ವಿಜಯ ದರ್ಪಣ ನ್ಯೂಸ್…..
ವಿಜಯಾನಂದ್ ಕಾಶಪ್ಪನವರ್ ಸಚಿವ ಸ್ಥಾನ: ವೀರಶೈವ ಲಿಂಗಾಯಿತ- ಪಂಚಮಸಾಲಿ ಸಮಾಜ ಒತ್ತಾಯ

ಬೆಂಗಳೂರು: ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘ ಮತ್ತು ವಿಜಯಾನಂದ್ ಎಸ್.ಕಾಶಪ್ಪನವರ್ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ನೂತನ ಸಚಿವ ಸಂಪುಟದಲ್ಲಿ ಪಂಚಮಸಾಲಿ ಲಿಂಗಾಯಿತ ಸಮಾಜದ ನೇರ ನುಡಿಯ, ಯುವ ನಾಯಕ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸಂಪುಟದಲ್ಲಿ ನೇಮಕ ಮಾಡುವಂತೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವರಾಜ್ ಡಿಂಡೂರ, ರಾಜ್ಯ ಉಪಾಧ್ಯಕ್ಷ ಶಂಕರ ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಉಮಾಪತಿ, ವೀರಶೈವ ಸಮಾಜದ ಮುಖಂಡರುಗಳಾದ ಶಿವಕುಮಾರ್ ಬೆಳಗಾಂ, ವೀರೇಶ್, ಎಂ.ಸಿದ್ದೇಶ್ ಬೇಗೂರು ಹೆಚ್.ಎನ್.ತಿಪ್ಪೇಸ್ವಾಮಿ, ಧರ್ಮದರ್ಶಿ ಪಿ.ಡಿ.ಶಿರೂರ್ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು
ಬಸವರಾಜ್ ಡಿಂಡೂರರವರು ಮಾತನಾಡಿ ಲಿಂಗಾಯಿತ ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ 1ಕೋಟಿ ಜನಸಂಖ್ಯೆ ಇದೆ. ನಮ್ಮ ಸಮಾಜ ಕೃಷಿ ಪ್ರಧಾನವಾಗಿದೆ. ಕಿತ್ತೂರು ಚೆನ್ನಮ್ಮ ಆದರ್ಶ ಪಾಲಿಸುತ್ತಾ ಬಂದಿದ್ದೇವೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಚಾಣಕ್ಯ ರಾಜಕಾರಣಿ.
ಲಿಂಗಾಯಿತ ಪಂಚಾಮಸಾಲಿ ಸಮುದಾಯಕ್ಕೆ ಯಾವ ಸರ್ಕಾರವು ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ ಎಂಬ ಬೇಸರವಿದೆ.ನಮ್ಮ ಅಗ್ರಹ 1 ಉಪಮುಖ್ಯಮಂತ್ರಿ ಎರಡು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡುತ್ತೇವೆ.
ವಿಜಯಾನಂದ್ ಕಾಶಪ್ಪನವರ್ ಅವರ ತಂದೆ, ತಾಯಿ ಶಾಸಕರಾಗಿದ್ದರು ಮತ್ತು ಅವರ ಶ್ರೀಮತಿ ವೀಣಾ ಕಾಶಪ್ಪನವರ್ ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಆರ್.ಪಾಟೀಲ್, ಹುಕ್ಕೇರಿ, ಎಂ.ವೈ ಪಾಟೀಲ್, ಆನೇಕ ಶಾಸಕರುಗಳು ಇದ್ದಾರೆ.
ಯುವಕರು, ಹೊಸತನ ಕೊಡಬೇಕು ಎಂದು ವಿಜಯಾನಂದ್ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಕೊಡಬೇಕು. ಸಮಾಜದ ಅಭಿವೃದ್ದಿಯ ಜೊತೆಯಲ್ಲಿ ನಮ್ಮ ಸಮುದಾಯವು ಅಭಿವೃದ್ಧಿಯಾಗುತ್ತದೆ.
ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಅಹವಾಲು ಸಲ್ಲಿಸಲಾಗಿದೆ ಉತ್ತಮ ಸ್ಪಂದನೆ ಸಿಕ್ಕಿದೇ, ಸೋನಿಯಗಾಂಧಿ ಮತ್ತು ರಾಹುಲ್ ಗಾಂಧಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.










