--Ads--

ಮಕ್ಕಳು ಪ್ರತಿಭಾವಂತರಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು :ಶಾಸಕ ದಿನೇಶ್ ಗುಂಡೂರಾವ್

On: June 7, 2026 12:47 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಮಕ್ಕಳು ಪ್ರತಿಭಾವಂತರಾಗಿ, ಉತ್ತಮ ಪ್ರಜೆಯಾಗಿ ಬಾಳಬೇಕು :ಶಾಸಕ ದಿನೇಶ್ ಗುಂಡೂರಾವ್

ಗಾಂಧಿನಗರ ವಿಧಾನಸಭಾ ಕ್ಷೇತ್ರ: ಆರ್.ಗುಂಡೂರಾವ್ ಕ್ರೀಡಾ ಸಂಕೀರ್ಣದಲ್ಲಿ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಶಾಲಾ ಮತ್ತು ಕಾಲೇಜು ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು Rankಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ಸಮಾರಂಭ

ಶಾಸಕ ದಿನೇಶ್ ಗುಂಡೂರಾವ್ ರವರು ಸಸಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 400ಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜು ಮಕ್ಕಳಿಗೆ ನಗದು ಪುರಸ್ಕಾರ, ಸನ್ಮಾನಿಸಿ ಗೌರವಿಸಿದರು.

ದಿನೇಶ್ ಗುಂಡೂರಾವ್ ಮಾತನಾಡಿ ಬಡ ಮತ್ತು ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಆರ್.ಗುಂಡೂರಾವ್ ವತಿಯಿಂದ ಸಹಕಾರ ನೀಡುತ್ತಿದೆ.

ವ್ಯಕ್ತಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಮಕ್ಕಳಿಗೆ ಅವಕಾಶ ಸಿಗಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಅವರ ಕಲೆ, ಸಾಹಿತ್ಯ, ವಿವಿಧ ಕಲಾ ಪ್ರತಿಭೆಗಳು ಇರುತ್ತಾರೆ ಅದಕ್ಕೆ ನಾವು ಪೋತ್ಸಾಹ ನೀಡಬೇಕು.

ಮಕ್ಕಳಿಗೆ ಅವಕಾಶ ಸಿಗದೇ ಹೋದರೆ ವಂಚಿತರಾಗಿ ಖಿನ್ನತೆ ಒಳಗಾಗುತ್ತಾರೆ ಅರೀತಿಯಾಗಬಾರದು ಅವರಿಗೆ ಅವಕಾಶ ಕಲ್ಪಿಸುವ ಕಾರ್ಯ ನಮ್ಮ ಫೌಂಡೇಷನ್ ಮಾಡುತ್ತಿದೆ.

ನಮ್ಮಲ್ಲಿ ವಿವಿಧ ಸಂಸ್ಕೃತಿ, ಜಾತಿ, ಧರ್ಮವಿದೆ ಎಲ್ಲರು ಸಹೋದರತ್ವದಂತೆ ಬಾಳಬೇಕು. ಮನುಷ್ಯತ್ವ ಬೆಳಸಿಕೊಳ್ಳಬೇಕು. ಎಲ್ಲರು ಒಂದೇ ಎಂಬ ಭಾವನೆ ಬೆಳಸಿಕೊಳ್ಳಬೇಕು.

ಆರ್.ಗುಂಡೂರಾವ್ ಫೌಂಡೇಷನ್ ಸಾಮಾಜಿಕ ಕಾರ್ಯಗಳು ಸತತವಾಗಿ ಮಾಡಿಕೊಂಡು ಬರುತ್ತಿದೆ. ಮಕ್ಕಳು ಬೆಳೆಯಬೇಕು, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂಬ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ಶ್ರಮಿಸುತ್ತಿದೆ ಹೇಳಿದರು.

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 625ಕ್ಕೆ 625ಪಡೆದ ಧನುಷ್ ಯುವಕನಿಗೆ 25ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು

WhatsApp

Join Now

Telegram

Join Now

Instagram

Join Now