ವಿಜಯ ದರ್ಪಣ ನ್ಯೂಸ್….
ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ ಪ್ರಸರಣ ಇಂದು ತುಂಬಾ ಅಗತ್ಯವೆನಿಸಿದೆ : ವೆಂಕಟೇಶ್ ಜೋಶಿ

ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ ಪ್ರಸರಣ ಕೆಲಸವನ್ನು ನಿರ್ವಹಿಸಬೇಕಾದ ತುರ್ತು ಹಿಂದೆಂದಿಗಿಂತಲೂ ಇಂದು ತುಂಬಾ ಅಗತ್ಯವೆನಿಸಿದೆ ಎಂದು ರಂಗಸಂಗೀತ ನಿರ್ದೇಶಕ, ಬೆಂಗಳೂರಿನ ಜೋಶಿ ಸಂಗೀತ ನೃತ್ಯ ಅಕಾಡೆಮಿ ಸಂಸ್ಥಾಪಕ ವೆಂಕಟೇಶ್ ಜೋಶಿ ಹೇಳಿದರು.
ಅವರು ಇಂದು ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಬೆಂಗಳೂರು ದಕ್ಷಿಣ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಿಂಗಳ ತಳಿರು ಸರಣಿ ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಯಾವ ನೆಲದ ಸಾಂಸ್ಕೃತಿಕ ಬೇರುಗಳು ಗಟ್ಟಿಯಾಗಿರುತ್ತವೆಯೋ ಅಂತಹ ಕಡೆಗಳಲ್ಲಿ ಮಾನವೀಯ ಮೌಲ್ಯಗಳು ನೆಲೆಗೊಂಡಿರುತ್ತವೇ. ಏಕವ್ಯಕ್ತಿಯಾಗಿ ಮತ್ತುಶ್ರೀ ದಿಬ್ಬ ನಿರ್ಮಾತೃ ಬೈರೇಗೌಡರ ಈ ವರೆಗಿನ ಕಾರ್ಯಸಾಧನೆ ದೊಡ್ಡದು. ಏಕವ್ಯಕ್ತಿಯಾಗಿ ನಿರ್ಮಾಣ ಮಾಡಿರುವ ಈ ಸಂಸ್ಥೆಯನ್ನು ಇನ್ನು ಮುಂದೆ ಸರ್ಕಾರ ಮತ್ತು ಸಾರ್ವಜನಿಕರು ಉತ್ತುಂಗಕ್ಕೆ ಕರೆದೊಯ್ಯುವ ಕಾರ್ಯವಾಗಬೇಕಾಗಿದೆ ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಡಾ. ಎಂ. ಬೈರೇಗೌಡ l ಹೆತ್ತಮ್ಮ ಮತ್ತು ಹುಟ್ಟಿದ ನೆಲದ ಋಣ ತೀರಿಸಲು ನನಗೆ ದೊರೆತಿರುವ ಇದೊಂದು ಸದವಕಾಶ. ಈ ಹಿನ್ನೆಲೆಯಲ್ಲಿ ನಾನು ಕೈಗೊಂಡಿರುವ ಕಿರುಗೆಲಸಕ್ಕೆ ಒತ್ತಾಸೆಯ ಅಗತ್ಯವಿದೆ. ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಿದ್ದು ಇದರ ಸೌಂದರ್ಯ ವರ್ಧನೆ ಆಗಬೇಕು ಎಂದರು.
ನೃತ್ಯ ಸಂಹಿತ ಅಕಾಡೆಮಿಯ ಸಂಸ್ಥಾಪಕಿ ಸಂಹಿತ ರಾಜ್ ಮಾತನಾಡಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅದು ಈ ನಿರ್ಜನ ಪ್ರದೇಶದಲ್ಲಿ ಇಷ್ಟು ವ್ಯವಸ್ಥಿತ ರಂಗಮಂದಿರ ನಿರ್ಮಿಸಿ, ಈ ನಾಡಿನ ಹವ್ಯಾಸಿ ತಂಡಗಳಿಗೆ ವೇದಿಕೆ ಒದಗಿಸಿಕೊಡುತ್ತಿರುವುದು ಸಾರ್ಥಕ ಕೆಲಸ ಎಂದರು.

ಇದೇ ಸಂದರ್ಭದಲ್ಲಿ ಜೋಶಿ ಸಂಗೀತ ನೃತ್ಯ ಅಕಾಡೆಮಿಯಿಂದ ಟ್ರಸ್ಟ್ ಗೆ ದೇಣಿಗೆಯಾಗಿ ತಬಲ ಸೆಟ್ ನೀಡಿದರು.
ರಂಗಕರ್ಮಿ ಎಂ ಸಿ ನಾಗರಾಜ್ ಟ್ರಸ್ಟ್ ಗೌರವಾಧ್ಯಕ್ಷ ಮಂಜೇಶ್ ರಾವ್ಗೊಡ್ಲು ಸಮಾಜ ಸೇವಕಿ ಉಮಾ ಮತ್ತು ಕೆಂಗಲ್ ಆಂಜನೇಯ ಸ್ವಾಮಿ ರೂರಲ್ ಹೈ ಸ್ಕೂಲ್ , 1978 -79 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಾಸುಮಾಡಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ 40ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಹೈಸ್ಕೂಲು ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಈ ಹಿನ್ನೆಲೆಯಲ್ಲಿ ಇದೊಂದು ವಿಶಿಷ್ಟ ಸಮ್ಮಿಲನ ಕಾರ್ಯಕ್ರಮವಾಗಿ ತಿಂಗಳ ತಳಿರು ಕಾರ್ಯಕ್ರಮಕ್ಕೆ ಮೆರುಗು ನೀಡಿತು.











