ಸದೃಢ ಆರೋಗ್ಯಕ್ಕಾಗಿ ಆಯುರ್ವೇದ ಪದ್ಧತಿಯೇ ಶ್ರೇಷ್ಠ : ಡಾ.ಚಂದ್ರಶೇಖರ್ ಕರೆ
ಲಿಂಗಸುಗೂರು :- ಪಟ್ಟಣದಲ್ಲಿ ಹೆಮ್ಮಿಕೊಂಡಿ ದ್ದ 39ನೇ ಮೃಗಶಿರ ಉಚಿತ ಮಾತ್ರೆ ವಿತರಣೆ ಸಮಾರಂಭದಲ್ಲಿ ಇಂದಿನ ಕಾಲದಿಂದಲೂ ಈ ಪಾರಂಪರಿಕ ಜನಕಲ್ಯಾಣ ಆರೋಗ್ಯ ಸೇವಾ ಪದ್ಧತಿ ಬಂದಿದೆ. ಪ್ರತಿ ವರ್ಷ ಮೃಗಶಿರ ಮಳೆ ಕೂಡುವ ಸಮಯದಲ್ಲಿ ಔಷಧಿ ನೀಡಲಾಗುತ್ತದೆ ಆಯುರ್ವೇದ ವನೌಷಧಿಕವು ಪುರಾತನವಾದ ಆರೋಗ್ಯ ಸಂರಕ್ಷಣೆಯಾಗಿದೆ ಎಂದು ಡಾ.ಚಂದ್ರಶೇಖರ ಸರ್ಜಾಪುರ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನೇತೃತ್ವ ವಹಿಸಿದ ಟ್ರಸ್ಟ್ ಅಧ್ಯಕ್ಷ
ಡಾ.ಜಲಾಲುದ್ದೀನ್ ಅಕ್ಬರ ಮೃಗಶಿರ ಔಷಧ ಸೇವಿಸಿದ ಮೇಲೆ ಪ್ರಾಕೃತಿಕ ನಿಸರ್ಗವಾಗಿ ರೋಗ ನಿರೋಧಕ ಶಕ್ತಿ ಶರೀರದಲ್ಲಿ ಹೆಚ್ಚಾಗುತ್ತದೆ. ದಮ್ಮು ಕೆಮ್ಮು ಅಲರ್ಜಿ ಹಾಗೂ ಅಸ್ತಮಾ ಉಬ್ಬಸ ನಾನಾ ರೋಗಗಳಿಂದ ಶರೀರ ಗುಣಮುಖವಾಗುತ್ತದೆ ಎಂದು ಪ್ರಸ್ತಾವಿಕ ನುಡಿದ ನಾನಾರೋಗಗಳಿಂದ ಗುಣಮುಖರಾಗುವ ರೋಗ ನಿರೋಧಕ ಶಕ್ತಿ ಚೈತನ್ಯ ಈ ಮಾತ್ರೆಗಳಲ್ಲಿ ಇದೆ ಎಂದ ಅವರು ಭಾರತೀಯ ಆಯುರ್ವೇದ ಪದ್ಧತಿ ಉಳಿಸಲು ಕರೆ ನೀಡಿದ ಡಾ ಚಂದ್ರಶೇಖರ್ ಸರ್ಜಾಪುರ್ ರವರಿಗೆ ಕೃತಜ್ಞತೆ ಹೇಳುತ್ತಾ ಅವರು ಮೃಗಶಿರ ಮಳೆಕೂಡುವ ಸಮಯದಲ್ಲಿ ಅಸ್ತಮಾ ಅಲರ್ಜಿಇತ್ಯಾದಿ ಶೀಥಲ ರೋಗಗಳಿಗೆ ರಾಮಬಾಣವಾದ ಉಚಿತ ಮಾತ್ರೆಗಳ ವಿತರಣೆಯನ್ನು ಮಾಡಿ ಮಾತನಾಡಿದರು.
ಪಟ್ಟಣದ ಪುರಸಭೆ ಸಂಸ್ಕೃತ ಭವನದಲ್ಲಿ ವನಔಷಧಿಕ ಆಯುರ್ವೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್ ವತಿಯಿಂದ 39ನೇ ಮೃಗಶಿರ ಮಾತ್ರೆ ಉಚಿತವಾಗಿ ವಿತರಣೆ ಮಾಡಿದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವರಾಜ್ ಕೆಂಭಾವಿ ಮಾತನಾಡಿ ರೋಗ ಗುಣಪಡಿಸುವಲ್ಲಿ ವನೌಷಧಿಕ ಚಿಕಿತ್ಸೆ ಶ್ರೇಷ್ಠವಾಗಿದೆ.
ರೋಗಿಗಳಿಗೆ ಅಷ್ಟೇಅಲ್ಲದೆ ಆರೋಗ್ಯವಂತರು ಔಷಧ ಸೇವಿಸುವ ಭಾರತೀಯ ವೈದ್ಯ ಪದ್ಧತಿಯ ವಂಶಪಾರಂಪರಿಕ ಪ್ರಕೃತಿ ಚಿಕಿತ್ಸೆ ಸಂಪ್ರದಾಯದ ನೆಲ ಇದಾಗಿದೆ ಎಂದರು
ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು “ಜನಕಲ್ಯಾಣರತ್ನ”ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಸಾನಿಧ್ಯ ವಹಿಸಿದ ಪೂಜ್ಯರಾದ ಚಿದಾನಂದ ಗುರುವಿನ್ ಆಶೀರ್ವಚನ ನೀಡಿದರು ಪೂಜ್ಯರಾದ ಶಿವಕುಮಾರ್ ನಂದಿಕೋಲ್ ಮಠ ಅವರು ಮಾತನಾಡಿ ಮನುಷ್ಯನ ರೋಗಗಳನ್ನು ಗುಣಪಡಿಸುವಲ್ಲಿ ಆಯುರ್ವೇದಿಕ್ ಚಿಕಿತ್ಸೆ ಶ್ರೇಷ್ಠ ವಾಗಿದೆ.
ಈ ಚಿಕಿತ್ಸಾ ಪದ್ಧತಿ ಬಿಟ್ಟು ಇಂಗ್ಲಿಷ್ ಔಷಧಗಳಿಗೆ ಮಾರಿ ಹೋಗಿದ್ದೇವೆ ಇದರಿಂದ ಹಲವಾರು ಅಡ್ಡಪರಿಣಾಮ ಉಂಟಾಗುತ್ತವೆ ನಮ್ಮ ಋಷಿಮುನಿಗಳು ಪೂರ್ವಿಕ ವೈದ್ಯರು ಪಾರಂಪರಿಕವನ್ನು ಆಯುರ್ವೇದ ಪದ್ಧತಿ ಔಷಧಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಇಂತಹ ಕಾಯಕದಲ್ಲಿ ಡಾ. ಜಲಾಲುದ್ದೀನ್ ಅಕ್ಬರ್ ಅವರು ಕಳೆದ 39 ವರ್ಷಗಳಿಂದ ಉಚಿತವಾಗಿ ಮೃಗಶಿರ ಮಾತ್ರೆಗಳನ್ನು ಕೊಡುತ್ತಾ ಬಂದಿರುವ ಇವರ ಕಾರ್ಯಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಹನುಮಂತ ಬಡಿಗೇರ್ ಹಾಗೂ ಜನಕಲ್ಯಾಣ ರತ್ನ ಪ್ರಶಸ್ತಿ ಪುರಸ್ಕೃತರ ರಹೀಮ್ ಶಾ ಮಕಾನ್ ದರ್ ಮುದುಗಲ್ , ನಿಜಗುಣಿ ಸರ್ಜಾಪುರ್, ಪತ್ರಕರ್ತರಾದ ಅಮರೇಶ್ ಕರಡಕಲ್, ರಾಮು ರಾಥೋಡ್ ಇತರರು ಉಪಸ್ಥಿತರಿದ್ದರು