ವಿಜಯ ದರ್ಪಣ ನ್ಯೂಸ್….
ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರಿಗೆ ಸಲ್ಲುತ್ತದೆ
ಹಾರೋಹಳ್ಳಿ : ಚೀಲಗಳಲ್ಲಿ ತುಂಬಿದ್ದ ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಿಕಾಸರ ರಂಗದ ಜಿಲ್ಲಾಧ್ಯಕ್ಷ ಆರ್ ವಿ ನಾರಾಯಣ ತಿಳಿಸಿದರು.
ತಾಲೂಕಿನ ಮರಳವಾಡಿ ಹೋಬಳಿಯ ಪಡುವಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನಕಪುರ ಹಾಗೂ ಕರ್ನಾಟಕ ವಿಕಾಸರಂಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯದ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕಾಗದಗಳಿಲ್ಲದ ಕಾಲದಲ್ಲಿ ತಾಳೆಗರಿಗಳಲ್ಲಿ ವಚನ ಸಾಹಿತ್ಯಗಳನ್ನು ಬರೆಯುತ್ತಿದ್ದರು.
ಆ ತಾಳೆಗರಿಯ ವಚನ ಸಾಹಿತ್ಯವನ್ನು ಚೀಲಗಳಲ್ಲಿ ತುಂಬಿದ್ದರು ಕೆಲವೇ ಕೆಲವು ವಚನಕಾರರ ಹೆಸರು ಮಾತ್ರವೇ ಜನರಿಗೆ ತಿಳಿದಿತ್ತು ಆದರೆ ಹಳಕಟ್ಟಿ ರವರು ಸುಮಾರು 250 ವಚನಕಾರರನ್ನು ಜಗತ್ತಿಗೆ ಪರಿಚಯಿಸಿದವರು ಎಂದು ಹೇಳಿದರು.
ಹಳಗನ್ನಡದಲ್ಲಿದ್ದ ವಚನಗಳನ್ನು ಜನರ ಆಡು ಭಾಷೆಯಲ್ಲಿ ತಂದವರು ಜೊತೆಗೆ ಬಡವರಿಗೆ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು ಅವರ ಸಾಧನೆ ಬದುಕು ನಾವೆಲ್ಲರೂ ಅನುಸರಿಸಬೇಕು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.













