--Ads--

1,26,665 ಮಂದಿಯ ಎನ್ಯುಮರೇಷನ್‌ ನಮೂನೆಗಳ ಗಣಕೀಕರಣ ಶೇ.60ರಷ್ಟು ಸಾಧನೆ

On: July 15, 2026 5:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

1,26,665 ಮಂದಿಯ ಎನ್ಯುಮರೇಷನ್‌ ನಮೂನೆಗಳ ಗಣಕೀಕರಣ ಶೇ.60ರಷ್ಟು ಸಾಧನೆ

ಶಿಡ್ಲಘಟ್ಟ : ಜೂ.16ಕ್ಕೆ ಅನ್ವಯವಾಗುವಂತೆ ಕ್ಷೇತ್ರದಲ್ಲಿ 2,09,793 ಮಂದಿ ಮತದಾರರಿದ್ದು ಈ ಪೈಕಿ 2,09,752 ಮಂದಿಗೆ ಎನ್ಯುಮರೇಷನ್ ಅರ್ಜಿ ವಿತರಿಸುವ ಮೂಲಕ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ ನೆನ್ನೆ
ಸಂಜೆ 6 ಗಂಟೆಯೊಳಗೆ 1,26,665 ಮಂದಿಯ ಎನ್ಯುಮರೇಷನ್ ನಮೂನೆಗಳನ್ನು ಗಣಕೀಕರಣ ಮಾಡುವ ಮೂಲಕ ಶೇ.60ರಷ್ಟು ಗಣಕೀಕರಣ ಮಾಡಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಧಾನಸಭೆ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಮ್ಯಾಪಿಂಗ್ ಮಾಡಿರುವ 2,09,793 ಮಂದಿ ಮತದಾರರ ಪೈಕಿ ಶೇ. 100ರಷ್ಟು 2,09,752 (ಎರಡು ಲಕ್ಷ ಒಂಬತ್ತು ಸಾವಿರದ ಏಳು ನೂರ ಐವತ್ತೆರಡು) ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಈ ಪೈಕಿ ಗಣತಿ ನಮೂನೆಗಳನ್ನು ಪಡೆಯದ, ಶಾಶ್ವತವಾಗಿ ಸ್ಥಳಾಂತರಗೊಂಡ, ಮೃತಪಟ್ಟ ಹೆಚ್ಚು ಮತಗಟ್ಟೆಗಳಲ್ಲಿ ಮತದಾರರಾಗಿರುವ ಹಾಗೂ ಇತರೆ ಕಾರಣಗಳಿಗಾಗಿ 2583 ಮಂದಿ ಮತದಾರರನ್ನು ಅನರ್ಹ ಮತದಾರರೆಂದು ಗುರುತಿಸಲಾಗಿದೆ ಎಂದು ಹೇಳಿದರು ‌
ಎಸ್‌ಐಆರ್ ಕಾರ್ಯ ಮುಗಿಯುವ ಅವಧಿಯೊಳಗೆ ಈ 2583 ಮಂದಿ ಮತದಾರರ ವಾಸ್ತವ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಅಂತಿಮವಾಗಿ ಅನರ್ಹಗೊಳಿಸಲಾಗುವುದು ,ಎಸ್‌ಐಆ‌ರ್ ಕಾರ್ಯವು ಜಿಲ್ಲೆ ಹಾಗೂ ಈ ಕ್ಷೇತ್ರದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಎಲ್ಲರೂ ಇನ್ನಷ್ಟು ಸಹಕಾರ ನೀಡಿ ಎಸ್‌ಐಆ‌ರ್ ಕಾರ್ಯವನ್ನು ಸುಸೂತ್ರವಾಗಿ ಯಶಸ್ವಿ ಮಾಡಲು ಅವರು ಕೋರಿದರು.

ತಹಶಿಲ್ದಾರ್ ಹಾಗು ಸಹಾಯಕ ನೋಂದಣಾಧಿಕಾರಿ ಎನ್.ಗಗನಸಿಂಧು ಮಾತನಾಡಿ, 2002ಕ್ಕಿಂತಲೂ
ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಅಥವಾ ನಿಮ್ಮ ತಂದೆಯ ಹೆಸರು, ಕ್ರಮ ಸಂಖ್ಯೆ, ವಿಧಾನಸಭೆ ಕ್ಷೇತ್ರದ ಸಂಖ್ಯೆ ಮತ್ತು ಮತಗಟ್ಟೆ ಸಂಖ್ಯೆಯ ವಿವರ ಸಿಗದಿದ್ದಲ್ಲಿ ಆತಂಕ ಪಡಬೇಕಿಲ್ಲ ನೀವು ಈ ವಿವರ ದೊರೆತಿಲ್ಲ ಎಂದು ಹೇಳಿ ಸಹಿ ಮಾಡಿ ಮತಗಟ್ಟೆ ಅಧಿಕಾರಿಗೆ ಮಾಹಿತಿ ನೀಡಿದರೆ ಎನ್ಯುಮರೇಷನ್ ನಮೂನೆಯಲ್ಲಿ ನಿಮ್ಮ ಹಾಗೂ ಮತಗಟ್ಟೆ ಅಧಿಕಾರಿಯ ಸಹಿ ಇದ್ದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರಲಿದೆ ಇದನ್ನು ಘೋಷಿಸದೆ ಇದ್ದಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರೊಲ್ಲ ಎಂದು ಅವರು ವಿವರಿಸಿದರು.

ನಮ್ಮ ಬಿಎಲ್‌ಒಗಳು ಮನೆ ಬಳಿ ಬಂದಾಗ
ಮತದಾರರು ಕೂಲಿ ಇನ್ನಿತರೆ ಕೆಲಸ ಕಾರ್ಯಗಳಿಗೆಂದು ಹೊರಗೆ ಹೋಗಿದ್ದು ಮನೆಯಲ್ಲಿ ಇರದ ಕಾರಣ ಗಣತಿ ನಮೂನೆ ವಿತರಿಸಲು ತಡವಾಗುತ್ತಿದೆ ಈ ಸಮಸ್ಯೆ ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಹೆಚ್ಚಿದೆ , ಕಚೇರಿಯಲ್ಲಿ ಮತದಾರರಿಗೆ ಮಾಹಿತಿ ನೀಡಿ ನೆರವು ಹಾಗಾಗಿ ತಾಲ್ಲೂಕು ಕಚೇರಿ ಮತ್ತು ನಗರಸಭೆ ನೀಡಲು ಮತದಾರರ ಸಹಾಯ ಕೇಂದ್ರ ತೆರೆದಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ಎಲ್ಲಾ ಪಕ್ಷಗಳಿಂದಲು ನೇಮಕಗೊಂಡ ಬಿಎಲ್‌ಎಗಳು, ಮತಗಟ್ಟೆ ಅಧಿಕಾರಿಗಳೊಂದಿಗೆ ಸಹಾಯಕ್ಕೆ ನಿಂತು ಮತದಾರರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸಿ ಶೇ.100ರಷ್ಟು ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಲು ಸಹಕರಿಸಬೇಕು, ಆ ಮೂಲಕ ಎಲ್ಲಾ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಮತ್ತು ಅನರ್ಹರನ್ನು ಕೈಬಿಡಲು ಸಹಕರಿಸಬೇಕೆಂದು ಮನವಿ ಮಾಡಿದರು.

WhatsApp

Join Now

Telegram

Join Now

Instagram

Join Now