--Ads--

ಅಪ್ಪೇಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ

On: July 3, 2026 2:15 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅಪ್ಪೇಗೌಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಶಿಡ್ಲಘಟ್ಟ : ಅಪ್ಪೇಗೌಡನಹಳ್ಳಿ ಶಾಲೆ ನನಗೆ ಅತ್ಯಂತ ಪ್ರಿಯವಾದ ಶಾಲೆಯಾಗಿದೆ ನಾನು 23 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಬಡ್ತಿ ಹೊಂದಿ ಮುಖ್ಯ ಶಿಕ್ಷಕಿಯಾಗಿ ಮಳ್ಳೂರು ಶಾಲೆಗೆ ಆಯ್ಕೆಯಾಗಿದ್ದೇನೆ ಎಂದು ಮುಖ್ಯ ಶಿಕ್ಷಕಿ ಎಂ.ವಿ. ವೆಂಕಟರತ್ನಮ್ಮ ತಿಳಿಸಿದರು.

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಅವರಿಗೆ ಎಸ್.ಡಿ.ಎಂ.ಸಿ. ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಬೀಳ್ಕೊಡುಗೆ ನೀಡಿದ ವೇಳೆ ಅವರು ಮಾತನಾಡಿದರು.

ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೀಡಿದ ಸಹಕಾರ ಮತ್ತು ಪ್ರೀತಿ,ವಿಶ್ವಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ ಈ ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಅವರು ಭಾವುಕರಾದರು.

ಶಿಕ್ಷಕಿ ವೆಂಕಟರತ್ನಮ್ಮ ಅವರನ್ನು ಸನ್ಮಾನಿಸಿ ಮುಂದಿನ ಸೇವಾ ಕಾರ್ಯಕ್ಕೆ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪಾ ನರಸಿಂಹಮೂರ್ತಿ, ಉಪಾಧ್ಯಕ್ಷ ವೆಂಕಟೇಶ್‌, ಸದಸ್ಯರಾದ ಅಮೀತಾ ,ಗುಣವತಿ, ಶ್ರೀಕಾಂತ್, ಶಿಕ್ಷಕರಾದ ಎಸ್.ಚಾಂದ್ ಪಾಷಾ,ಎಂ.ಮೇಘನಾ ಎಂ.ಸುಜಾತಾ , ಗ್ರಾಮಸ್ಥರಾದ ಮುನೀಂದ್ರ,ಎ.ಎಂ.ತ್ಯಾಗರಾಜ್ , ಪ್ರಭಾಕರ್ , ದೇವಪ್ಪ, ಪ್ರೇಮಾ ಮಂಜುಳಾ, ರವಿಪ್ರಕಾಶ್, ಹಳೆಯ ವಿದ್ಯಾರ್ಥಿಗಳಾದ ಹನುಮಂತರೆಡ್ಡಿ, ನರಸಿಂಹಮೂರ್ತಿ, ಪ್ರದೀಪ್ ಹಾಜರಿದ್ದರು.

 

WhatsApp

Join Now

Telegram

Join Now

Instagram

Join Now