ವಿಜಯ ದರ್ಪಣ ನ್ಯೂಸ್….
ಇಲ್ಲಿಗರು ಕಂಡ ದೇವರು! ಪುಸ್ತಕ ಬಿಡುಗಡೆ

ರಾಮನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಂಘ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ, ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಪ್ರಕಟಿತ ಡಾ. ಎಂ. ಬೈರೇಗೌಡರ ಇಲ್ಲಿಗರು ಕಂಡ ದೇವರು! ಜಾನಪದ ಸಂಶೋಧನ ಲೇಖನಗಳ ಸಂಕಲನವು ಕಾಲೇಜು ಸಭಾಂಗಣದಲ್ಲಿ 12ನೇ ಏಪ್ರಿಲ್ 2026 ಬೆಳಗ್ಗೆ ಹತ್ತುವರೆ ಗಂಟೆಗೆ ಬಿಡುಗಡೆಯಾಗಲಿದೆ.
ವಿಶ್ರಾಂತ ಪ್ರಾಂಶುಪಾಲರು ಹಾಗೂ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಕೃತಿ ಬಿಡುಗಡೆ ಮಾಡುವರು. ಪತ್ರಕರ್ತ ಓದೇಶ ಸಕಲೇಶಪುರ ಕೃತಿ ಪರಿಚಯ ಮಾಡಿಕೊಡುವರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಾವಿತ್ರಮ್ಮ ಎ.ಎಸ್. ಅಧ್ಯಕ್ಷತೆವಹಿಸುವರು.
ಬೆಂಗಳೂರಿನ ರಂಗಕರ್ಮಿ ಕುರಿಬಾಂಡ್ ಸಾಗರ್, ನ್ಯಾಯವಾದಿ ನಂಜಪ್ಪ ಕಾಳೇಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ಲೇಖಕ, ಜಾನಪದ ವಿದ್ವಾಂಸ ಡಾ.ಎಂ. ಬೈರೇಗೌಡ, ಐಕ್ಯೂಎಸಿ ಸಂಚಾಲಕಿ ಡಾ. ದೀಪಾ ಹೆಬ್ಬಾರ್ ಉಪಸ್ಥಿತರಿರುವರು. ಹಾಗೇ ಗಾಯಕರಾದ ಕೆಂಗಲ್ ವಿನಯಕುಮಾರ್, ಎಚ್.ವಿ. ಮೂರ್ತಿ ಗೀತಗಾಯನ ಕಾರ್ಯಕ್ರಮ ನಡೆಸಿಕೊಡುವರು. ದೂರದರ್ಶನಕ್ಕೆ ನಿರ್ಮಿಸಿರುವ `ಇರುಳಿಗರು ಸಾಕ್ಷö್ಯಚಿತ್ರ’ ಪ್ರದರ್ಶನ ಕೂಡ ಇರುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಉಮಾಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











