ನಂಜನಗೂಡಿನಲ್ಲಿ ಹಳಿ ತಪ್ಪಿದ ತಾಲ್ಲೂಕು ಆಡಳಿತ…… ಲಂಚಾವತಾರ ಆರೋಪ…! ಸಿಡಿದೆದ್ದ ರೈತ ಸಂಘದ ಕಾರ್ಯಕರ್ತರಿಂದ ಬಾರ್ ಕೋಲ್ ಚಳುವಳಿ ಮೂಲಕ ಆಕ್ರೋಶ.
ತಾಂಡವಪುರ ಜೂನ್ 8: ನಂಜನಗೂಡು ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಹಣಬಾಕ ಅಧಿಕಾರಿಗಳ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಸಿಡಿದೆದ್ದಿದ್ ಬಾರ್ಕೋಲ್ ಚಳುವಳಿ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್, ಸಿಂಧುವಳ್ಳಿ ಸತೀಶ್ ಇಮ್ಮಾವು ರಘು ಮತ್ತು ತಾಲೂಕು ಅಧ್ಯಕ್ಷ ಸೂರಳ್ಳಿ ಮಹಾದೇವ ನಾಯಕ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ಬಾರ್ ಕೋಲ್ ಚಳುವಳಿಯಲ್ಲಿ ನೂರಾರು ರೈತರು ಭಾಗಿಯಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂಜನಗೂಡು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಬಾರ್ ಕೋಲ್ ಚಳುವಳಿ ಎಂ ಜಿ ರಸ್ತೆಯ ಮೂಲಕ ಮಿನಿವಿಧಾನಸೌಧ ಕಚೇರಿಗೆ ಆಗಮಿಸಿದೆ.
ದಾರಿಯುವುದಕ್ಕೂ ಕಂದಾಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ್ದಾರೆ.
ರೈತರು ಕೃಷಿ ಭೂಮಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯ ನಡೆಯಬೇಕಾದರೆ ಲಂಚದ ಹಣ ನೀಡಲೇಬೇಕು.ಜಮೀನಿನ ದಾಖಲಾತಿಗಳು, ವಂಶವೃಕ್ಷ, ಜನನ ಮತ್ತು ಮರಣ ದೃಢೀಕರಣ ಕೃಷಿ ಭೂಮಿಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ತಹಸೀಲ್ದಾರ್ ಕಚೇರಿಯಲ್ಲಿ ಲಂಚದ ಹಣ ನೀಡದಿದ್ದರೆ ಕೆಲಸ ನಡೆಯಲ್ಲ ಎಂದು ಆರೋಪಿಸಿದ್ದಾರೆ.
ಕಂದಾಯ ಅಧಿಕಾರಿಗಳ ಹಣದಾಹಕ್ಕೆ ಬೇಸತ್ತ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ನಂಜನಗೂಡಿಗೆ ನೂತನ ತಹಸೀಲ್ದಾರ್ ಡಾ. ಸ್ಮಿತಾ ರಾಮು ಅಧಿಕಾರ ಪಡೆದು ಆರು ತಿಂಗಳು ಕಳೆದಿದೆ.ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅವರ ಸಿಬ್ಬಂದಿಗಳು ಮಾಡುವುದಿಲ್ಲ.ಕೂಡಲೇ ನಂಜನಗೂಡಿನ ಕಂದಾಯ ಇಲಾಖೆ ಶುದ್ಧವಾಗಬೇಕು.ರೈತರ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಬೇಕಿದ್ದರೆ ಸಾಕಷ್ಟು ವರ್ಷಗಳಿಂದ ಜಾಂಡ ಹೂಡಿರುವ ಅಧಿಕಾರಿಗಳು ಎತ್ತಂಗಡಿ ಆಗಬೇಕು.ಆರ್ ಐ ಮತ್ತು ವಿಎ ಗಳು ಹತ್ತಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿಗಳು ಸ್ಥಳೀಯ ಶಾಸಕರು ಆಗಮಿಸಬೇಕು ಆಗ್ರಹಿಸಿದರು.
ನಂಜನಗೂಡಿನ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಕಳಂಕ ತರುತ್ತಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ನಂಜನಗೂಡು ಕ್ಷೇತ್ರದ ಜನರ ಸೇವೆ ಮಾಡಲು ಬಂದ ಅಧಿಕಾರಿಗಳು ರೈತರನ್ನು ಸುಲಿಗೆ ಮಾಡಿ ಅಕ್ರಮವಾಗಿ ಆಸ್ತಿ ಮತ್ತು ತೋಟ ಮಾಡಿದ್ದಾರೆ ಇಂತಹ ಅಧಿಕಾರಿಗಳನ್ನು ಗುರುತಿಸಿ ತಾಲೂಕಿನಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದರು…
1.ಅಕ್ರಮವಾಗಿ ಮಾಡಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು..!
ನಂಜನಗೂಡು ತಾಲೂಕಿನಲ್ಲಿ ರೈತರ ಮತ್ತು ಸಾರ್ವಜನಿಕರ ಕೆಲಸ ಮಾಡಲು ಬಂದಿರುವ ರೆವಿನ್ಯೂ ಅಧಿಕಾರಿಗಳು ಹತ್ತಾರು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿ ಹುಲ್ಲಹಳ್ಳಿಯ ಹೆಡಿಯಾಲ ಮತ್ತು ದೊಡ್ಡ ಕವಲಂದೆ ಮತ್ತು ಕಳಲೆ ಭಾಗದಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ಇದನ್ನು ಕುಲಂಕುಷವಾಗಿ ತನಿಖೆ ಮಾಡಿ ಸರ್ಕಾರ ವಶಪಡಿಸಿಕೊಂಡು ಮುಟ್ಟುಗೋಲು ಹಾಕಬೇಕು ಅಂತಹ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು.
2. ತಹಸಿಲ್ದಾರ್ ಡಾ. ಸ್ಮಿತಾ ರಾಮು ರವರನ್ನು ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡಿ
ರೈತರು ಮತ್ತು ಸಾರ್ವಜನಿಕರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ತಹಸೀಲ್ದಾರ್ ಕಚೇರಿಗೆ ಧಾವಿಸಿದರೆ ನಿಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುತ್ತೇನೆ ಎಂದು ಸಮಸ್ಯೆ ಹೇಳುವ ರೈತರಿಗೆ ತಹಸೀಲ್ದಾರ್ ಧಮ್ಕಿ ಹಾಕುತ್ತಿದ್ದಾರೆ. ಇದರಿಂದ ತಾಲೂಕಿನ ಜನತೆ ರೊಚ್ಚಿಗೆದ್ದಿದ್ದಾರೆ ಕೂಡಲೇ ತಹಸಿಲ್ದಾರ್ ಡಾ. ಸ್ಮಿತಾ ರಾಮುರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಬಾರ್ಕೋಲ್ ಚಳುವಳಿಯಲ್ಲಿ ಆಗ್ರಹ ಪಡಿಸಿದರು