--Ads--

ಸುಗಟೂರು ಸರ್ಕಾರಿ ಶಾಲೆ ಹಸಿರು ಕ್ರಾಂತಿಯತ್ತ ! ‘ಬೀಜದುಂಡೆ’ ಅಭಿಯಾನಕ್ಕೆ ಸಜ್ಜಾದ ಚಿಣ್ಣರು !

On: June 5, 2026 4:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸುಗಟೂರು ಸರ್ಕಾರಿ ಶಾಲೆ ಹಸಿರು ಕ್ರಾಂತಿಯತ್ತ !
‘ಬೀಜದುಂಡೆ’ ಅಭಿಯಾನಕ್ಕೆ ಸಜ್ಜಾದ ಚಿಣ್ಣರು 

ಶಿಡ್ಲಘಟ್ಟ : ಸಸ್ಯಗಳು ಜೀವ ಸಂಕುಲದ ಉಸಿರಾಗಿವೆಕೇವಲ ಭಾಷಣಗಳಿಗೆ ಸೀಮಿತವಾಗದೆ ಪ್ರಾಯೋಗಿಕವಾಗಿ ಪರಿಸರ ಸಂರಕ್ಷಣೆಗೆ ಸೊಂಟ ಮುರಿದು ನಿಂತಿರುವಂತೆ ಕೆಲಸ ಮಾಡುತ್ತಿರುವವರು ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಂದರಲಾಲ್‌ ಬಹುಗುಣ ಇಕೋಕ್ಲಬ್‌, ಶಿಕ್ಷಕ ವರ್ಗ ಮತ್ತು ಗ್ರಾಮಸ್ಥರು ,
ಹಸಿರು ಎನ್ನುವುದು ಕೇವಲ ಕಣ್ಣಿಗೆ ತಂಪು ನೀಡುವ ಬಣ್ಣವಾಗಿರದೇ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಪರಿಸರ ಸಂರಕ್ಷಣೆಯ ಕೂಗು ಹೆಚ್ಚಿದ್ದು ,ಕಳೆದ ವರ್ಷದ ಪರಿಸರ ದಿನಾಚರಣೆಯಂದು ಹಸಿರು ಸುಗಟೂರು ಆಂದೋಲನದ ಶೀರ್ಷಿಕೆಯಡಿ ಇಡೀ ಗ್ರಾಮದ ಪ್ರತಿ ಮನೆಮನೆಗೆ ತೆರಳಿ ಎತ್ತರದ ಕನಿಷ್ಟ ಐದು ಸಸಿಗಳನ್ನು ವಿತರಿಸಿ ಬೆಳೆಸಿ ಪೋಷಿಸಲು ಪ್ರೇರೇಪಿಸಲಾಗಿತ್ತು ಅವೆಲ್ಲ ಪರಿಸರ ಜಾಗೃತಿಯ ಬಿತ್ತಿದ ಹಸಿರಿನ ಬೀಜ, ಇಂದು ಹೆಮ್ಮರವಾಗಿ ಬೆಳೆಯುತ್ತಿದ್ದು, ಈ ಬಾರಿಯೂ ಪರಿಸರ ದಿನಾಚರಣೆಯ ಅಂಗವಾಗಿ ಶಾಲೆ ಮತ್ತೊಂದು ಮಹತ್ತರ ಹೆಜ್ಜೆಗೆ ಸಿದ್ಧವಾಗಿದೆ.

ಕಳೆದ ಸಾಲಿನ ಪರಿಸರ ದಿನಾಚರಣೆಯ ಸಂದರ್ಭದಲ್ಲಿ  ನಡೆದ ‘ಹಸಿರು ಸುಗಟೂರು ಆಂದೋಲನ’ವು ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ಕೇವಲ ಒಂದು ದಿನದ ಆಚರಣೆಯಾಗಬಾರದು ಎಂಬ ಧ್ಯೇಯೋದ್ದೇಶ ದೊಂದಿಗೆ ಆರಂಭವಾಗಿ ಇಂದು ಪ್ರತಿ ಮನೆ ಮುಂದೆ, ಖಾಲಿಜಾಗಗಳಲ್ಲಿ, ಜಮೀನುಗಳಲ್ಲಿ ಮರಗಳು ಬೆಳೆಯುತ್ತಿದ್ದು, ಇಡೀ ಗ್ರಾಮದ ಚಿತ್ರಣವನ್ನೇ ಬದಲಾಯಿಸುವತ್ತ ಸಾಗಿದೆ. ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಜಂಟಿ ಆಶಯದಂತೆ ಅಂದು ಇಟ್ಟ ಹೆಜ್ಜೆ ಇಂದು ಯಶಸ್ಸಿನ ಪಥದಲ್ಲಿದೆ.

ಕಳೆದ ವರ್ಷದ ಆಂದೋಲನದ ಪ್ರಯುಕ್ತ ಸುಗಟೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವಿತರಿಸಿ ನೆಡಲಾಗಿತ್ತು.
ಕೇವಲ ಗಿಡಗಳನ್ನು ನೆಟ್ಟು ಕೈತೊಳೆದುಕೊಳ್ಳುವ ಇಂದಿನ ಕಾಲದಲ್ಲಿ, ಈ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಪ್ರತಿ ಗಿಡದ ಮೇಲೂ ವಿಶೇಷ ನಿಗಾ ವಹಿಸಿದ್ದರು ,

ನಿಯಮಿತವಾಗಿ ನೀರು ಉಣಿಸಿ, ಪೋಷಿಸಿದ್ದರ ಫಲವಾಗಿ ಇಂದು ಆ ಮೂರು ಸಾವಿರ ಗಿಡಗಳೂ ಸಹ ಅತ್ಯಂತ ಆರೋಗ್ಯಕರವಾಗಿ, ಹಚ್ಚ ಹಸಿರಿನಿಂದ ನಳನಳಿಸುತ್ತಾ ಬೆಳೆದು ನಿಂತಿವೆ.

“ಗಿಡ ನೆಡುವುದು ದೊಡ್ಡದಲ್ಲ, ಅದನ್ನು ಮಗುವಿನಂತೆ ಸಾಕಿ ಸಲಹುವುದು ಮುಖ್ಯ” ಎಂಬುದನ್ನು ಈ ಶಾಲೆಯ ಪುಟಾಣಿ ಮಕ್ಕಳು ತಮ್ಮ ನಿರಂತರ ಪೋಷಣೆಯ ಮೂಲಕ ಜಗತ್ತಿಗೆ ಸಾಬೀತುಪಡಿಸಿದ್ದಾರೆ.

ಇಂದು ಸುಗಟೂರಿನ ಹಾದಿಬೀದಿಗಳಲ್ಲಿ ತಲೆ ಎತ್ತಿ ನಿಂತಿರುವ ಆ ಗಿಡಗಳು ಗ್ರಾಮಸ್ಥರ, ಶಾಲೆಯ ಶಿಕ್ಷಕ  ವರ್ಗದವರ ಪರಿಸರ ಕಾಳಜಿಗೆ ಸಾಕ್ಷಿಯಾಗಿವೆ.

ಬೀಜದುಂಡೆಗಳನ್ನು ಎಸೆಯುವ ಕಾರ‍್ಯಕ್ರಮ: ಈ ವರ್ಷದ ಪರಿಸರ ದಿನಾಚರಣೆಗೆ ಸುಗಟೂರು ಶಾಲೆ ಮತ್ತೊಂದು ವಿನೂತನ ಸಿದ್ಧತೆ ಮಾಡಿಕೊಂಡಿದೆ. ಪ್ರಕೃತಿಗೆ ತಾಯಿಗೆ ತನ್ನದೇ ಆದ ಶೈಲಿಯಲ್ಲಿ ಉಡುಗೊರೆ ನೀಡಲು ಹೊರಟಿರುವ ಶಾಲಾ ಮಕ್ಕಳು, ಈ ಬಾರಿ ಸುಮಾರು ೭೦೦ ಬೀಜದುಂಡೆಗಳನ್ನು (ಸೀಡ್‌ಬಾಲ್ಸ್‌) ಸ್ವತಃ ತಮ್ಮ ಕೈಗಳಿಂದಲೇ ತಯಾರಿಸಿದ್ದಾರೆ. ಮಣ್ಣು, ಗೊಬ್ಬರ ಹಾಗೂ ವಿವಿಧ ಜಾತಿಯ ಹಣ್ಣು ಮತ್ತು ನೆರಳಿನ ಮರಗಳ ಬೀಜಗಳನ್ನು ಬಳಸಿ ಸಿದ್ಧಪಡಿಸಲಾದ ಈ ಬೀಜದುಂಡೆಗಳು ಸದ್ಯದಲ್ಲೇ ಗ್ರಾಮದ ಸುತ್ತಮುತ್ತಲಿನ ತಪ್ಪಲು ಪ್ರದೇಶ, ಕಾಡು-ಮೇಡುಗಳನ್ನು ಸೇರಲಿವೆ.

ಈ ಬಾರಿಯ ಪರಿಸರ ದಿನದಂದು ವಿದ್ಯಾರ್ಥಿಗಳು ತಾವು ತಯಾರಿಸಿದ ಈ ೭೦೦ ಬೀಜದುಂಡೆಗಳನ್ನು ಗ್ರಾಮದ ಸುತ್ತಮುತ್ತಲಿನ ಖಾಲಿ ಜಾಗಗಳು, ಬೆಟ್ಟದ ಇಳಿಜಾರುಗಳು ಹಾಗೂ ಹಸಿರು ಕಡಿಮೆ ಇರುವ ಪ್ರದೇಶಗಳಿಗೆ ಎಸೆಯುವ ಮೂಲಕ ಪ್ರಕೃತಿಯ ಸಹಜ ಪುನರುಜ್ಜೀವನಕ್ಕೆ ಕಾರಣವಾಗಲಿದ್ದಾರೆ ,ಮುಂಗಾರು ಮಳೆಯ ಸಿಂಚನವಾಗುತ್ತಿದ್ದಂತೆ ಈ ಬೀಜದುಂಡೆಗಳು ಮೊಳಕೆಯೊಡೆದು, ಭವಿಷ್ಯದಲ್ಲಿ ಸುಂದರ ವನಸಿರಿಯಾಗಿ ಮಾರ್ಪಡಲಿವೆ ಎಂಬುದು ಮಕ್ಕಳ ಆಶಯವಾಗಿದೆ.

ಸುಂದರಲಾಲ್‌ ಬಹುಗುಣ ಇಕೋಕ್ಲಬ್‌ನ ಕಾರ್ಯದರ್ಶಿ ಎಚ್‌.ಎಸ್‌.ರುದ್ರೇಶಮೂರ್ತಿ ಮಾತನಾಡಿ , ಕೇವಲ ಬೀಜದುಂಡೆಗಳನ್ನು ಎಸೆಯುವುದಷ್ಟೇ ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಶಾಲಾ ಆವರಣದಲ್ಲಿಯೂ ಸಹ ವಿವಿಧ ಸಸಿಗಳನ್ನು ನೆಡುವ ಬೃಹತ್  ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ. ಶಾಲೆಯ ಆವರಣವನ್ನು ಸಂಪೂರ್ಣವಾಗಿ ಹಸಿರುಮಯಗೊಳಿಸಿ, ವಿದ್ಯರ್ಥಿಗಳಿಗೆ ನೈಸರ್ಗಿಕ ಆಮ್ಲಜನಕದ ಗಣಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಾಲಾ ಉಸ್ತುವಾರಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ನೆರವಾಗುತ್ತಿದೆ ಎನ್ನುತ್ತಾರೆ.

ಅವರಶಾಲೆಯ ಹಿರಿಯ ವಿದ್ಯಾರ್ಥಿ  ದಿನೇಶ್‌ ಮಾತನಾಡಿ ,ಶಾಲಾ ಆವರಣದಲ್ಲಿ ಕಾಂಪೋಸ್ಟ್‌ ತಯಾರಿಸಿ ಗೊಬ್ಬರವನ್ನು ಶಾಲೆಯ ಆವರಣದಲ್ಲಿನ ಸಸಿಗಳಿಗೇ ಬಳಸಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್‌ ವರ್ಜನೆ ಬಗ್ಗೆ ಶಾಲೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಇಲ್ಲಿನ ಶಾಲೆಯು ಕೇವಲ ಅಕ್ಷರ ಕಲಿಯುವ, ಕಲಿಸುವ ಕೇಂದ್ರವಾಗಿ ಉಳಿಯದೆ, ಪ್ರಕೃತಿಯನ್ನು ಪ್ರೀತಿಸುವ, ಪರಿಸರವನ್ನು ಉಳಿಸುವ ಜೀವರೂಪದ ಪ್ರಯೋಗಾಲಯವಾಗಿ ಹೊರಹೊಮ್ಮಿದೆ. ಕಳೆದ ವರ್ಷದ ೩೦೦೦ ಗಿಡಗಳ ಯಶಸ್ವಿ ಪೋಷಣೆ ಹಾಗೂ ಈ ವರ್ಷದ ೭೦೦ ಬೀಜದುಂಡೆಗಳ ಅಭಿಯಾನವು ಹಸಿರು ಸುಗಟೂರಿನ ಕನಸನ್ನು ನನಸು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ.

WhatsApp

Join Now

Telegram

Join Now

Instagram

Join Now