ವಿಜಯ ದರ್ಪಣ ನ್ಯೂಸ್….
ವೇದ ವ್ಯಾಸರ ಆದರ್ಶಗಳನ್ನು ಪಾಲಿಸಬೇಕು ಜೆಎಸ್ ರಾಮಚಂದ್ರಪ್ಪ

ಮಹರ್ಷಿ ವೇದ ವ್ಯಾಸರು ಕ್ರಿ.ಪೂ 3000 ರಲ್ಲಿ ಆಷಾಢ ಪೂರ್ಣಿಮಾ ದಿನದಂದು ಜನಿಸಿದರು. ಅವರ ಗೌರವಾರ್ಥವಾಗಿ, ಗುರು ಪೂರ್ಣಿಮಾ ಮತ್ತು ವ್ಯಾಸ ಪೂರ್ಣಿಮ ಹಬ್ಬವನ್ನು ಪ್ರತಿವರ್ಷ ಆಷಾಢ ಶುಕ್ಲ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಎಂದು ವಿದ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ತಿಳಿಸಿದರು.
ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಅರ್ಜುನ ನಿರ್ಮಿತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಚೆನ್ನಕೇಶವ ಸ್ವಾಮಿ ವ್ಯವಸ್ಥಾಪನ ಸಮಿತಿಯ ಸಹಕಾರದೊಂದಿಗೆ ಶ್ರೀ ಕೃಷ್ಣ ಯತಿಂದ್ರ ಸೇವಾ ಟ್ರಸ್ಟ್ ರವರ ವತಿಯಿಂದ ಶ್ರೀ ಶ್ರೀ ಶ್ರೀಮಂತ ಭಗವದ್ಗೀತಾ ಪಾರಾಯಣ ಶ್ರೀ ಶ್ರೀ ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ ಗೀತಾ ತತ್ವಾಮೃತ ರಸಧಾರೆಯ 253ನೇ ಕಾರ್ಯಕ್ರಮ ಹಾಗೂ ಶ್ರೀಷ್ಣ ಮಾಸಿಕ ದ್ವಾದಶಿ ವಿಚಾರಧಾರೆಯ ಗೋಷ್ಟಿಯ 204 ನೇ ಕಾರ್ಯಕ್ರಮದಲ್ಲಿ ಶ್ರೀ ಸಂಗಮ ಶಾಂತಾ ಶ್ರಮ ಪೀಠಾಧಿಪತಿಗಳಾದ ಶ್ರೀ ಜೆಎಸ್ ರಾಮಚಂದ್ರಪ್ಪ* ವ್ಯಾಸ ಹುಣ್ಣಿಮೆ ಪ್ರಯುಕ್ತ ಸದ್ಗುರು ಮಹಿಮೆ*ದೇಶಾದ್ಯಂತ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯೆನ್ನು ಆಷಾಢ ಶುದ್ಧ ಪೂರ್ಣಿಮೆಯಂದು ಆಚರಿಸಲಾಗುವುದು. ಮತ್ತೊಂದು ವಿಶೇಷವೇನೆಂದರೆ ಒಂದು ವರ್ಷದಲ್ಲಿ ನಾಲ್ಕು ವ್ಯಾಸ ಪೂರ್ಣಿಮೆ ಬರುವುದು,
1) ಆಷಾಢ ಶುದ್ಧ ಪೂರ್ಣಿಮೆ – ಇದು ವೇದವ್ಯಾಸರು ಅವತರಿಸಿದ ದಿನ.
2) ಕಾರ್ತಿಕ ಶುದ್ಧ ಪೂರ್ಣಿಮೆ – ವ್ಯಾಸರಿಗೆ ಗುರುವಿನ ಅನುಗ್ರಹವಾದ ದಿವಸ.
3) ಮಾಘ ಶುದ್ಧ ಪೂರ್ಣಿಮೆ – ವೇದಗಳನ್ನು ವಿಂಗಡನೆ ಮಾಡಿದ ದಿವಸ.
4) ವೈಶಾಖ ಶುದ್ಧ ಪೂರ್ಣಿಮೆ – ವೇದವ್ಯಾಸರು ಅವತಾರ ಸಮಾಪ್ತಿ ಮಾಡಿದ ದಿನ .
ಈ ನಾಲ್ಕು ವ್ಯಾಸ ಪೂರ್ಣಿಮೆಯಲ್ಲಿ ಆಷಾಢ ಶುದ್ಧ ಹುಣ್ಣಿಮೆಯನ್ನು ಎಲ್ಲರೂ ಗುರುಪೂರ್ಣಿಮೆ ಎಂದು ಆಚರಿಸುತ್ತಾರೆ.
ಮುನಿಗಳು “ನಿನ್ನ ಕನ್ಯತ್ವಕ್ಕೆ ಧಕ್ಕೆ ಬರದಂತೆ ಈ ಲೋಕಕ್ಕೆ ಜಗತ್ಪ್ರಸಿದ್ಧಿಯಾದ ಒಬ್ಬ ವ್ಯಕ್ತಿಯು ಹುಟ್ಟುವವನೆ೦ದು ಹೇಳಿ” ತನ್ನ ಕಮಂಡಲದ ನೀರನ್ನು ಸಿಂಪಡಿಸಿ ಸುತ್ತಲೂ ಕತ್ತಲೆ ಆವರಿಸುವಂತೆ ಮಾಡಿ ಅವಳನ್ನು ಕೂಡಿದ,ಆ ಗರ್ಭ ಶಿಶುವೆ ಮು೦ದೆ ಜಗತ್ಪ್ರಸಿದ್ಧಿ ಯಾದ “ವೇದವ್ಯಾಸ”. ಅವನು ನದಿ ಮಧ್ಯದಲ್ಲಿ ಹುಟ್ಟಿದ್ದರಿ೦ದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಅವನೇ ಮುಂದೆ ನಾಲ್ಕು ವೇದಗಳನ್ನು ವಿಂಗಡನೆ ಮಾಡಿ, ಹದಿನೆಂಟು ಪುರಾಣಗಳು, ಉಪನಿಷತ್ತು, ಗೀತೆ, ಮಹಾಭಾರತ ಎಲ್ಲವನ್ನೂ ರಚಿಸಿದನು. ಅ೦ತಹ ಮಹಾತ್ಮನು ಅವತರಿಸಿದ ಈ ದಿನವೇ ಗುರುಪೂರ್ಣಿಮೆ ಅಥವ ವ್ಯಾಸ ಹುಣ್ಣಿಮೆ ಎಂದು ಪ್ರಸಿದ್ಧವಾಯಿತು.
ಈ ವೇದವ್ಯಾಸರೇ ತನ್ನ ತಾಯಿಗೆ ಸತ್ಯವತಿ ಎಂಬ ಹೆಸರಿಟ್ಟರು. ಇವಳೆ ಮು೦ದೆ ಶಂತನು ಎಂಬ ಚಕ್ರವರ್ತಿಯ ಜೊತೆಗೆ ಮದುವೆ ಮಾಡಿಕೊಂಡು, ಕೌರವರು ಪಾಂಡವರ ಕುಲಕ್ಕೆ ನಾಂದಿ ಹಾಡಿದಳು.
ವೇದವ್ಯಾಸರು ಅನೇಕ ಗ್ರಂಥಗಳನ್ನು ರಚಿಸಿ,ನಮ್ಮ ಹಿಂದೂ ಧರ್ಮದ ಭದ್ರ ಬುನಾದಿಯನ್ನು ಹಾಕಿದರು ಆದ್ದರಿಂದಲೇ ಅವರನ್ನು ಗುರು ಎಂದು ಸ್ವೀಕರಿಸಿ ,ಅವರು ಅವತಾರ ಮಾಡಿದ ದಿನದಂದು ವ್ಯಾಸ ಅಥವಾ ಗುರು ಪೂರ್ಣಿಮೆ ಎ೦ದು ಭಾರತಾದ್ಯಂತ, ಈ ದಿನದಂದು ಗುರುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಎಂದು ತಿಳಿಸಿದರು

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಮೇಶ್ ಸ್ವಾಮಿಗಳು ವಹಿಸಿದರು ಮುಖ್ಯ ಅತಿಥಿಗಳಾಗಿ ವಿದ್ಯಾದ್ರಿ ಪದವಿ ಪೂರ್ವ ಕಾಲೇಜು ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ನಾಗವೇಣಿ ಕೆ ದೇವರಾಜ್ ಶ್ರೀಮತಿ ಮಂಜುಳಾ ವೆಂಕಟೇಶ್ ಶ್ರೀಮತಿ ವಿಎನ್ ತ್ರಿಷಾ ಎಲ್ ಚರಣ್ ಕುಮಾರ್ ಸೌದಿ ವ್ಯಾಪಾರಿಗಳಾದ ಅಂಜಿನಪ್ಪ , ರತ್ನಮ್ಮ ರಾಮದಾಸ್,ಅನಿತಾ ರಾಮದಾಸ್ ವಿ.ಎನ್ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಐದು ಬಡ ಮಹಿಳೆಯರಿಗೆ ಕಂಬಳಿ ಸೀರೆ ಕುಪ್ಪಸ ಮೂರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನುವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಎಂವಿ ನಾಯ್ಡು ಅನಿಲ್ ಕುಮಾರ್ ರವರ ವಾದ್ಯದೊಂದಿಗೆ ಶ್ರೀಮತಿ ರಾಧಾಮಣಿ ಸೀತಾಲಕ್ಷ್ಮೀ ಭಾಸ್ಕರ್ ನರಸಿಂಹಪ್ಪ ಮುನಿರಾಜು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
£££££££££££££££££££££££££££££££££
ಸೋದೆ ಶ್ರೀ ವಾದಿರಾಜ ಮಠಾಧೀಶರಿಂದ
“ಭಾಗವತ ಕಥಾ ಪ್ರವಚನ”

ಬೆಂಗಳೂರು : ಶ್ರೀಕೃಷ್ಣ ಸೇವಾ ಸಮಾಜ ಟ್ರಸ್ಟ್ ವತಿಯಿಂದ ಸೋದೆ ಶ್ರೀ ವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು ಜುಲೈ 18 ರಿಂದ 24ರ ವರೆಗೆ ಪ್ರತಿದಿನ ಸಂಜೆ 4-00 ರಿಂದ 6-30ರ ತನಕ ನಗರದ ಕೆ.ಆರ್. ರಸ್ತೆಯಲ್ಲಿರುವ ಶ್ರೀಕೃಷ್ಣ ವಾದಿರಾಜ ಮಂದಿರದಲ್ಲಿ (ರಾಯ ರಾಯ ಕಲ್ಯಾಣ ಮಂಟಪದ ಆವರಣದಲ್ಲಿ) “ಶ್ರೀಮದ್ಭಾಗವತ” ಪ್ರವಚನ ನೀಡಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹರಿ ವಾಯು ಗುರುಗಳ ಅನುಗ್ರಹದಿಂದ ಪಾತ್ರರಾಗಬೇಕೆಂದು ಶ್ರೀಮಠದ ಪದಾಧಿಕಾರಿಗಳು ವಿನಂತಿಸಿದ್ದಾರೆ.











