--Ads--

ರೈತರ ಸಮಸ್ಯೆಯನ್ನು ವಿದಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವೆ : ಬಿ.ವೈ.ವಿಜಯೇಂದ್ರ ರೈತರಿಗೆ ಭರವಸೆ

On: August 10, 2026 3:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ರೈತರ ಸಮಸ್ಯೆಯನ್ನು ವಿದಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವೆ : ಬಿ.ವೈ.ವಿಜಯೇಂದ್ರ ರೈತರಿಗೆ ಭರವಸೆ

ಶಿಡ್ಲಘಟ್ಟ : ಇದೇ ತಿಂಗಳ 13 ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದೆ ,ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಶೇ. 85ಕ್ಕೂ ಹೆಚ್ಚು ರೈತರು ಜಮೀನುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದಿದ್ದಾರೆ ಈ ಬಗ್ಗೆ ರೈತರ ಸಮಸ್ಯೆಯನ್ನು ಸದನದಲ್ಲಿ ಪ್ರಸ್ತಾಪಿಸಿ, ಅವರ ಪರವಾಗಿ ಧ್ವನಿ ಎತ್ತುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭರವಸೆ ನೀಡಿದರು.

ತಾಲ್ಲೂಕಿನ ಜಂಗಮಕೋಟೆ ಸುತ್ತಮುತ್ತಲ ಭಾಗಕ್ಕೆ ಭೇಟಿ ನೀಡಿದ ಅವರು, ಬರ ಪರಿಸ್ಥಿತಿ ಪರಿಶೀಲಿಸಿದರಲ್ಲದೆ ಸರ್ಕಾರದ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳನ್ನು ಪರಿಶೀಲಿಸಿ ರೈತರು ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.

ಜಂಗಮಕೋಟೆ ಹೋಬಳಿಯ 13 ಗ್ರಾಮಗಳ ಶೇ. 85ಕ್ಕೂ ಹೆಚ್ಚು ರೈತರು ಜಮೀನುಗಳನ್ನು ಸರ್ಕಾರಕ್ಕೆ ನೀಡುವುದಿಲ್ಲಎಂದು ಸ್ಪಷ್ಟವಾಗಿ ಹೇಳಿದ್ದಾರೆ, ಆದರೂ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಿರುವುದು ಏಕೆ ..? ರೈತರ ಒಪ್ಪಿಗೆಯಿಲ್ಲದೆ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದ ಉದ್ದೇಶವಿದೆ ಎಂಬ ಅನುಮಾನ ಮೂಡಿದೆ ರೈತರ ಹೋರಾಟದಲ್ಲಿ ಪಕ್ಷ ಅವರೊಂದಿಗೆ ನಿಲ್ಲಲಿದೆ ಎಂದರು.

ಕಾಂಗ್ರೆಸ್ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿದೆ ಹೂವು ಹಣ್ಣು, ತರಕಾರಿ ಹಾಗೂ ರೇಷ್ಮೆ, ಹೈನುಗಾರಿಕೆಯನ್ನು ನಂಬಿಕೊಂಡು ಬದುಕುತ್ತಿರುವ ರೈತರ ಫಲವತ್ತಾದ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಕಿತ್ತುಕೊಳ್ಳುವ ಪ್ರಯತ್ನ ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಸ್ವಾಧೀನ ವಿರೋಧಿ, ಭೂ ಹೋರಾಟ ಸಮಿತಿ ಮುಖಂಡರು ಹಾಗು ರೈತಸಂಘದ ಕಾರ್ಯಾದ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮತ್ತು ರೈತರು ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸಿದರು ,ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯಲು ಮನವಿ, ಪ್ರತಿಭಟನೆ ಸೇರಿ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದೇವೆ ಆದರೂ ಇದುವರೆಗೆ ರೈತರ ಆತಂಕಕ್ಕೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಬೈರೇಗೌಡ ವಿವರಿಸಿದರು.ಕೃಷಿಯನ್ನೇ ನಂಬಿಕೊಂಡಿರುವ ರೈತರಿಗೆ ಒಂದೆಡೆ ಬರ ಪರಿಸ್ಥಿತಿ ಸಂಕಷ್ಟ ತಂದಿದ್ದರೆ, ಮತ್ತೊಂದೆಡೆ ಭೂಸ್ವಾಧೀನದ ಆತಂಕ ಎದುರಾಗಿದೆ, ರೈತರು ಜಮೀನುಗಳನ್ನು ಉಳಿಸಿಕೊಳ್ಳಲು 150ಕ್ಕೂ ಹೆಚ್ಚು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ ರಾಜ್ಯ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಈ ವೇಳೆ ಅವರಲ್ಲಿ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್‌ ರಾಮಚಂದ್ರಗೌಡ ಮಾತನಾಡಿ, ಜಂಗಮಕೋಟೆ ಕ್ರಾಸ್ ಬಳಿ ಬರ ಪರಿಸ್ಥಿತಿಯ ಕುರಿತು ಸ್ಥಳ ಪರಿಶೀಲಿಸಿ, ರೈತರು ಹಾಗೂ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ, ಮಳೆ ಕೊರತೆ, ಕೃಷಿ ಚಟುವಟಿಕೆಗಳು ಹಾಗೂ ಸ್ಥಳೀಯವಾಗಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದು
ರೈತರ ಹೋರಾಟದಲ್ಲಿ ಪಕ್ಷದ ಮುಖಂಡರು ಭಾಗವಹಿಸಿದ್ದು, ರೈತರ ಪರವಾಗಿ ವಿಧಾನಸಭೆಯಲ್ಲಿಯೂ ಧ್ವನಿ ಎತ್ತುವಂತೆ ವಿಜಯೇಂದ್ರ ಅವರನ್ನು ಮನವಿ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ,
ಮುಖಂಡರಾದ ವೇಣುಗೋಪಾಲ್,ಸೀಕಲ್ ಆನಂದಗೌಡ,ಬಿಸಿ.ನಂದೀಶ್ ,ಕಂಬದಹಳ್ಳಿ ಸುರೇಂದ್ರಗೌಡ, ನರೇಶ್, ದೇವರಾಜ್,ಪ್ರತಾಪ್, ಮೋಹನ್,ರಾಗಿಣಿ, ಮಂಜುಳಾ, ತ್ರಿವೇಣಿ, ಅಂಜನೇಯಗೌಡ ,ರೈತ ಸಂಘದ ತಾದೂರು ಮಂಜುನಾಥ್ ,ವೀರಾಪುರ ಮುನಿನಂಜಪ್ಪ,ಹೀರೇಬಲ್ಲ ಕೃಷ್ಣಪ್ಪ ,ಕೆಂಪಣ್ಣ,ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now