ಇನ್ಫೋಸಿಸ್ ನಾರಾಯಣಮೂರ್ತಿ ಕುಟುಂಬದವರಿಂದ ಸರ್ಕಾರಿ ಶಾಲೆಗಳಿಗೆ ಅಕ್ಷರದಾಸೋಹ
ಶಿಡ್ಲಘಟ್ಟ : ಇನ್ಫೋಸಿಸ್ ಸಂಸ್ಥಾಪಕರಾದ ಎನ್.ಆರ್.ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರು ತಮ್ಮ ಜನ್ಮಸ್ಥಳವಾದ ಶಿಡ್ಲಘಟ್ಟದಲ್ಲಿ ಜೂನ್ 1 ರಂದು “ಅಕ್ಷಯ ಪಾತ್ರೆ ಫೌಂಡೇಶನ್ ” ನ 81ನೇ ಶಾಖೆಯನ್ನು ಗೌಪ್ಯವಾಗಿ ಉದ್ಘಾಟಿಸಿದರು.
ಹಸಿವಿದ್ದಾಗ ವಿದ್ಯೆ ತಲೆಗೇರಲ್ಲ ಹಸಿವನ್ನು ನೀಗಿಸುವ ಉದ್ದೇಶದಿಂದ ತಾಲ್ಲೂಕಿನ ಸರ್ಕಾರಿ ಶಾಲೆಯ 3 ಸಾವಿರ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇನ್ಫೋಸಿಸ್ ನಾರಾಯಣಮೂರ್ತಿ ಅವರ ತಾಯಿ ಮತ್ತು ಸೋದರ ಮಾವನವರ ಸ್ಮರಣಾರ್ಥವಾಗಿ ಈ ವಿಶೇಷ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.