ವಿಜಯ ದರ್ಪಣ ನ್ಯೂಸ್…..
ಕೆ.ಎಚ್.ಮುನಿಯಪ್ಪಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ !

ಶಿಡ್ಲಘಟ್ಟ : ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಉಪ
ಮುಖ್ಯಮಂತ್ರಿ ಸ್ಥಾನದೊಂದಿಗೆ ಸಮಾಜ ಕಲ್ಯಾಣ ಖಾತೆ ನೀಡಬೇಕೆಂದು ಎನ್‌ಟಿಯುಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಹೈಕಮಾಂಡನ್ನು ಒತ್ತಾಯಿಸಿ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆ.ಎಚ್.ಮುನಿಯಪ್ಪ ರಾಜ್ಯದಲ್ಲಿನ ಬಹುದೊಡ್ಡ ಸಮು ದಾಯವನ್ನು ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್‌ನ ಕಟ್ಟಾಳುವಾಗಿದ್ದಾರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜತೆಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಬೇಕೆಂದು ಆಗ್ರಹಿಸಿದರು.
ಕೋಲಾರದಿಂದ ಸತತ 7 ಬಾರಿ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿಯೂ ಕಾರನಿರ್ವಹಿಸಿದ ಅನುಭವ ಇದೆ ಇದೀಗ ರಾಜ್ಯದಲ್ಲಿ ಸಚಿವರಾಗಿಯೂ ಉತ್ತಮ ಆಡಳಿತ ನೀಡುತ್ತಿದ್ದು, ಅವರ ಸೇವೆ ಈ ರಾಜ್ಯಕ್ಕೆ ಇನ್ನಷ್ಟು ಬೇಕಿದೆ ಎಂದರು.
ಐದು ದಶಕಗಳಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಅನುಭವಿ ರಾಜಕಾರಣಿ, ಕಾಂಗ್ರೆಸ್ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗ ಪಕ್ಷದೊಂದಿಗೆ ನಿಂತ ಹಿರಿಯ ರಾಜಕಾರಣಿ, ಜನಸಾಮಾನ್ಯರೊಂದಿಗೆ ಸದಾ ಸಂಪರ್ಕದಲ್ಲಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಹೈಕಮಾಂಡ್ ಉತ್ತಮ ಸ್ಥಾನ ನೀಡಬೇಕೆಂದು ಅವರು ಮನವಿ ಮಾಡಿದರು.
£££££££££££££££££££££££££££££££££
ಆಗಸ್ಟ್ 13ರಂದು ಕುಚಿಪುಡಿ ನೃತ್ಯ ಪ್ರಾತ್ಯಕ್ಷಿಕೆ

ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ನಿಯಮಿತ ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಕುಚಿಪುಡಿ ನೃತ್ಯದ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕುಚಿಪುಡಿ ಕ್ಷೇತ್ರದ ಖ್ಯಾತ ನೃತ್ಯ ಕಲಾವಿದೆ ಹಾಗೂ ಬೆಂಗಳೂರಿನ ನೃತ್ಯಾಂಕುರ ಫೌಂಡೇಶನ್‌ನ ಸಂಸ್ಥಾಪಕರಾದ ವಿದುಷಿ ಶ್ರೀಮತಿ ರೇಖಾ ಸತೀಶ್ ಅವರು ಈ ಉಪನ್ಯಾಸ–ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮವು 2026ರ ಆಗಸ್ಟ್ 13ರಂದು, ಗುರುವಾರ ಸಂಜೆ 5.30ಕ್ಕೆ, ಬೆಂಗಳೂರಿನ ಶ್ರೀನಿವಾಸನಗರದ ಅಚ್ಯುತ ಪಾರ್ಟಿ ಹಾಲ್‌ನಲ್ಲಿ ನಡೆಯಲಿದೆ.
ಕುಚಿಪುಡಿ ನೃತ್ಯದ ಪರಂಪರೆ, ವಿಶೇಷತೆ, ನೃತ್ಯ ಸಂಯೋಜನೆ, ವೇಷಭೂಷಣ ಹಾಗೂ ಪ್ರದರ್ಶನದ ವಿವಿಧ ಆಯಾಮಗಳ ಕುರಿತು ಉಪನ್ಯಾಸದ ಜೊತೆಗೆ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಲಾಗುವುದು.
ಈ ಕಾರ್ಯಕ್ರಮವು ಎಲ್ಲರಿಗೂ ಉಚಿತ ಪ್ರವೇಶವಾಗಿದ್ದು, ಕಲಾಸಕ್ತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಈ ಕಾರ್ಯಕ್ರಮವನ್ನು ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನ ಕಲಾತ್ಮಕ ನಿರ್ದೇಶಕಿ ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದೆ.









