ವಿಜಯ ದರ್ಪಣ ನ್ಯೂಸ್….
50 ವರ್ಷ ಶಾಶ್ವತವಾಗಿ ಉಳಿಯುವ ಕಾಮಗಾರಿ ,
ವಾಸವಿ ರಸ್ತೆಯಅಭಿವೃದ್ಧಿಯು 7 ಹಂತಗಳಲ್ಲಿ ನಡೆಯಲಿದೆ ಸಾರ್ವಜನಿಕರು ಸಹಕರಿ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ದೂರದೃಷ್ಟಿಯ ಯೋಜನೆಯಡಿ
ವಾಸವಿ ರಸ್ತೆಯ ಅಭಿವೃದ್ಧಿಯು 7 ಹಂತಗಳಲ್ಲಿ ನಡೆಯಲಿದೆ ಎಂದು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ವಾಸವಿ ರಸ್ತೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸುದ್ದಿಗಾರರಿಗೆ ಅವರು ವಿವರಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ, ಸಾರ್ವಜನಿಕರಿಗೆ ತೊಂದರೆಯಾಗದಿರಲೆಂದು ಕಾಮಗಾರಿಯನ್ನು ತ್ವರಿತವಾಗಿ ಮಾಡಿಸಲಾಗುತ್ತಿದೆ ಈಗಾಗಲೇ ಶೇ 60ರಷ್ಟು ಕಾಮಗಾರಿ ಮುಗಿದಿದೆ ಇನ್ನು ಎರಡು ವಾರಗಳಲ್ಲಿ ರಸ್ತೆ ಕೆಲಸ ಆರಂಭವಾಗಲಿದ್ದು, ಇದು 50 ವರ್ಷ ಶಾಶ್ವತವಾಗಿ ಉಳಿಯುವ ಕಾಮಗಾರಿಯಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ಒಳಚರಂಡಿ ಕಾಮಗಾರಿ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಅಮೃತ್-2 ಯೋಜನೆಯ ಪೈಪ್‌ಲೈನ್ ಕಾಮಗಾರಿ, ಮಳೆನೀರು ಸರಾಗವಾಗಿ ಹರಿಯಲು ಹೂಮ್ ಪೈಪ್ ಹಾಗೂ ಚೇಂಬರ್‌ಗಳ ನಿರ್ಮಾಣ, ನಗರಸಭೆಯ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿ, ವಿದ್ಯುತ್ ಕಂಬಗಳ ಸ್ಥಳಾಂತರ, ರಸ್ತೆಗೆ ಹೊಂದಿಕೊಂಡ ಏಳು ಕಿರುರಸ್ತೆಗಳ ಆರಂಭದಲ್ಲಿ ಡ್ರೈನ್ ನಿರ್ಮಾಣ ಹಾಗೂ ಎಲ್ಲ ಕಾಮಗಾರಿ ಮುಗಿದ ಬಳಿಕ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಈ ಹಂತಗಳಲ್ಲಿ ಸೇರಿವೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಅಮೃತಾ ಗೌಡ, ನಗರದ ಎಸ್.ಎಸ್.ನಾಗರಾಜ್, ಬಿ.ಆರ್. ಅನಂತಕೃಷ್ಣ, ರಾಜೇಶ್,ವೈಶಾಕ್, ನಂದಕಿಶನ್, ರಮೇಶ್, ಜೆ.ವಿ.ಸುರೇಶ್, ಲಕ್ಷ್ಮೀನಾರಾಯಣ್, ಆರ್.ಎ.ಉಮೇಶ್, ಬೆಸ್ಕಾಂ ಎಂಜಿನಿಯರುಗಳು, ನಗರಸಭೆ ಎಂಜಿನಿಯರ್ ಗಳು ಮತ್ತಿತರರು ಹಾಜರಿದ್ದರು.
””””””””””””””””””””””””””””””””””””””””‘”””””””””””””””””””””””””””””””””
ಹರಿನಾಮ ಸಂಕೀರ್ತನೆ
ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 18, ಶನಿವಾರ ಸಂಜೆ 6-30ಕ್ಕೆ “ಹರಿನಾಮ ಸಂಕೀರ್ತನೆ” ಕಾರ್ಯಕ್ರಮ ಏರ್ಪಡಿಸಿದ್ದು, ಕು|| ನಿರೀಕ್ಷಾ ಎಂ. ರಾವ್ ಗಾಯನಕ್ಕೆ ಶ್ರೀ ನರಸಿಂಹಬಾಬು ಪಿಟೀಲುನಲ್ಲಿ ಮತ್ತು ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗದಲ್ಲಿ ಸ್ವೀಕರಿಸಲಿದ್ದಾರೆ. ಸ್ಥಳ : ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಸಾಯಿಬಾಬಾ ಮಂದಿರದ ಹತ್ತಿರ, ಪೋಲೀಸ್ ಸ್ಟೇಷನ್ ಎದುರು, ಅಮೃತಹಳ್ಳಿ, ಬೆಂಗಳೂರು











