--Ads--

ತಾಂಡವಪುರಗ್ರಾಮದಲ್ಲಿ  ಉದ್ಯೋಗ ಮೇಳದಲ್ಲಿ  ನಿರುದ್ಯೋಗಿ ಯುವಕರು ಯುವತಿಯರು ನೋಂದಣಿ

On: April 3, 2026 12:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ತಾಂಡವಪುರಗ್ರಾಮದಲ್ಲಿ  ಉದ್ಯೋಗ ಮೇಳದಲ್ಲಿ  ನಿರುದ್ಯೋಗಿ ಯುವಕರು ಯುವತಿಯರು ನೋಂದಣಿ

ತಾಂಡವಪುರ ಏಪ್ರಿಲ್ 2 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿಗ್ರಾಮದಲ್ಲಿ ಹಾಗೂ ತಾಂಡಮಾಪುರ ಗ್ರಾಮದಲ್ಲಿ ಮಿನಿ ಉದ್ಯೋಗ ಮೇಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ

ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರಾದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ನಿರುದ್ಯೋಗಿ ಯುವಕರು ಯುವತಿಯರು ಹಾಗೂ ತಾಂಡವಪುರ ತಾಂಡವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ವ್ಯಾಪ್ತಿಯ ಗ್ರಾಮಗಳ ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೊಂದಾಯಿಸಿಕೊಂಡರು

ಈ ಭಾಗದಲ್ಲಿ ಉದ್ಯೋಗ ಸಮಸ್ಯೆ ಸಾಕಷ್ಟಿದ್ದು ಉದ್ಯೋಗ ಮೇಳವನ್ನು ಕ್ಷೇತ್ರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರು ಆದ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರ ಸೂಚನೆ ಮೇರೆಗೆ ಈ ಮಹತ್ವಕಾಂಕ್ಷೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಈ ಉದ್ಯೋಗ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿ ಯುವಕರು ಯುವತಿಯರು ಪಾಲ್ಗೊಳ್ಳುವಂತೆ ತಾವೆಲ್ಲರೂ ಶ್ರಮವಹಿಸಬೇಕು ಇದರ ಸೌಲಭ್ಯವನ್ನು ನಿರುದ್ಯೋಗಿ ಯುವಕರು ಯುವತಿಯರು ಪಡೆದುಕೊಳ್ಳುವಂತೆ ಮಾಡಬೇಕು ಎಂದು ಪ್ರಚಾರ ಮತ್ತು ಮನವಿ ಮಾಡಿದ ಹಿನ್ನೆಲೆಯಲ್ಲಿ ಯುವಕರು ಮತ್ತು ಯುವತಿಯರು ಉದ್ಯೋಗಕ್ಕಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಇನ್ನು ಹೆಚ್ಚಿನ ನಿರುದ್ಯೋಗಿ ಯುವಕರು ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದ್ದು ಅಂತ ನಿರುದ್ಯೋಗಿ ಯುವಕರು ಯುವತಿಯರು ಗ್ರಾಮ ಪಂಚಾಯತಿಯ ಕಚೇರಿಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾದ ಸಿಹಿ ಪ್ರಕಾಶ್ ರವರು ಹಾಗೂ ಕಾರ್ಯದರ್ಶಿಗಳಾದ ಮನ್ನೆಗೌಡ ಕೆಕೆ ಮರಯ್ಯ ರವರು ಮನವಿ ಮಾಡಿದರು
ಈ ಮಿನಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಕಾಶ್ ಸಿ ಪ್ರಕಾಶ್ ಕಾರ್ಯದರ್ಶಿಗಳಾದ ಕೆಕೆ ಮರಯ್ಯ ಮನ್ನೇಗೌಡ ಲೆಕ್ಕ ಸಹಾಯಕರಾದ ಎಸ್ ಪುಟ್ಟರಾಜು ಹಾಗೂ ಕೌಸಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now