--Ads--

ಪಾಲಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಜ್ಜಾಗೋಣ: ಎಸ್.ಬಿ.ಎಂ.ಮಂಜು

On: July 16, 2026 6:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪಾಲಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಜ್ಜಾಗೋಣ : ಎಸ್.ಬಿ.ಎಂ.ಮಂಜು

ತಾಂಡವಪುರ ಜುಲೈ 16 ಮುಂಬರುವ ಮೈಸೂರು ನಗರಪಾಲಿಕೆ ಚುನಾವಣೆಯಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಇಂದಿನಿಂದಲೇ ಸಂಘಟಿತರಾಗೋಣ ಎಂದು ಮಹಾನಗರಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು ತಿಳಿಸಿದರು.

ವಿಜಯನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.20ರ ಅಧ್ಯಕ್ಷ, ಉಪಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.

ಜಾತ್ಯಾತೀತ ಜನತಾದಳ ಪಕ್ಷ ಜನರ ಸಾಮಾನ್ಯರಿಗೆ ನೇರವಾಗಿ ಸಿಗುವ ಪಕ್ಷವಾಗಿದೆ. ಅದರಲ್ಲೂ ಚಾಮರಾಜ ಕ್ಷೇತ್ರದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಜತೆಗೆ 65 ವಾರ್ಡ್ ನಲ್ಲಿ ಶೇ.30ರಷ್ಟು ಮೀಸಲಾತಿ ಜಾರಿ ಸೇರಿ ಬರೋಬ್ಬರಿ ಅತಿಹೆಚ್ಚು ಮಹಿಳಾ ಸದಸ್ಯರೇ ಆಯ್ಕೆಯಾಗಿದ್ದಾರೆ. ರಾಜಕೀಯದಲ್ಲಿ ಮಹಿಳಾ ಮೀಸಲು ಜಾರಿಗೊಳಿಸಿ ಕೀರ್ತಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು.

ಲಾಟರಿ ನಿಷೇಧ, ಸಾಲಮನ್ನಾ, ಸಾರಾಯಿ ನಿಷೇಧದಂತಹ ಸಾಕಷ್ಟು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡರು. ಇದೆಲ್ಲವನ್ನೂ ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಜತೆಗೆ ಪ್ರತಿ ವಾರ್ಡ್ ನಲ್ಲೂ ಹೆಚ್ಚು ಸದಸ್ಯರ ನೊಂದಣಿ ಮಾಡಿಸುವ ಮೂಲಕ ಜೆಡಿಎಸ್ ಪಕ್ಷ ಬಲವರ್ಧನೆಗೊಳಿಸಬೇಕು ಎಂದರು.

ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಎನ್ನದೇ ಯಾವುದೇ ಅಭ್ಯರ್ಥಿ ನಿಂತರೂ ಮೈತ್ರಿ ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ದುಡಿಯಬೇಕು. ಮುಂದಿನ ದಿನಗಳಲ್ಲಿ ಬಹುದೊಡ್ಡ ಜೆಡಿಎಸ್ ಸಮಾವೇಶ ಮಾಡುವ ಮೂಲಕ ಮತ್ತಷ್ಟು ಸಂಘಟನೆಗೆ ಒತ್ತು ನೀಡಲಾಗುವುದು. ಕಳೆದ ಚುನಾವಣೆಯಲ್ಲಿ ಮಹಿಳೆಯರು ಗ್ಯಾರಂಟಿ ಹಣ ನಂಬಿ ಮತ ನೀಡಿದರು.

ಈಗ ಅದು ಸಹ ಸರಿಯಾಗಿ ಬರುತ್ತಿಲ್ಲ. ಆದರೆ, ಕುಮಾರಣ್ಣ ಸೊಸೈಟಿ, ಮಹಿಳಾ ಸ್ವಸಹಾಯ ಸಂಘ ಸೇರಿ ಎಲ್ಲಾ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಅಂತಹ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಕನ್ ಬೋರೇಗೌಡರವರು ಚಾಮರಾಜ ವಿಧಾನಸಭಾ ಕ್ಷೇತ್ರದ ಬಿ,ಎಲ್,ಎ 1, ಜೆಡಿಎಸ್ ಮುಖಂಡರು ಸಿದ್ದೇಗೌಡರು. ಶ್ರೀ ದೇವರಾಜ್. ಮಂಚೇಗೌಡರು, ಎನ್ ಎಲ್ ಶೇಖರ್, ಮೈಸೂರು ನಿವಾಸಿ ಬಳಗದ ಅಧ್ಯಕ್ಷ ಶ್ರೀ ಬೋರಾಪುರ ಬಸವರಾಜುರವರು. ನಿರ್ದೇಶಕ ಸೋಂಪುರ ಪುಟ್ಟರಾಮು ಡಿ ಬನುಮಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶ್ರೀ ಹೇಮಣ್ಣಗೌಡ ರವರು, ನವೀನ್, ರಮೇಶ್. ಶಂಕರ್ ಸಿದ್ದರಾಮ ಶ್ರೀನಿವಾಸ್, ಶ್ರೀ ಶಿವಪ್ರಕಾಶ್ರವರು. ಲೋಕೇಶ್ವರ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶಿವೇಗೌಡರವರು.. ಪ್ರೊಫೆಸರ್ ಲಿಂಗೇಗೌಡ. ಶ್ರೀನಿವಾಸ್ ಚಿನ್ನುಕುರಳಿ , ರಮೇಶ್ ಮಹೇಶ್, ಮಹಿಳೆಯರಾದ ಆಶಾ ಹನುಮಂತೇಶ್, ಗೀತಾಶಿವು ಹಾಗೂ ಸವಿತಾ ಸಂಪತ್ತು ರವರು ಹಾಗೂ ಇತರ ಸ್ನೇಹಿತರೊಂದಿಗೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಲಾಯಿತು.

ಇದೇ ವೇಳೆ ವಾರ್ಡ್ 20ರ ಅಧ್ಯಕ್ಷರಾಗಿ ಹನುಮಂತೇಶ್, ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಮುಖಂಡರುಗಳು ಹಾಜರಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿರೋಧಿಸಿ ಕನ್ನಡಾಂಬೆ ರಕ್ಷಣ ವೇದಿಕೆ ಮೈಸೂರು ಹೃದಯವಂತ ಕನ್ನಡಿಗರ ಬಳಗ ವತಿಯಿಂದ ಪ್ರತಿಭಟನೆ

ಚಾಮುಂಡಿ ಬೆಟ್ಟದಲ್ಲಿ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

ಸಾಮಾಜಿಕ ಸೇವೆಯ ಮೂಲಕ ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಂಡ  ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು 

ಚಾಮುಂಡಿ ಬೆಟ್ಟದ ಆಷಾಢ ಶುಕ್ರವಾರಕ್ಕೆ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತದಿಂದ ಸಕಲ‌ ಸಿದ್ಧತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ.

ಮುಳ್ಳೇಗುಡ್ಡದಲ್ಲಿರುವ ಶ್ರೀ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ: ಶಾಸಕ ದರ್ಶನ್ ಧ್ರುವನಾರಾಯಣ್ ಬೇಟಿ ಪರಿಶೀಲನೆ