--Ads--

ಕರ್ನಾಟಕ ಸರ್ಕಾರದ ನೌಕರರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ ಭಾಗಿ

On: August 11, 2026 12:13 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕರ್ನಾಟಕ ಸರ್ಕಾರದ ನೌಕರರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮ:ಸಚಿವ ಕೆ.ಹೆಚ್ ಮುನಿಯಪ್ಪ ಭಾಗಿ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.11:

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ನೌಕರರೊಂದಿಗಿನ ಮುಖ್ಯಮಂತ್ರಿಗಳ ವಿಡಿಯೋ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂವಾದದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಭಾಗಿಯಾಗಿದರು.

ಸಂವಾದದಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಎಸ್ಐಆರ್ ಪ್ರಕ್ರಿಯೆ, ಭಾರಾತ್ ಜೋಡೋ ಯುವಕರ ಸಂಘ ಸ್ಥಾಪನೆ, ವಿಬಿಜಿರಾಂಜಿ ಕಾಯ್ದೆ ಅಡಿಯಲ್ಲಿ ಉದ್ಯೋಗ ಸೃಷ್ಟಿ, ನಶಾ ಮುಕ್ತ ಕರ್ನಾಟಕ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಮಾನ್ಯ ಮುಖ್ಯ ಮಂತ್ರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ ಅಧಿಕಾರ ಒಂದು ಶಕ್ತಿಯ ಸಂಕೇತವಲ್ಲ. ಅದು ಜನ ಸೇವೆ ಮಾಡಲು ದೊರೆತಿರುವ ಸುವರ್ಣ ಅವಕಾಶ. ಈ ಅವಕಾಶವನ್ನು ನ್ಯಾಯಯುತವಾಗಿ ಬಳಸಿಕೊಂಡು ಜನಸೇವೆ ಮಾಡಬೇಕು ಎಂದರು.

ಸರ್ಕಾರಿ ನೌಕರಿ ಸಿಕ್ಕಿರುವುದು ನಿಮ್ಮ ಸೌಭಾಗ್ಯ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಜನರ ಸೇವೆ ಮಾಡಬೇಕು. ಕೆಂಗಲ್ ಹನುಮಂತಯ್ಯ ಅವರು ಖೈದಿ ಗಳಿಂದ ವಿಧಾನಸೌಧವನ್ನು ಕಟ್ಟಿಸಿದರು. ಈ ವಿಧಾನಸೌಧ ಇರುವುದು ಜನರ ಸೇವೆ ಮಾಡಲು ಎಂದರು.

ಸರ್ಕಾರಿ ನೌಕರರು ಸರ್ಕಾರ ಮತ್ತು ಜನರ ನಡುವೆ ಒಂದು ದೊಡ್ಡ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 7 ಕೋಟಿ ಜನರ ನಡುವೆ 5.5 ಲಕ್ಷ ಸರ್ಕಾರಿ ನೌಕರರು ಇದ್ದೀರಿ. ಇದು ನಿಮ್ಮ ಅದೃಷ್ಟ ಎಂದು ಭಾವಿಸಿ. ಸರ್ಕಾರಿ ನೌಕರರು ಉತ್ತವಾಗಿ ಸೇವೆ ಮಾಡಿದ್ದರಿಂದ ಇಂದು ಕರ್ನಾಟಕ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದೆ ಎಂದರು.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕರ್ನಾಟಕದಲ್ಲಿ ಯುವ ಜನತೆ ಹೆಚ್ಚು ಇದೆ. ಈ ಯುವಜನತೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ. ನಮ್ಮಲ್ಲಿ ಇರುವ ತಂತ್ರಜ್ಞಾನ ಬೇರೆಲ್ಲೂ ಇಲ್ಲ. ಬೆಂಗಳೂರು ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರು ತಾವು ಕೆಲಸ ಮಾಡುವ ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ವಾಸವಿರಬೇಕು. ನೌಕರರು ಕ್ಷೇತ್ರ ಬೇಟಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಇದರಿಂದ ಸಾರ್ವಜನಿಕರಿಗೆ ಸುಲಭವಾಗಿ ದೊರೆಯಲು ಸಾಧ್ಯವಾಗುತ್ತದೆ. ತಾವು ನಿಸ್ವಾರ್ಥ ಜನ ಸೇವೆ ಮಾಡಬೇಕು. ಕಾನೂನು ಬಿಟ್ಟು ಕೆಲಸ ಮಾಡಿ ಎಂದು ಹೇಳುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನಮ್ಮ ಸರ್ಕಾರದ ಆಧ್ಯತೆ ಎಂದರು.

ಜನರ ಸೇವೆ ಮಾಡಲು ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭಿಸಲಾಗಿದೆ. ಮಂತ್ರಿಗಳು ಮೊದಲ ಮತ್ತು ಮೂರನೇ ಶನಿವಾರ ತಾಲ್ಲೂಕು ಮಟ್ಟದಲ್ಲಿ ಪ್ರಜಾ ಸೇವೆ ಸಭೆಗಳನ್ನು ನಡೆಸಬೇಕು. ಇಲ್ಲಿ ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡಬೇಕು. ಪ್ರತಿ ಪಂಚಾಯತ್ ಮಟ್ಟದಲ್ಲಿ ಭಾರತ್ ಜೋಡೋ ಯುವಕರ ಸಂಘಗಳನ್ನು ಪ್ರಾರಂಬಿಸಲಾಗುತ್ತದೆ. ಪ್ರತಿ ಸಂಘಕ್ಕೆ 10 ಲಕ್ಷ ಅನುಧಾನ ನೀಡಿ, ಯುವ ಜನತೆಯನ್ನು ಉತ್ತೇಜನ ನೀಡಿ ಅವರ ಪ್ರತಿಭೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ಗ್ರಾಮೀಣ ಭಾಗದ 1.1 ಕೋಟಿ ಜನರಿಗೆ ಹಾಗೂ ಬೆಂಗಳೂರಿನ 25 ಲಕ್ಷ ಜನರಿಗೆ ಅವರ ನಿವೇಶನ ಖಾತೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲು ಕ್ರಮವಹಿಸಲಾಗಿದೆ. ಇದು ಸರ್ಕಾರದ 6 ನೇ ಭೂ ಗ್ಯಾರೆಂಟಿ ಯೋಜನೆಯಾಗಿದೆ. ಎಸ್ ಐ ಆರ್ ಪ್ರಕ್ರಿಯೆ ಶೇಕಡಾ 100 ರಷ್ಟು ಆಗಬೇಕು. ಯಾವುದೇ ಅರ್ಹ ಮತದಾರರು ಮತಪಟ್ಟಿಯಿಂದ ಹೊರ ಉಳಿಯಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಿವೇಶನ ರಹಿತರಿಗೆ ನಿವೇಶನ ನೀಡಲು ಅಗತ್ಯ ಭೂ ಪ್ರದೇಶವನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ, ಸಿಇಒ ಡಾ ವಾಸಂತಿ ಅಮರ್, ಎಸ್ಪಿ ಚಂದ್ರಕಾಂತ್, ಬಯಪ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಅಸಾಧರಣ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 10:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ವತಿಯಿಂದ 2026-27ನೇ ಸಾಲಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಾವೀನ್ಯತೆ (Innovation), ತಾರ್ಕಿಕಸಾಧನೆ (Scholastic) (ಉದಾ:ಎರಡು ಅನುಕ್ರಮ ವರ್ಷಗಳಲ್ಲಿ ಗಣಿತ ಶಾಸ್ತ್ರದಲ್ಲಿ ಮೊದಲನೆ ಸ್ಥಾನ), ಕ್ರೀಡೆ (Sports) ಮತ್ತು ಕಲೆ, ಸಾಂಸ್ಕೃತಿಕ, ಸಂಗೀತ (Art, Cultural, Music) ಎಂಬ 4 ಕ್ಷೇತ್ರಗಳಲ್ಲಿ ಅಸಾಧಾರಣೆ ಸಾಧನೆ ಮಾಡಿದ 5 ರಿಂದ 18 ವರ್ಷದೊಳಗಿನ ಪ್ರತಿಭೆ ಮಕ್ಕಳಿಗೆ ಪ್ರಶಸ್ತಿಯನ್ನುನೀಡಲು, ಒಂದು ಕ್ಷೇತ್ರದಿಂದ 2 ಮಕ್ಕಳನ್ನು ಜಿಲ್ಲಾ ಸಮಿತಿಯಿಂದ ಆಯ್ಕೆಮಾಡಿ ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪತ್ರ ಹಾಗೂ ರೂ. 10,000/-ಗಳ ನಗದು ಬಹುಮಾನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಕೊಠಡಿಸಂಖ್ಯೆ: 206, 2ನೇ ಮಹಡಿ, ಜಿಲ್ಲಾಡಳಿತಭವನ, ಬೀರಸಂದ್ರಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರುಗ್ರಾಮಾಂತರಜಿಲ್ಲೆ, ದೂ:080-29787445 ಹಾಗೂ ತಾಲ್ಲೂಕುಗಳಲ್ಲಿ ಶಿಶುಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ದೇವನಹಳ್ಳಿ-080-27682268, ದೊಡ್ಡಬಳ್ಳಾಪುರ-080-27625228, ಹೊಸಕೋಟೆ-080-27931493, ನೆಲಮಂಗಲ-080-27722177 ಸಂಪರ್ಕಿಸಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತಪ್ರಸ್ತಾವನೆಯನ್ನು ಆಗಸ್ಟ್‌ 31ರೊಳಗೆ ಕಛೇರಿಗೆ ಸಲ್ಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now