--Ads--

ಏ.೧೯, ೨೦ರಂದು ಅದ್ಧೂರಿ ಬಸವ ಜಯಂತಿ ಆಚರಣೆ

On: April 17, 2026 5:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಏ.೧೯, ೨೦ರಂದು ಅದ್ಧೂರಿ ಬಸವ ಜಯಂತಿ ಆಚರಣೆ

ತಾಂಡವಪುರ ಏಪ್ರಿಲ್ 17 ಬಸವ ಬಳಗಗಳ ಒಕ್ಕೂಟ ಮೊದಲಾದವುಗಳ ಸಂಯುಕ್ತಾಶ್ರಯದಲ್ಲಿ ಏ.೧೯ ಮತ್ತು ೨೦ರಂದು ನಗರದ ಕಲಾ ಮಂದಿರದಲ್ಲಿ ನಮ್ಮ ಬಸವಣ್ಣ ಸಾಂಸ್ಕೃತಿಕ ನಾಯಕ ಶೀರ್ಷಿಕೆ ಅಡಿಯಲ್ಲಿ ಬಸವ ಜಯಂತಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ೧೯ ರ ಬೆಳಗ್ಗೆ ೮.೩೦ಕ್ಕೆ ಜಗದ್ಗುರು ಶಿವರಾತ್ರಿ ರಾಜೇಂದ್ರ ವೃತ್ತದಿಂದ ಭವ್ಯ ಮೆರವಣಿಗೆ ಹೊರಟು ಕಲಾ ಮಂದಿರ ತಲುಪಲಿದೆ. ಮಧ್ಯಾಹ್ನ ೧ಕ್ಕೆ ಕಲಾ ಮಂದಿರದ ಬಳಿ ಆರೋಗ್ಯ ತಪಾಸಣಾ ಶಿಬಿರ ಇರಲಿದೆ. ೧.೩೦ಕ್ಕೆ ವಚನ ಚಿತ್ರ ಪ್ರದರ್ಶನ, ೨ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ. ಇವುಗಳಲ್ಲಿ ಗಣ್ಯಾತಿ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

೨೦ ರ ಬೆಳಗ್ಗೆ ೯.೩೦ಕ್ಕೆ ನೂತನ ಡಿಸಿ ಕಚೇರಿ ಮುಂಭಾಗ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ೧೦.೩೦ಕ್ಕೆ ಕಲಾ ಮಂದಿರದಲ್ಲಿ ಬಸವ ಜಯಂತಿ ಹಾಗೂ ರಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್,  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ ಇನ್ನಿತರರು ಉಪಸ್ಥಿತರಿರುವರು.

ಮಧ್ಯಾಹ್ನ ೨ಕ್ಕೆ ವಿಚಾರಗೋಷ್ಠಿ, ಸಂಜೆ ೫ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು. ಜಿ.ಎಂ.ಜೈಶಂಕರ್ ಜೀಮಾರಹಳ್ಳಿ, ಕೆ.ವಿ.ಮಲ್ಲೇಶ್, ಹರೀಶ್, ಆಯರಹಳ್ಳಿ ಪಿ.ವಿರೂಪಾಕ್ಷ, ದೇವರಾಜು ಪಿ. ಚಿಕ್ಕಹಳ್ಳಿ, ದಾರಿಪುರ ಡಿ. ಚಂದ್ರಶೇಖರ್ ಇದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮೈಸೂರಿನ ಪೌರಕಾರ್ಮಿಕ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದೆ. ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್

ಪಕ್ಷ ಸಂಘಟನೆಗೆ ಸಹಕಾರ ನೀಡಿ: ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಬಿ ಬಸವಣ್ಣ

ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ 

GFF 2026ರಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು DFS ಕಾರ್ಯದರ್ಶಿಯವರು ನವೀನ ಉಪಕ್ರಮಗಳನ್ನು ಅನಾವರಣ

ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಸಮಾಲೋಚನೆ ಸಭೆ ನಡೆಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ  ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಆನಂದ್ ಸಿ. ತಿರುಮಲ  ಆಯ್ಕೆ