂವಿನ ಕರಗ ಮಹೋತ್ಸವ

ಶಿಡ್ಲಘಟ್ಟ : ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ಕರಗದಮ್ಮ ದೇವಿಯ ಐತಿಹಾಸಿಕ ಹೂವಿನ ಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ದೇವಾಲಯವನ್ನು ವಿವಿಧ ವಿದ್ಯುತ್ ದೀಪ ಹಾಗೂ ವಿಶೇಷ ಹೂವುಗಳಿಂದ
ಅಲಂಕರಿಸಲಾಗಿತ್ತು ,ಪೂಜಾ ಕಾರ್ಯಗಳು ಮಹಾ ಮಂಗಳಾರತಿ ಮಾಡಿ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು,ಸಂಪ್ರದಾಯದಂತೆ ಪೂಜೆ ಪುನಸ್ಕಾರ ನೆರವೇರಿಸಿದ ನಂತರ ಹೂವಿನ ಕರಗಕ್ಕೆ ಚಾಲನೆ ನೀಡಲಾಯಿತು.
ಕೋಲಾರದ ರಾಜಕಲ್ಲಹಳ್ಳಿಯ ಪ್ರತಾಪ್ ಅವರು ಕರಗ ಹೊತ್ತು ಭಕ್ತಿ ಭಾವದಿಂದ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ, ನಂತರ ನಗರದ ಪ್ರಮುಖ ಬೀದಿಗಳಲ್ಲೂ ಸಂಚರಿಸಿದರು. ಕರಗ ಬರುವ ಹೊತ್ತಿಗೆ ಮನೆ ಮುಂದೆ ಆವರಣ ಸ್ವಚ್ಛಗೊಳಿಸಿ ರಂಗೋಲೆ ಬಿಡಿಸಿ ಭಕ್ತಿಭಾವದಿಂದ ಕರಗವನ್ನು ಬರ ಮಾಡಿಕೊಂಡು ಪೂಜೆ ಸಲ್ಲಿಸಿದರು.
ಕರಗದಿಂದ ಬಿದ್ದ ಮಲ್ಲಿಗೆ ಹೂ ಕಣ್ಣಿಗೆ ಒತ್ತಿಕೊಂಡು ತಲೆಗೆ ಮುಡಿದುಕೊಂಡರು, ಕರಗದ ಪ್ರಯುಕ್ತ ನಗರದ ಅಶೋಕ ರಸ್ತೆ, ಶಾಮಣ್ಣ ಬಾವಿ ರಸ್ತೆ ಸೇರಿದಂತೆ ಹಲವು ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಹೂವಿನ ವೃತ್ತ ಸೇರಿದಂತೆ ಮುತ್ತೂರು ಬೀದಿಯ ದೇವಾಲಯ ಬಳಿ ಕರಗದ ಪ್ರಯುಕ್ತ ವಾದ್ಯಗೋಷ್ಠಿ, ರಸ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಂಗಾನಾಚ್ ಹಾಗೂ ಅಶ್ಲೀಲ ಭಂಗಿಗಳ ನೃತ್ಯ ಪ್ರದರ್ಶನವನ್ನು ಕಂಡು ಮುಜುಗರ ಪಟ್ಟ ಮಹಿಳೆಯರು

ಶಿಡ್ಲಘಟ್ಟ : ಶ್ರೀಕರಗದಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಂತರ ಹೂವಿನ ಕರಗವನ್ನು ಭಕ್ತಿಬಾವದಿಂದ ವೀಕ್ಷಿಸಿ ಆರ್ಕೇಸ್ಟ್ರಾ ನೋಡಲೆಂದು ಬಂದ ಮಹಿಳೆಯರು ಮಕ್ಕಳು, ಹಿರಿಕಿರಿಯರು ಈ ನಂಗಾನಾಚ್ ಹಾಗೂ ಅಶ್ಲೀಲ ಭಂಗಿಗಳ ನೃತ್ಯ ಪ್ರದರ್ಶನವನ್ನು ಕಂಡು ಮುಜುಗರ ಪಟ್ಟರು.
ನಗರದಲ್ಲಿ ಶ್ರೀಕರಗದಮ್ಮದೇವಿ 66 ನೇ ಐತಿಹಾಸಿಕ ಹೂವಿನ ಕರಗದ ಪ್ರಯುಕ್ತ ಹೂವಿನ ವೃತ್ತದಲ್ಲಿನ ಶ್ರೀನಗರೇಶ್ವರಸ್ವಾಮಿ ದೇವಾಲಯದ ಮುಂದೆ ಆಯೋಜಿಸಿದ್ದ ಆರ್ಕೇಸ್ಟ್ರಾದಲ್ಲಿ ಅಶ್ಲೀಲ ನೃತ್ಯ ಎಗ್ಗಿಲ್ಲದೆ ನಡೆದವು.
ಶ್ರೀಕರಗದಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಪ್ರಯುಕ್ತ, ಕರಗದಮ್ಮ ದೇವಿಯ ಆಯೋಜಕರ ಬಳಗ, ತುಮಕೂರು ಮೂಲದ ಆರ್ಕೇಸ್ಟ್ರಾವನ್ನು ಕರೆಸಲಾಗಿತ್ತು.
ಆರ್ಕೇಸ್ಟ್ರಾ ತಂಡದವರು ನೆರೆದಿದ್ದ ಜನಸ್ತೋಮದ ಮುಂದೆ ಅಶ್ಲೀಲ ನೃತ್ಯ ಪ್ರದರ್ಶಿಸಿದ್ದು, ನೆರೆದಿದ್ದ ಜನಸ್ತೋಮ ತಲೆತಗ್ಗಿಸುವಂತಾಗಿತ್ತು ,ಧಾರ್ಮಿಕ ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದು ಸರಿಯಲ್ಲ ಎಂದು ಆಯೋಜಕರ ವಿರುದ್ಧ ಸ್ಥಳೀಯರು ಹಾಗು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.










