--Ads--

ದೊಡ್ಡ ಮಾರಗೌಡನಹಳ್ಳಿ ಗ್ರಾ.ಪಂ.ನಲ್ಲಿ ವಾಟರ್ ಫಿಲ್ಟರ್ ಡ್ರಮ್‌ಸೆಟ್ ವಿತರಣೆ

On: June 20, 2026 3:12 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ದೊಡ್ಡ ಮಾರಗೌಡನಹಳ್ಳಿ ಗ್ರಾ.ಪಂ.ನಲ್ಲಿ ವಾಟರ್ ಫಿಲ್ಟರ್ ಡ್ರಮ್‌ಸೆಟ್ ವಿತರಣೆ

ತಾಂಡವಪುರ ಜೂನ್ 20 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮೈಸೂರು ತಾಲೂಕಿನ ದೊಡ್ಡಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ೧೦ ಅಂಗನವಾಡಿ ಕೇಂದ್ರಗಳಿಗೆ ನೀರು ಶುದ್ಧೀಕರಣ ಯಂತ್ರ ಹಾಗೂ ೩ ಶಾಲೆಗಳಿಗೆ ಸಂಗೀತ ಪರಿಕರಗಳನ್ನು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ವಿತರಿಸಿದರು.

ಬಳಿಕ ಅವರು ಮಾತನಾಡಿ, ಮನುಷ್ಯನ ಆರೋಗ್ಯಕ್ಕೆ ಶುದ್ಧನೀರು ಬಹಳ ಮುಖ್ಯವಾಗಿದ್ದು, ಅದರಂತೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಾಟರ್ ಫಿಲ್ಟರ್‌ಗಳನ್ನು ವಿತರಿಸಲಾಗಿದೆ. ಶಾಲಾಮಕ್ಕಳಿಗೆ ಡ್ರಮ್ ಸೆಟ್ ವಿತರಿಸಿದ್ದೇವೆ. ಶಿಕ್ಷಕರು ಮಕ್ಕಳಿಗೆ ಡ್ರಮ್‌ಸೆಟ್ ಬಾರಿಸುವ ತರಬೇತಿ ಕೊಡಿಸಬೇಕು. ಶಿಕ್ಷಕರು ಇವುಗಳ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದಅವರು, ಗ್ರಾಮ ಪಂಚಾಯತಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಂಚಿನಕೆರೆ ರುಕ್ಮಾಂಗದ ಮಾತನಾಡಿ ನಮ್ಮ ಪಂಚಾಯಿತಿಯಿAದ ೯೦ ಸಾವಿರ ವೆಚ್ಚದಲ್ಲಿ ಮಾದಳ್ಳಿ, ಕಮರವಳ್ಳಿ ಶೆಟ್ಟಿನಾಯಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಡ್ರಮ್‌ಸೆಟ್‌ಗಳನ್ನು ವಿತರಿಸಿದ್ದೇವೆ. ೧ ಲಕ್ಷ ವೆಚ್ಚದಲ್ಲಿ ಮರಯ್ಯನಹುಂಡಿ, ನುಗ್ಗಳ್ಳಿ, ಮಾದಳ್ಳಿ, ಶಿಟ್ಟಿನಾಯಕನಹಳ್ಳಿ, ಡಿಎಂಜಿ ಹಳ್ಳಿ, ಕಟ್ಟೆಹುಂಡಿ, ಕಮರವಳ್ಳಿ, ದೊಡ್ಡಟ್ಟಿಹುಂಡಿ, ಮಾಣಿಕ್ಯಪುರ ಗ್ರಾಮದ ಅಂಗನವಾಡಿಗಳಿಗೆ ವಾಟರ್‌ಫಿಲ್ಟರ್‌ಗಳನ್ನು ನೀಡಿದ್ದೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಲೀಲಾವತಿ, ಆರ.ಎನ್.ರಾಜೇಗೌಡ, ರಾಜು, ಲೆಕ್ಕಸಹಾಯಕ ವಿರುಪಾಕ್ಷ, ಗಣೇಶ್, ವಿನಯ್ ಕುಮಾರ್ ಗ್ರಾಮಸ್ಥರು ಮುಖಂಡರು ಹಾಜರಿದ್ದರು

WhatsApp

Join Now

Telegram

Join Now

Instagram

Join Now