--Ads--

ಜಯಪುರ ಹೋಬಳಿಯಲ್ಲಿ ಅಕ್ರಮ ಮಧ್ಯ ಮಾರಾಟ ಚಿರತೆ ಹಾವಳಿ ಸೇರಿದಂತೆ ಸಮಸ್ಯೆಗಳದ್ದೇ ಸದ್ದು

On: June 3, 2026 4:55 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜಯಪುರ ಹೋಬಳಿಯಲ್ಲಿ ಅಕ್ರಮ ಮಧ್ಯ ಮಾರಾಟ ಚಿರತೆ ಹಾವಳಿ ಸೇರಿದಂತೆ ಸಮಸ್ಯೆಗಳದ್ದೇ ಸದ್ದು

ತಾಂಡವಪುರ ಜೂನ್ 3 ಮೈಸೂರ್ ತಾಲ್ಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಜಯಪುರ ಹೋಬಳಿಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಿರಿ, ಚಿರತೆ ಕಾಟ ತಪ್ಪಿಸಿ, ರಸಗೊಬ್ಬರಕ್ಕೆ ರೈತರ ಅಲೆದಾಟ ತಪ್ಪಿಸಿ ಹೀಗೆ ಬಹುತೇಕ ಜಯಪುರ ಹೋಬಳಿಗೆ ಸಂಬಂಧಿಸಿದ ಸಮಸ್ಯೆಗಳು ತಾಲ್ಲೂಕು ರೈತರ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿದವು.

ತಹಶೀಲ್ದಾರ್‌ ಕೆ.ಎಂ.ಮಹೇಶ್‌ ಕುಮಾರ್‌ ಅಧ್ಯಕ್ಷಯಲ್ಲಿ ಜಗನ್ ಜೀವನ್ ರಾಮ್ ಭವನದಲ್ಲಿ ಅಯೋಜಿಸಿದ್ದ ಸಾಮಾನ್ಯ ಕುಂದು ಕೊರತೆ ಸಭೆಯಲ್ಲಿ ಅನೇಕ ಸಮಸ್ಯೆಗಳು ಕೇಳಿಬಂದವು. ಜಯಪುರ ಹೋಬಳಿ ಗ್ರಾಮಗಳಲ್ಲಿ ತುಂಬಾ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಾಗಿ ರೈತರು ದೂರಿದರು. ಜತೆಗೆ ಜಯಪುರ ಹೋಬಳಿಯ ಗ್ರಾಮವೊಂದರ ಬಾಳೆ ಬೆಳೆ ಮಧ್ಯೆ ಚಿರತೆ ಕಾಣಿಸಿಕೊಂಡಿದೆ.

ಅರಣ್ಯ ಇಲಾಖೆ ಬೋನು ಇರಿಸಿದ್ದು, ಚಿರತೆ ಸಿಗದೇ ಬಾಳೆ ಕಟಾವು ಮಾಡಲು ಆಗದೇ ನಷ್ಟ ಅನುಭವಿಸುವಂತಾಗಿದೆ ಎಂದು ಅವಲತ್ತುಕೊಂಡರು. ಇನ್ನು ಮರ ಕಟಾವು ಸಂಬಂಧ ಮಧ್ಯವರ್ತಿಗಳಿಗೆ ಅವಕಾಶ ನೀಡದೇ ಬೆಳೆದಿರುವ ರೈತರೇ ಕಟಾವು ಮಾಡಲು ಅವಕಾಶ ನೀಡಬೇಕೆಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ ವರುಣ ಹೋಬಳಿಯ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವಂತೆ ಕೆಲವರು ಆಗ್ರಹಿಸಿದರು.

ಅಂತೆಯೇ ಕೆಲವು ಪಡಿತರದಾರರ ಬಯೋಮೆಟ್ರಿಕ್‌ ತೆಗೆದುಕೊಳ್ಳುತ್ತಿಲ್ಲ. ಕೆಲವರು ಬಯೋಮೆಟ್ರಿಕ್‌ ನೀಡಿದರೂ ಪಡಿತರ ನೀಡಲು ನಾಳೆ ಬನ್ನಿ ಎಂದು ಅಲೆಸುತ್ತಿರುವ ಬಗ್ಗೆ ದೂರಿದರು. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯುದ್ಧ ಸನ್ನಿವೇಶದ ನಡುವೆಯೂ ಅಗತ್ಯ ರಸಗೊಬ್ಬರ ಪೂರೈಕೆ ಮಾಡುವಂತೆ ಹಾಗೂ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ರೈತರು ಒತ್ತಾಯಿಸಿದರು.

ಕಬ್ಬು ಬೆಳಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜು ಮಾತನಾಡಿ ತಾಲೂಕಿನ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು ಸರಿಯಾದ ಸಮಯಕ್ಕೆ ರೋಗಿಗಳಿಗೆ ಸ್ಪಂದಿಸುತ್ತಿಲ್ಲ ಈ ವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್ ಮಾತನಾಡಿ ತಾಲ್ಲೂಕಿನಲ್ಲಿ ಭೂಕಬಳಿಕೆ ಮಾಡಿ ಪೋರ್ಜರಿ ದಾಖಲಾತಿ ಸೃಷ್ಟಿಸಿ ಕೊಂಡಿರುವ ಭೂ ಕಬಳಿಕೆದಾರರಿಗೆ ನ್ಯಾಯಾಲಯದಲ್ಲಿರುವ ಮೊಖದಮ್ಮೆಗಳನ್ನು ತಾಲ್ಲೂಕು ಆಡಳಿತ ಸರಿಯಾದ ಸಮಯಕ್ಕೆ ದಾಖಲೆಗಳನ್ನು ಒದಗಿಸಿ ನ್ಯಾಯಾಲಯಕ್ಕೆ ಕೊಟ್ಟು ಸರ್ಕಾರಿ ಆಸ್ತಿಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಇಒ ಕೃಷ್ಣ, ಕೃಷಿ ತಾಲ್ಲೂಕು ಅಧಿಕಾರಿ ಜಯರಾಮ್‌, ತಾಲ್ಲೂಕು ಎಸ್‌ಡಿಎ ಲತಾ, ನಾಗನಹಳ್ಳಿ ವಿಜಯೇಂದ್ರ,ಜಗದೀಶ್ ಸೂರ್ಯ, ನಾಗನಹಳ್ಳಿ ಚಂದ್ರಶೇಖರ್, ಅಂಕಪ್ಪ ನಾಗರಾಜು ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now