ವಿಜಯ ದರ್ಪಣ ನ್ಯೂಸ್….
ಕೈವಾರ ತಾತಯ್ಯನವರ ಮಠದಲ್ಲಿ ವಿಜೃಂಭಣೆಯಿಂದ ನಡೆದ ಹುಣ್ಣಿಮೆ ರಥೋತ್ಸವ

ಕೈವಾರ: ತಾಲ್ಲೂಕಿನ ಪುರಾಣ ಪ್ರಸಿದ್ಧ ಸುಕ್ಷೇತ್ರ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದಲ್ಲಿ ಅಧಿಕ ಜೇಷ್ಠ ಮಾಸದ ಹುಣ್ಣಿಮೆ ಅಂಗವಾಗಿ ಯೋಗಿ ನಾರೆಯನ ಯತಿಂದ್ರರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಯೋಗಿ ನಾರೆಯನ ಮಠದಲ್ಲಿ ಪ್ರಾಥ:ಕಾಲ ಘಂಟೆನಾದ, ಸುಪ್ರಭಾತದೊಂದಿಗೆ ಗೋಪೂಜೆಯನ್ನು ನೆರವೇರಿಸಲಾಯಿತು.
ಮುಂಜಾನೆ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಅಷ್ಟವಧಾನ ಸೇವೆ ವಿಶೇಷ ಪೂಜೆ, ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು. ತಾತಯ್ಯನವರ ಮೂರ್ತಿ ಮತ್ತು ಜೀವ ಸಮಾಧಿಯಾದ ಮೂಲ ಬೃಂದಾವನಕ್ಕೆ ಮಾಡಲಾದ ಹೂವಿನ ಅಲಂಕಾರ ಭಕ್ತರ ಕಣ್ಮನ ತನಿಸಿತು. ದೂರದ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಯತಿಂದ್ರರ ಮತ್ತು ಜೀವಸಾಮಾದಿಯಾದ ಮೂಲ ಬೃಂದಾವನದ ದರ್ಶನವನ್ನು ಪಡೆದುಕೊಂಡು ಪುನೀತರಾದರು. ನಾದ ಸ್ವರ, ಸಕಲ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತರು ಗೋವಿಂದ ಗೋವಿಂದ ಎಂಬ ನಾಮಸ್ಮರಣೆ ಮಾಡುತ್ತ ರಥ ಎಳೆದರು.
ಹುಣ್ಣಿಮೆ ದಿನ ಭಾನುವಾರ ರಜಾ ದಿನವಾಗಿದ್ದರಿಂದ ಸಾವಿರಾರು ಭಕ್ತರು ಕೈವಾರಕ್ಕೆ ಆಗಮಿಸಿ ಹುಣ್ಣಿಮೆಯ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ರಥೋತ್ಸವವನ್ನು ಕಣ್ಣುಂಬಿ ಕೊಂಡರೆ. ಶ್ರೀ ಮಠದ ಪ್ರಾಂಗಣ, ಅನ್ನದಾನ ಭವನ ಭಕ್ತರಿಂದ ತುಂಬಿ ತುಳುಕುತಿತ್ತು. ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಾದಸುಧಾರಸ ವೇದಿಕೆಯಲ್ಲಿ ಸಂಗೀತ ಮತ್ತು ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಮಠದ ಧರ್ಮಾಧಿಕಾರಿ ಡಾ. ಎಂ ಆರ್ ಜಯರಾಮ್, ಉಪಾಧ್ಯಕ್ಷ ವಿಭಾಕರ್ ರೆಡ್ಡಿ, ಖಜಾಂಚಿ ಸತ್ಯನಾರಾಯಣ್, ಸಂಕೀರ್ತಿನ ವೇದಿಕೆಯ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತ್ ಪ್ರವಚನಕಾರ ಆನಂದ್, ವ್ಯವಸ್ಥಾಪಕ ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.










