--Ads--

ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದವರನ್ನು ನೆನಪಿಸಿಕೊಳ್ಳಬೇಕು : ಬಿ ವಿನಯ್ ಕುಮಾರ್.

On: August 11, 2026 9:13 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದವರನ್ನು ನೆನಪಿಸಿಕೊಳ್ಳಬೇಕು : ಬಿ ವಿನಯ್ ಕುಮಾರ್

ದೇವನಹಳ್ಳಿ ತಾಲ್ಲೂಕು: ವಿಜಯಪುರ ಪಟ್ಟಣದ ನಗರ್ತ ಯುವಕ ಸಂಘವು 27 ವರ್ಷದಿಂದ ನಗರ್ತ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ .

1997ರಲ್ಲಿ ಕೇವಲ ಐದು ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಬೃಹತ್ಕಾರವಾಗಿ ಬೆಳದಿದ್ದು ಮುಂದೆಯೂ ನೀವು ಸಹ ಉನ್ನತ ಅಧಿಕಾರಿ ಗಳಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂದು ಪ್ರಾಸ್ತಾವಿಕವಾಗಿ ಯೋಜನಾ ನಿರ್ದೇಶಕ ಎ ಮಧು ತಿಳಿಸಿದರು.

ವಿಜಯಪುರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ನಗರ್ತ ಯುವಕ ಸಂಘ ಮತ್ತು ಕೋರಮಂಗಲ ರುದ್ರಪ್ಪ ಟ್ರಸ್ಟ್ ಸಂಯುಕ್ತವಾಗಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸವಲತ್ತು ಕಾರ್ಯಕ್ರಮಗಳನ್ನು
ಏರ್ಪಡಿಸಲಾಗಿತ್ತು

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಶಿಕ್ಷಕ ಸಿ. ವಿನಯ್ ಕುಮಾರ್ ರವರು ಮಾತನಾಡುತ್ತಾ . ಎ.ಪಿ.ಜೆ. ಅಬ್ದುಲ್ ಕಲಾಂ (ಅವಲ್ ಪಾಕಿರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ) 1931 ರ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಅವರ ತಂದೆ ಜೈನುಲಾಬ್ದೀನ್ ಮತ್ತು ತಾಯಿ ಆಶಿಯಮ್ಮ. ಕಲಾಂ ಅವರು ತಮ್ಮ ಬಾಲ್ಯದ ಪತ್ರಿಕೆಗಳನ್ನು ಹಂಚುವ ಕೆಲಸ ಮಾಡುತ್ತಿದ್ದರು. ಎ.ಪಿ.ಜೆ. ಅಬ್ದುಲ್ ಕಲಾಂ (ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ) ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಅವರು ಪ್ರಸಿದ್ಧ ವಿಜ್ಞಾನಿ ಹಾಗೂ “ಮಿಸೈಲ್ ಮ್ಯಾನ್” ಎಂದೇ ಖ್ಯಾತಿ ಪಡೆದವರು.

ಮಕ್ಕಳು ಶಿಕ್ಷಣದ ಜೊತೆಯಲ್ಲಿ ಕೌಶಲ್ಯತೆ ಗಳನ್ನು ಬೆಳೆಸಿಕೊಂಡು ಇಂದಿನ ಮಕ್ಕಳು ಚೆನ್ನಾಗಿ ವ್ಯಾಸಂಗ ಮಾಡಿ ಕೆ ಎ ಎಸ್ ಐಎಎಸ್ ಅಧಿಕಾರಿಗಳಾಗಿ ಸಮಾಜಕ್ಕೆ ಒಳ್ಳೆಯ ಹೆಸರನ್ನು ತರಬೇಕೆಂದು ಕರೆ ನೀಡಿದರು. ವಿದ್ಯಾರ್ಥಿ ವೇತನ ನೀಡಿದವರನ್ನು ನೆನಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಮಾರಂಭದಲ್ಲಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ. ಭಾಸ್ಕರ್ ಮಾತನಾಡುತ್ತಾ ಕೋರಮಂಗಲ ರುದ್ರಪ್ಪನವರು 1934ರಲ್ಲಿ ಕೋರಮಂಗಲ ರುದ್ರಪ್ಪ ಟ್ರಸ್ಟ್ ರಚನೆ ಮಾಡಿ , ಹೊರಗಡೆಯಿಂದ ಬಂದ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತಮ್ಮ ಕಟ್ಟಡವನ್ನೇ ಬಳುವಳಿಯಾಗಿ ನೀಡಿದರು. ಶ್ರೀಯುತರ ಬೈಲಾಪ್ರಕಾರ ಪ್ರಾಣಿ ಪಕ್ಷಿಗಳಿಗೆ ಊಟ ಹಾಕುವುದು ದೇವಸ್ಥಾನಗಳಿಗೆ ದೀಪಾರತಿ ಮಾಡಿಸುವುದು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದು ಮೂಲ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮೀನಾಕುಮಾರಿ ಸುರೇಶ್ ಬಾಬು ತಂದೆಯವರಾದ ತುಪ್ಪದ ಚಿಕ್ಕವೀರಭದ್ರಪ್ಪ ಮತ್ತು ವೇದವತಮ್ಮ ಮಣ್ಣೆಪ್ಪರವರ ಸ್ಮರಣಾರ್ಥವಾಗಿ 50,001/- ಮತ್ತು ರೋಟರಿ ಸಂಘದ ಮಾಜಿ ಅಧ್ಯಕ್ಷರಾದ ವಿ ವಿನಯ ಕುಮಾರ್ 5000/- ರೂಗಳನ್ನು ವಿದ್ಯಾರ್ಥಿಗಳ ಸವಲತ್ತಿಗಾಗಿ ನೀಡಿದರು.

ಪ್ರತಿಭಾ ಪುರಸ್ಕಾರ ಪಡೆದ ಕುಮಾರಿ ದೀಪಶ್ರೀ ಮಾತನಾಡುತ್ತಾ ನಾವು ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಮುಂದಿನ ಗುರಿಯನ್ನು ಇಟ್ಟುಕೊಂಡು ವ್ಯಾಸಂಗ ಮಾಡಿದರೆ ನಾವು ಸಹ ದೇಶದಲ್ಲಿ ಪ್ರಜೆಯಾಗಿ ಬೆಳೆಯಬಹುದೆಂದು ತಿಳಿಸುತ್ತಾ ತಂದೆ ತಾಯಿಗಳಿಗೆ ಮತ್ತು ಗುರುಗಳಿಗೆ ಪೂಜ್ಯ ಭಾವನೆಯಿಂದ ಗೌರವಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ಶಾಂತಮ್ಮ ಶಿವಶಂಕರ್ ಗೌರವ ಸಮರ್ಪಣೆ ಮಾಡಲಾಯಿತು. ನಗರ್ತ ಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಎಸ್ ಎಸ್ ಎಲ್ ಸಿ ಮಕ್ಕಳಿಗೆ 5 ಮಂದಿಗೆ ಮತ್ತು ಪಿಯುಸಿ ಎಂಟು ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 35 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ಸವಲತ್ತು ನೀಡಿ ಗೌರವಿಸಲಾಯಿತು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಗರ್ತ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡುತ್ತಾ ನಮ್ಮ ನಗರ್ತ ಜನಾಂಗವು ದಾನ ಧರ್ಮಕ್ಕೆ ಶ್ರೇಷ್ಠವಾಗಿದೆ. ಮಕ್ಕಳು ಚೆನ್ನಾಗಿ ವ್ಯಾಸಂಗ ಮಾಡಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕೆಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮ. ಸುರೇಶ್ ಬಾಬು ಕಾರ್ಯದರ್ಶಿ ಆರ್ ವಿಶ್ವಾಸ್, ಸಹ ಕಾರ್ಯದರ್ಶಿ ಸುಮನ್ ಯೋಜನಾ ನಿರ್ದೇಶಕ ಎ ಮಧು, ವಿ ಹರ್ಷ, ಎಸ್ ಸುರೇಶ್ ಬಾಬು ಮಾಜಿ ಗೌರವಾಧ್ಯಕ್ಷ ಎನ್ ರುದ್ರ ಮೂರ್ತಿ ಬಿಸಿ ಸಿದ್ದರಾಜು ಶಿವಪ್ರಸಾದ್ ಮಹಾಂತೀನ ಮಠ ಧರ್ಮ ಸಂಸ್ಥೆಯ ಅಧ್ಯಕ್ಷ ಪುನೀತ್ ಶಿವಕುಮಾರ್ ಸಿ ಮಹೇಶ್ ಕಾರ್ಯದರ್ಶಿಗಳಾದ ವಿ. ವಿಶ್ವನಾಥ್, ಡಿ ನವೀನ್, ಸಿ ಸುರೇಶ್ ಬಾಬು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now