ವಿಜಯ ದರ್ಪಣ ನ್ಯೂಸ್…..
ಮುತ್ತೂರಿನಲ್ಲಿ ನೊಳಂಬರ ಕಾಲದ ಶಿವಾಲಯಕ್ಕೆ ಜೀರ್ಣೋದ್ಧಾರ

ಶಿಡ್ಲಘಟ್ಟ : ಮುತ್ತೂರು ಗ್ರಾಮದಲ್ಲಿ ಶಿಥಿಲಗೊಂಡಿರುವ ನೊಳಂಬರ ಕಾಲಕ್ಕೆ ಸೇರಿರುವ ಶಿವಾಲಯ ದೇವಸ್ಥಾನ, ವೀರಗಲ್ಲು ಮತ್ತು ಶಾಸನವನ್ನು ನಿವಾಸ ಸಂಸ್ಥೆ, ಗ್ರಾಮಾಂತರ ಟ್ರಸ್ಟ್ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಪಾರಂಪರಿಕ ಪುನರುಜ್ಜಿವನ ಕಾರ್ಯಕ್ಕೆ ಚಾಲನೆ ನೀಡಿದರು.
ಕೆಲವು ತಿಂಗಳ ಹಿಂದೆ ಪುರಾತತ್ವ ಇಲಾಖೆ ಗ್ರಾಮಾಂತರ ಸರ್ವೇ ನಡೆಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜ್ ಮುತ್ತೂರು ಗ್ರಾಮದ ದೇವಸ್ಥಾನ, ವೀರಗಲ್ಲು ಮತ್ತು ಶಾಸನವನ್ನು ಅಧ್ಯಯನ ಮಾಡಿ ಇವುಗಳನ್ನು ಸಂರಕ್ಷಿಸುವಂತೆ ಗ್ರಾಮಸ್ಥರಲ್ಲಿ ಅವರು ವಿನಂತಿಸಿದ್ದರು.
ಈ ಹಿನ್ನೆಲೆಯಲ್ಲಿ ಮುತ್ತೂರು ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನು ಮಾಡುತ್ತಿರುವ ಗ್ರಾಮಾಂತರ ಟ್ರಸ್ಟ್ ಸಂಸ್ಥೆಯವರು ಮುಂದೆ ಬಂದು ಮಿಥಿಕ್ ಸೊಸೈಟಿ, ಸಂರಚನಾ ತಜ್ಞ ಇಂಜಿನಿಯರ್ ಪ್ರೊ.ರಘುನಾಥ್ ಮತ್ತು ಪುರಾತತ್ವ ಇಲಾಖೆ ಸಲಹೆ ಪಡೆದು, ನಿವಾಸ ಸಂಸ್ಥೆ ಮತ್ತು ದಾನಿಗಳ ನೆರವನ್ನು ಪಡೆದು ಪುನರುಜ್ಜಿವನ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದೆ.

ಈ ವೇಳೆ ಮುತ್ತೂರು ಗ್ರಾಮದಲ್ಲಿ ಶಿಥಿಲಗೊಂಡಿರುವ ಶಿವನ ದೇವಸ್ಥಾನದ ಪುನರುಜ್ಜಿವನ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ದಾನಿಗಳಾದ ಲಲಿತಾ ಕಂದಸ್ವಾಮಿ, ರಮೇಶ್ ಸುಂದರೇಶನ್, ತಿರುವಣ್ಣಾಮಲೈ ಅರುಣಾಚಲರಮಣ, ಆತ್ಮವಿದ್ಯಾಮಂದಿರದ ರಮಣಸ್ವರೂಪಾನಂದ ಸ್ವಾಮೀಜಿ, ಮೈಸೂರು ಮಹೇಶ್, ನಿವಾಸ ಸಂಸ್ಥೆ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ , ಸದಸ್ಯರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.










