ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ”ಗೆ ಎಸ್.ಗೋಪಾಲಗೌಡ ಕಲ್ವಮಂಜಲಿ ಆಯ್ಕೆ
ಕರ್ನಾಟಕ ವಿಕಾಸ ರಂಗ ಪ್ರತಿ ವರ್ಷ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಹೆಸರಿನಲ್ಲಿ ನೀಡುವ ನುಡಿಸಿರಿ ಸಾಹಿತ್ಯ ಪ್ರಶಸ್ತಿಗೆ 2026ನೇ ಸಾಲಿಗೆ ಹಿರಿಯ ಸಾಹಿತಿ ಎಸ್.ಗೋಪಾಲಗೌಡ ಕಲ್ಪಮಂಜಲಿ ಆಯ್ಕೆಯಾಗಿದ್ದಾರೆ.
ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ 5 ಸಾವಿರ ರೂ.ಗಳ ನಗದು ಪುರಸ್ಕಾರದೊಂದಿಗೆ, ಫಲಕ, ಫಲ ,ತಾಂಬೂಲ ನೀಡಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಎಸ್.ಗೋಪಾಲಗೌಡ ಕಲ್ಪಮಂಜಲಿ ಅವರು ಕೋಲಾರ ಜಿಲ್ಲೆ ವೇಮಗಲ್ ಬಳಿಯ ಕಲ್ಯವಮಂಜಲಿ ಗ್ರಾಮದವರಾಗಿದ್ದು , ಸಹಕಾರ ಕ್ಷೇತ್ರದಲ್ಲಿ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಈಗ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದಾರೆ.
ಕವನ ಸಂಕಲನ, ಕಥಾಸಂಕಲನ, ನಾಟಕ, ಕಾದಂಬರಿ, ಜನಪದ ಸಾಹಿತ್ಯ ಹಾಗೂ ಜೀವನ ಚರಿತ್ರೆ ಸೇರಿದಂತೆ ಒಟ್ಟು 31 ಕೃತಿಗಳನ್ನು ರಚಿಸಿದ್ದಾರೆ ,2025 ರಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ತಿಳಿಸಿದ್ದಾರೆ.