--Ads--

ಭಾಗ್ಯನಗರದಲ್ಲಿ ಅದ್ದೂರಿ ಪತ್ರಿಕಾ ದಿನಾಚರಣೆ

On: May 20, 2026 7:20 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಭಾಗ್ಯನಗರದಲ್ಲಿ ಅದ್ದೂರಿ ಪತ್ರಿಕಾ ದಿನಾಚರಣೆ

ಬಾಗೇಪಲ್ಲಿ: ಪಟ್ಟಣದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಡಿ.ವಿ.ಜಿ ರಸ್ತೆಯಲ್ಲಿರುವ ನಂದಗೋಕಲ್ ಹೋಟಲ್ ಮೇಲ್ಬಾಗದಲ್ಲಿನ ಬೃಂದಾವನ ಬ್ಯಾಂಕ್ವೆಟ್ ಹಾಲ್ ನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆಮಲ್ಲಿಕಾರ್ಜನ್  ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದರು. ಅವರು ಮಾತನಾಡಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ ನೂತನ ಅಧ್ಯಕ್ಷ ಬಿ.ಎ.ಬಾಬಾಜಾನ್ ರವರ ಅಧ್ಯಕ್ಷ ತೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿರುವುದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ. ಪತ್ರಕರ್ತರ ಪರವಾಗಿ ಅವರಿಗೆ ಸರ್ಕಾರಗಳು ಹಲವಾರು ಸೌಲಭ್ಯಗಳಿಗಾಗಿ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ನಂತರ ಜೈ ಫೌಂಡೇಶನ್ ಅಧ್ಯಕ್ಷ ಜಯಕುಮಾರ್ ರವರು ಮಾತನಾಡಿ, ಪತ್ರಕರ್ತರ ಯಾವುದೇ ಕಾರ್ಯಕ್ರಮಗಳಿಗೆ ನಾನು ಭಾಗವಹಿಸುತ್ತೆನೆ. ಏಕೆಂದರೆ ನಾನು ಒಬ್ಬ ಪತ್ರಕರ್ತನಾಗಿ ಸೇವೆ ಸಲ್ಲಿಸಿದ್ದೆನೆ.  ಬಾಗೇಪಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪತ್ರಕರ್ತರಿಗೆ 10 ಲಕ್ಷ ಜೀವವಿಮೆ ಬಾಂಡ್ ನೀಡುತ್ರಿರುವುದು ತುಂಬ ಉತ್ತಮ ಕಾರ್ಯವಾಗಿದೆ. ಜೊತೆಗೆ ಪತ್ರಿಕಾ ವಿತರಕರಿಗೆ ಲೆಬರ್ ಕಾರ್ಡ್ ನೀಡುತ್ತಿರುವುದರಿಂದ ಕಷ್ಟ ಕಾಲದಲ್ಲಿ ಅವರಿಗೆ ಉಪಯೋಗವಾಗುತ್ತದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಎಲ್ಲಾ ಪತ್ರಕರ್ತ ಮತ್ತು ಮಾಧ್ಯಮ ಮಿತ್ರರರಿಗೆ ನಮ್ಮ ಫೌಂಡೇಶನ್ ವತಿಯಿಂದ ಇದೇ ರೀತಿಯಲ್ಲಿ ಪತ್ರಕರ್ತರಿಗೆ ಜೀವವಿಮೆ ಬಾಂಡ್ ಗಳನ್ನು ವಿತರಿಸಲಾಗುವುದು ಎಂದರು. ನಂತರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು ಮಾತನಾಡಿ ನೂತನ ಅಧ್ಯಕ್ಷ ಬಿ.ಎ.ಬಾಬಾಜಾನ್  ಕನ್ನಡಪರ ಹೋರಾಟಗಾರಾಗಿ ಹಲವಾರು ಹೋರಾಟಗಳನ್ನು ಕನ್ನಡಪರ ಕಾರ್ಯಕ್ರಮಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಅವರು ಪತ್ರಕರ್ತರ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ಮಾಡಿ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆ ನನಗಿದೆ. ಏಕೆಂದರೆ ಅವರು ಹೋರಾಟದಿಂದಲೇ ಗುರುತ್ತಿಸಿಕೊಂಡವರು ಎಂದರು.

ಕಾರ್ಯಕ್ರಮದಲ್ಲಿ ಪತ್ರಿಕಾದಿನಾಚರಣೆ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ  ಸಂಘಟನೆಯ ಸದಸ್ಯರಾಗಿರುವ ಪತ್ರಕರ್ತರಿಗೆ 10 ಲಕ್ಷ ರೂಪಾಯಿಗಳ ಜೀವವಮೆ ಬಾಂಡ್ ನೀಡಲಾಯಿತ್ತು. ಪತ್ರಿಕಾ ವಿತರಕರಿಗೆ ಉಚಿತವಾಗಿ ಲೆಬರ್ ಕಾರ್ಡ್ ಗಳನ್ನು ನೀಡಲಾಯಿತ್ತು. ಹಿರಿಯ ಪತ್ರಕರ್ತರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತ್ತು..

ಜೊತೆಗೆ ಕೆಲ ತಿಂಗಳ ಹಿಂದೆ ಅಪಘಾತದಲ್ಲಿ ಮರಣಹೊಂದಿದ್ದ ಯುವ ಪತ್ರಕರ್ತ ಮಾಡಪಲ್ಲಿ ನರಸಿಂಹಮೂರ್ತಿ ರವರ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತ್ತು.

ನಂತರ ನೂತನ ಅಧ್ಯಕ್ಷ ಬಿ.ಎ.ಬಾಬಾಜಾನ್ ರವರಿಗೆ ಗಣ್ಯರಿಂದ ಸನ್ಮಾನಿಸಿ ಶುಭಕೋರಿದ್ದರು. ಹಾಜರಿದ್ದ ನೂರಾರು ಜನರಿಗೆ ಓಬ್ಬಟ ಊಟವನ್ನು, ಬಿಸ್ಕತ್ತು. ತಂಪು ಪಾನೀಯಗಳನ್ನು ನೀಡಲಾಯಿತ್ತು,

ಕವಿಗಳು ,ಸಾಹಿತಿಗಳಿಂದ ಕವಿಗೋಷ್ಠಿ ಮಾಡಲಾಯಿತು, ಹಾಸಿನಿ ತಂಡದಿಂದ ಸುಂದರ ನೃತ್ಯ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರೈತಸಂಘ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ದಲಿತ ಮುಖಂಡ ಬಿ.ವಿ.ವೆಂಕಟರವಣ, ಕಸಪಾ ಅಧ್ಯಕ್ಷ ಚಿನ್ನಿ ಕೈವಾರಮಯ್ಯ, ಕಾನಿಪ ಜಿಲ್ಲಾ ಅಧ್ಯಕ್ಷ ಮುದ್ದುಕೃಷ್ಣ, ಕರವೇ ಅಧ್ಯಕ್ಷ ಹರೀಶ್,ರೈತ ಸಂಘ ಜಿಲ್ಲಾಧ್ಯಕ್ಷರಾದ ಗೋವಿಂದರೆಡ್ಡಿ, ಗುಡಿಬಂಡೆ ಅಂಬಿಕಾಸುದರ್ಶನ್, ರೈತ ಸಂಘ ತಾಲ್ಲೂಕು ಅಧ್ಯಕ್ಷ ಈಶ್ವರರೆಡ್ಡಿ, ರೈತಸಂಘ ರಾಜ್ಯ ಮುಖಂಡ ಹೆಬ್ಬರಿಮುನಿಯಪ್ಪ, ಸುಮನ್ ಟಿವಿ ಬಾಲಾಜಿ, ವೈದ್ಯ ಮುಭಾರಕ್, ಕಾನಿಪ್ಪ ಧ್ವನಿ ಜಿಲ್ಲಾ ಮುಖಂಡ ಪುಟ್ಟರಂಗಯ್ಯ, ನರಸಿಂಹಮೂರ್ತಿ, ಹಾಗೂ ಜಿಲ್ಲೆಯ ಕಾನಿಪ ಧ್ವನಿಯ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರುಹಾಜರಿದ್ದರು.

WhatsApp

Join Now

Telegram

Join Now

Instagram

Join Now