--Ads--

ಮುಂದಿನ ಪೀಳಿಗೆಗೆ ಗಾಂಧೀಜಿಯವರ ತತ್ವಾದರ್ಶಗಳು ಪರಿಚಯಿಸಿ: ಸಚಿವ ಕೆ.ಹೆಚ್ ಮುನಿಯಪ್ಪ

On: August 14, 2026 12:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಜಿಲ್ಲಾಡಳಿತ ಭವನದ ಆವರಣದಲ್ಲಿ ಅನಾವರಣಗೊಳ್ಳಲಿದೆ ಗಾಂಧೀಜಿ ಪುತ್ಥಳಿ

ಮುಂದಿನ ಪೀಳಿಗೆಗೆ ಗಾಂಧೀಜಿಯವರ ತತ್ವಾದರ್ಶಗಳು ಪರಿಚಯಿಸಿ: ಸಚಿವ ಕೆ.ಹೆಚ್ ಮುನಿಯಪ್ಪ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆ.14:

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಆವರಣದ ಮುಂಭಾಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ‌ ಪುತ್ಥಳಿ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ದಿನಗಳು, ಜೀವನ ಚರಿತ್ರೆ, ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಮ್ಮೆಲ್ಲರದ್ದಾಗಿದೆ. ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ‌ ಪುತ್ಥಳಿ ನಿರ್ಮಾಣದಿಂದ ಅವರ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸುವಂತಾಗುತ್ತದೆ ಎಂದರು.

ಮಹಾತ್ಮ ಗಾಂಧೀಜಿ ಪುತ್ಥಳಿಯು 4 ಅಡಿ ಕಂಚಿನ ವಿಗ್ರಹ, 4 ಅಡಿ ಕಲ್ಲಿನ ಪೀಠವನ್ನು ಒಳಗೊಂಡ ಒಟ್ಟು ಎಂಟು ಅಡಿ ಇರಲಿದೆ. ಪುತ್ಥಳಿ ನಿರ್ಮಾಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ, ಸಿ.ಇ.ಓ ವಾಸಂತಿ ಅಮರ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಉಚಿತ ಅರೋಗ್ಯ ಹಾಗೂ ಕಣ್ಣು ತಪಾಸಣೆ

ಬೆಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಯರ ಕಿರಣ ಮತ್ತು ಸಾಗರ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಅರೋಗ್ಯ ಹಾಗೂ ಕಣ್ಣು ತಪಾಸಣೆ ಶಿಬಿರವನ್ನು 15-8-26ರ ಶನಿವಾರ ಚನ್ನಪಟ್ಟಣ ತಾಲೂಕು ಕನ್ನಮಂಗಲ ಗ್ರಾಮದ ಶಾಲಾ ಆವರಣದಲ್ಲಿ ಬೆಳಿಗ್ಗೆ 9-00ರಿಂದ ಮದ್ಯಾಹ್ನ 2-00ರವರೆಗೆ ಆಯೋಜಿಸಲಾಗಿದೆ,

ಶಿಬಿರದಲ್ಲಿ ಜನರಲ್ ಫಿಸಿಶಿಯನ್, ಸ್ತ್ರೀರೋಗ ತಜ್ಞರು, ಕೀಲು ನೋವು,, ಕಣ್ಣಿನ ಪರೀಕ್ಷೆ, ಹಾಗೂ ರಕ್ತ ದಾನ ಶಿಬಿರವನ್ನು ನುರಿತ ವೈದ್ಯರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಾ, ಕಿರಣ್ ಎಸ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಮಯದಲ್ಲಿ 1500₹ ಮೊತ್ತದ ಬಿಎಂಡಿ ಪರೀಕ್ಷೆಯನ್ನು ಉಚಿತವಾಗಿ ಸೀಮಿತ ಜನರಿಗೆ ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 8904863457 ನ್ನು ಸಂಪರ್ಕಿಸಿ,

 

WhatsApp

Join Now

Telegram

Join Now

Instagram

Join Now