--Ads--

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು

On: July 22, 2026 4:45 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು

ದೈಹಿಕ ಮತ್ತು ಮಾನಸಿಕ ಧನಾತ್ಮಕ ಬೆಳವಣಿಗೆಯಲ್ಲಿ ಕ್ರೀಡಾ ಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ  ಎಂ. ಮರಿಸ್ವಾಮಿಯವರು ಹೇಳಿದರು.

ಅವರು 2026-27ನೇ ಶೈಕ್ಷಣಿಕ ವರ್ಷದ ಕನಕಪುರ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಕ್ರೀಡೆ ಸ್ಪರ್ಧೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು

ತಾಲೂಕಿನ ಚಿಕ್ಕಮುದುವಾಡಿ ಮತ್ತು ದೊಡ್ಡ ಆಲಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಕನಕಪುರದ ಎಕ್ಸ್ ಮುನ್ಸಿಪಲ್ ಕಾಲೇಜಿನ ಆವರಣದಲ್ಲಿ ಆಯೋಜಿಸ ಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ ತಾಲೂಕಿನ 9 ಕಾಲೇಜುಗಳು ಪಾಲ್ಗೊಂಡಿದ್ದು , ಹೆಚ್ಚಿನ ಕ್ರೀಡಾಪಟುಗಳು ಬೇರೆ ಬೇರೆ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು

ಕಾರ್ಯಕ್ರಮದಲ್ಲಿ ಚಿಕ್ಕ ಮುದುವಾಡಿ ಕಾಲೇಜಿನ ಪ್ರಾಂಶುಪಾಲ ಕೆ ತಮ್ಮಣ್ಣ, ದೊಡ್ಡ ಆಲಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಡಾ. ಕುಮಾರ್, ಕನಕಪುರದ ಎಕ್ಸ್ ಮುನಿಸಿಪಾಲ್ ಕಾಲೇಜಿನ ಪ್ರಾಂಶುಪಾಲ  ದೊಡ್ಡಬೋರಯ್ಯ ನಿವೃತ್ತ ಪ್ರಾಂಶುಪಾಲ ಕೊತ್ತಿಪುರದ ಶಿವಣ್ಣ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ  ಪ್ರದೀಪ್, ಹಾಗೂ ತಾಲೂಕಿನ ಎಲ್ಲಾ ಕಾಲೇಜಿನ ಕ್ರೀಡಾ ಉಸ್ತುವಾರಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ