--Ads--

ಮಾಧ್ಯಮಗಳಿಲ್ಲದ ಕಾಲದಲ್ಲಿ… ಮೌಖಿಕ ಜನಪದ ಪರಂಪರೆಯನ್ನು ಉಳಿಸಿ ಬೆಳೆಸಿದಂತಹ ಕೀರ್ತಿ ನಮ್ಮ ಗ್ರಾಮೀಣ ಜನರಿಗೆ ಸಲ್ಲುತ್ತದೆ: ಜನಪದ ವಿದ್ವಾಂಸ ಮೈಸೂರು ಗುರುರಾಜ್ 

On: July 18, 2026 2:59 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಮಾಧ್ಯಮಗಳಿಲ್ಲದ ಕಾಲದಲ್ಲಿ… ಮೌಖಿಕ ಜನಪದ ಪರಂಪರೆಯನ್ನು ಉಳಿಸಿ ಬೆಳೆಸಿದಂತಹ ಕೀರ್ತಿ ನಮ್ಮ ಗ್ರಾಮೀಣ ಜನರಿಗೆ ಸಲ್ಲುತ್ತದೆ: ಜನಪದ ವಿದ್ವಾಂಸ ಮೈಸೂರು ಗುರುರಾಜ್ 

ಮಾಧ್ಯಮಗಳಿಲ್ಲದ ಕಾಲದಲ್ಲಿ… ಮೌಖಿಕ ಜನಪದ ಪರಂಪರೆಯನ್ನು ಉಳಿಸಿ ಬೆಳೆಸಿದಂತಹ ಕೀರ್ತಿ ನಮ್ಮ ಗ್ರಾಮೀಣ ಜನರಿಗೆ ಸಲ್ಲುತ್ತದೆ* *ಎಂದು ಹಿರಿಯ ಜನಪದ ವಿದ್ವಾಂಸ ಮೈಸೂರಿನ ಗುರುರಾಜ್ ಅವರು ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರು ಆಗಿರುವ ಶ್ರೀಯುತರು ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ರಾಮನಗರ ಇವೆರಡರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜನಪದ ಸುಗ್ಗಿ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಬದಲಾದ ಕಾಲಘಟ್ಟದಲ್ಲಿ ಮೂಲ ಜನಪದ ಸಾಹಿತ್ಯವನ್ನು ತಿರುಚಲಾಗುತ್ತಿದೆ.ಅದು ನಿಲ್ಲಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಪದ್ಮಶ್ರೀ ಪುರಸ್ಕೃತರಾದ ಹಾಗೂ ಮಾಜಿ ಸೈನಿಕರಾದ ಮತ್ತು ಸುಮಾರು 150 ಚಲನಚಿತ್ರಗಳಲ್ಲಿ ನಟಿಸಿ ಸಾಹಸ ಸಂಕಲನ ಮಾಡಿದ ಶ್ರೀಯುತ ಹಾಸನ ರಘು ಅವರು ಮಾತನಾಡುತ್ತಾ.. ನಮ್ಮ ಪೂರ್ವಜರು ನಮಗೆ ನೀಡಿರುವ ಈ ಜನಪದ ಸಂಸ್ಕೃತಿಯ ಬಳುವಳಿಯನ್ನು ನಾವು ಕಾಪಿಟ್ಟುಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.

ಈ ಸಮಾರಂಭದಲ್ಲಿ ವಿಚಾರ ಮಂಡಿಸಿದ ನಿವೃತ್ತ ಪ್ರಾಂಶುಪಾಲರು ಹಾಗೂ ಜನಪದ ವಿದ್ವಾಂಸರು ಆದ ಶ್ರೀಯುತ ಪ್ರೊಫೆಸರ್ ವ.ನಂ . ಶಿವರಾಮು ಅವರು ಮಾತನಾಡುತ್ತಾ ಸಮಾರಂಭದ ಸಂಘಟಕರಾದ ಸುಗ್ಗಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಶ್ರೀ ಕಾಳಯ್ಯನವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಜನಪದ ಕಲಾವಿದರನ್ನು ಸೂಕ್ತ ಸಂಭಾವನೆ ಯೊಂದಿಗೆ ಪ್ರೋತ್ಸಾಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಶ್ರೀ ಶಿವಲಿಂಗಯ್ಯನವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರ ಶ್ರೀ ಪ್ರಭಾಕರ್ ಮತ್ತು ರಂಗಭೂಮಿ ನಟ ಮತ್ತು ನಿರ್ದೇಶಕ ಎಂ ಸಿ ನಾಗರಾಜ್ ಅವರುಗಳು ಪಾಲ್ಗೊಂಡಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಾಗೂ ಕಲಾವಿದರಾದ ಶ್ರೀಯುತ ಚಿಕ್ಕಮರಿಗೌಡರು ವಹಿಸಿದ್ದರು
ಜನಪದ ಸುಗ್ಗಿ ಸಂಭ್ರಮದ ಪ್ರಯುಕ್ತ ಸುತ್ತಮುತ್ತಲ ಗ್ರಾಮದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾನಪದ ಸಮೂಹ ನೃತ್ಯವನ್ನು ಹಾಗೂ ಭರತನಾಟ್ಯವನ್ನು ಆಯೋಜಿಸಲಾಗಿತ್ತು.

ಚಿಕ್ಕಮುದುವಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಶ್ರೀಯುತ ಎಚ್.ಎಸ್ ನಾಗೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಶ್ರೀಯುತ ಮುನಿಚೌಡಯ್ಯ ಅವರು ಸ್ವಾಗತಿಸಿದರು. ಶ್ರೀ ಶಂಕರ್ ಭಾರತಿಪುರ ಅವರು ಪ್ರಾರ್ಥಿಸಿದರು.

ಕಾರ್ಯಕ್ರಮದ ರೂವಾರಿಗಳಾದ ಹಾಗೂ ಸುಗ್ಗಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀ ಕಾಳಯ್ಯನವರು ವಂದಿಸಿದರು

WhatsApp

Join Now

Telegram

Join Now

Instagram

Join Now