ವಿಜಯ ದರ್ಪಣ ನ್ಯೂಸ್…..
ಅರಕಲಗೂಡಿನ ಅಭಿವೃದ್ಧಿಯ ಹೊಸ ಸಂಕಲ್ಪ: ಡಾ. ಮಹದೇಶ್ ಪ್ರಸಾದ್

ಹಾಸನ ಜಿಲ್ಲೆ : ಅರಕಲಗೂಡು ಕೇವಲ ಒಂದು ತಾಲೂಕು ಅಲ್ಲ ಇದು ಹಸಿರಿನ ನಾಡು, ಕೃಷಿಯ ಕಣಜ ಶ್ರಮಜೀವಿಗಳ ನೆಲ ಸಂಸ್ಕೃತಿ ಮತ್ತು ಪರಂಪರೆಯ ತವರೂರು
ಕಾವೇರಿ ತಾಯಿಯ ಆಶೀರ್ವಾದದಿಂದ ಸಮೃದ್ಧವಾಗಿರುವ ಈ ನೆಲದಲ್ಲಿ ರೈತ ತನ್ನ ಬೆವರಿನಿಂದ ಅನ್ನ ಬೆಳೆಯುತ್ತಾನೆ ಕಾರ್ಮಿಕ ತನ್ನ ಶ್ರಮದಿಂದ ಬದುಕು ಕಟ್ಟಿಕೊಳ್ಳುತ್ತಾನೆ .ವಿದ್ಯಾರ್ಥಿ ತನ್ನ ಕನಸುಗಳನ್ನು ಹೊತ್ತು ಭವಿಷ್ಯದತ್ತ ಹೆಜ್ಜೆ ಹಾಕುತ್ತಾನೆ ಯುವಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಮಹಿಳೆಯರು ಸ್ವಾವಲಂಬನೆಯ ಕನಸು ಕಾಣುತ್ತಿದ್ದಾರೆ. ಬಡ ಕುಟುಂಬಗಳು ಉತ್ತಮ ಬದುಕಿನ ನಿರೀಕ್ಷೆಯಲ್ಲಿವೆ
ಇವರ ಕನಸುಗಳಿಗೆ ಸ್ಪಂದಿಸುವ ಅವರ ಸಮಸ್ಯೆಗಳನ್ನು ತನ್ನ ಸಮಸ್ಯೆಯೆಂದು ಭಾವಿಸುವ ಅಭಿವೃದ್ಧಿಯನ್ನು ಕೇವಲ ಮಾತಿನಲ್ಲಿ ಅಲ್ಲ ಕಾರ್ಯದಲ್ಲಿ ಕಾಣಲು ಬಯಸುವ ಜನಪರ ನಾಯಕತ್ವ ಅರಕಲಗೂಡಿಗೆ ಅಗತ್ಯವಿದೆ
ಡಾ. ಮಹದೇಶ್ ಪ್ರಸಾದ್ ಜನರ ನಡುವೆ ಜನರಿಗಾಗಿ
ಡಾ. ಮಹದೇಶ್ ಪ್ರಸಾದ್ ಅವರ ಸಮಾಜಮುಖಿ ಚಿಂತನೆ ಜನರೊಂದಿಗೆ ಬೆರೆಯುವ ಗುಣ ಹಾಗೂ ಅಭಿವೃದ್ಧಿಯ ಮೇಲಿನ ದೂರದೃಷ್ಟಿಯನ್ನು ಅರಕಲಗೂಡಿನ ಭವಿಷ್ಯದೊಂದಿಗೆ ಜೋಡಿಸುವ ಪ್ರಯತ್ನವೇ ನಮ್ಮ ಈ ಸಂಕಲ್ಪ.ಒಬ್ಬ ಜನಪ್ರತಿನಿಧಿ ಎಂದರೆ ಕೇವಲ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಯಲ್ಲ
ಜನರ ಕಷ್ಟವನ್ನು ಕೇಳುವವನು
ಬಡವರ ನೋವಿಗೆ ಸ್ಪಂದಿಸುವವನು
ರೈತರ ಸಮಸ್ಯೆಗೆ ಧ್ವನಿಯಾಗುವವನು
ಯುವಕರಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸುವವನು
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಯೋಚಿಸುವವನು
ಮಹಿಳೆಯರ ಸ್ವಾವಲಂಬನೆಗೆ ಬೆಂಬಲ ನೀಡುವವನು
ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಶ್ರಮಿಸುವವನು
ಅಂತಹ ನಾಯಕತ್ವವೇ ನಿಜವಾದ ಜನಸೇವೆ
ಅರಕಲಗೂಡಿನ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ಬೆಳಕು ಕಾಣಬೇಕು ಪಟ್ಟಣ ಮಾತ್ರವಲ್ಲ ಹಳ್ಳಿಯೂ ಬೆಳೆಯಬೇಕು ರಸ್ತೆ ಕುಡಿಯುವ ನೀರು ಚರಂಡಿ, ವಿದ್ಯುತ್ ಆರೋಗ್ಯ ಮತ್ತು ಶಿಕ್ಷಣದಂತಹ ಮೂಲಭೂತ ಸೌಲಭ್ಯಗಳು ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕವಾಗಿ ದೊರೆಯಬೇಕು
ರೈತನೇ ಅರಕಲಗೂಡಿನ ಬೆನ್ನೆಲುಬು
ಅರಕಲಗೂಡಿನ ಆರ್ಥಿಕತೆಯ ಜೀವನಾಡಿಯಾಗಿರುವ ಕೃಷಿಗೆ ಹೊಸ ಶಕ್ತಿ ನೀಡಬೇಕು
ರೈತರಿಗೆ ನೀರಾವರಿ ಕೃಷಿ ತಂತ್ರಜ್ಞಾನ ಮಾರುಕಟ್ಟೆ ಸಂಪರ್ಕ ಬೆಳೆಗಳಿಗೆ ನ್ಯಾಯಯುತ ಬೆಲೆ ಹಾಗೂ ಕೃಷಿ ಆಧಾರಿತ ಉದ್ಯೋಗ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರೆಯಬೇಕು
ರೈತನ ಹೊಲ ಸಮೃದ್ಧಿಯಾದಾಗ ಮಾತ್ರ ಅರಕಲಗೂಡಿನ ಮನೆ ಸಮೃದ್ಧಿಯಾಗುತ್ತದೆ.ಯುವಕರಿಗೆ ಉದ್ಯೋಗ ಅರಕಲಗೂಡಿನ ಭವಿಷ್ಯಕ್ಕೆ ಭದ್ರತೆ ಸಿಗಬೇಕು. ಇಂದಿನ ಯುವಕರು ಉದ್ಯೋಗಕ್ಕಾಗಿ ತಮ್ಮ ಊರನ್ನು ಬಿಟ್ಟು ದೂರದ ನಗರಗಳಿಗೆ ಹೋಗುವ ಪರಿಸ್ಥಿತಿ ಬದಲಾಗಬೇಕು
ಅರಕಲಗೂಡಿನಲ್ಲಿಯೇ ಕೌಶಲ್ಯಾಭಿವೃದ್ಧಿ ಸ್ವಯಂ ಉದ್ಯೋಗ ಸಣ್ಣ ಕೈಗಾರಿಕೆ ಕೃಷಿ ಆಧಾರಿತ ಉದ್ಯಮ ಪ್ರವಾಸೋದ್ಯಮ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು
ಯುವಕರ ಕೈಗೆ ಉದ್ಯೋಗ ಬಂದರೆ ಕುಟುಂಬದ ಬದುಕು ಬದಲಾಗುತ್ತದೆ, ಕುಟುಂಬದ ಬದುಕು ಬದಲಾದರೆ ತಾಲೂಕು ಬದಲಾಗುತ್ತದೆ
ಶಿಕ್ಷಣವೇ ಶಾಶ್ವತ ಅಭಿವೃದ್ಧಿಯ ಅಡಿಪಾಯ
ಅರಕಲಗೂಡಿನ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು.ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಯೂ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅವಕಾಶ ಪಡೆಯಬೇಕು ಉನ್ನತ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆ ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು.ನಮ್ಮ ಮಕ್ಕಳ ಭವಿಷ್ಯವೇ ಅರಕಲಗೂಡಿನ ನಿಜವಾದ ಸಂಪತ್ತು.
ಆರೋಗ್ಯ ಪ್ರತಿಯೊಬ್ಬರ ಹಕ್ಕು
ಬಡವರು ಚಿಕಿತ್ಸೆಗಾಗಿ ಸಂಕಷ್ಟಕ್ಕೆ ಸಿಲುಕದಂತಹ ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ನಿರ್ಮಾಣವಾಗಬೇಕು ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳು ತಾಲೂಕು ಆಸ್ಪತ್ರೆಗಳು ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳು ಮತ್ತಷ್ಟು ಬಲಪಡಿಸಬೇಕು.ಆರೋಗ್ಯವಂತ ಜನಸಮುದಾಯವೇ ಅಭಿವೃದ್ಧಿಯ ನಿಜವಾದ ಶಕ್ತಿ
ಮಹಿಳೆಯರ ಸಬಲೀಕರಣ
ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಸ್ವಯಂ ಉದ್ಯೋಗ ಕೌಶಲ್ಯ ತರಬೇತಿ ಮತ್ತು ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಅವಕಾಶಗಳು ಸಿಗಬೇಕು.ಒಬ್ಬ ಮಹಿಳೆ ಸ್ವಾವಲಂಬಿಯಾದರೆ ಒಂದು ಕುಟುಂಬದ ಭವಿಷ್ಯ ಬದಲಾಗುತ್ತದೆ.
ಅರಕಲಗೂಡಿನ ಸಮಗ್ರ ಅಭಿವೃದ್ಧಿ ನಮ್ಮ ಗುರಿ
ಅರಕಲಗೂಡು ಪಟ್ಟಣದಿಂದ ಹಿಡಿದು ಪ್ರತಿಯೊಂದು ಗ್ರಾಮ ಹಳ್ಳಿ ಮತ್ತು ಜನವಸತಿ ಪ್ರದೇಶದವರೆಗೆ ಸಮಗ್ರ ಅಭಿವೃದ್ಧಿ ತಲುಪಬೇಕು
ಉತ್ತಮ ರಸ್ತೆಗಳು ಬೇಕು, ಸಮರ್ಪಕ ಕುಡಿಯುವ ನೀರು ಬೇಕು, ಚರಂಡಿ ವ್ಯವಸ್ಥೆ ಬೇಕು, ನಿರಂತರ ವಿದ್ಯುತ್ ಬೇಕು.ಉತ್ತಮ ಆರೋಗ್ಯ ವ್ಯವಸ್ಥೆ ಬೇಕು, ಗುಣಮಟ್ಟದ ಶಿಕ್ಷಣ ಬೇಕು ,ರೈತರಿಗೆ ಬೆಂಬಲ ಬೇಕು, ಯುವಕರಿಗೆ ಉದ್ಯೋಗ ಬೇಕು, ಮಹಿಳೆಯರಿಗೆ ಸ್ವಾವಲಂಬನೆಯ ಅವಕಾಶ ಬೇಕು.
ಇದು ಕೇವಲ ಕನಸಲ್ಲ ಜನರ ಸಹಕಾರ ಮತ್ತು ಬದ್ಧ ನಾಯಕತ್ವದಿಂದ ಸಾಧಿಸಬಹುದಾದ ಗುರಿ, ಅರಕಲಗೂಡಿನ ಧ್ವನಿ ರಾಜ್ಯದ ಮಟ್ಟಕ್ಕೆ ತಲುಪಲಿ, ಅರಕಲಗೂಡಿನ ಸಮಸ್ಯೆಗಳು ಅರಕಲಗೂಡಿನಲ್ಲೇ ಉಳಿಯದೆ ರಾಜ್ಯದ ಮಟ್ಟದಲ್ಲಿ ಚರ್ಚೆಯಾಗಬೇಕು
*ನಮ್ಮ ತಾಲೂಕಿಗೆ ಬೇಕಾದ ಯೋಜನೆಗಳು ಬರಬೇಕು
*ನಮ್ಮ ಯುವಕರಿಗೆ ಅವಕಾಶಗಳು ಸಿಗಬೇಕು
*ನಮ್ಮ ರೈತರ ಧ್ವನಿ ಕೇಳಿಸಬೇಕು
*ನಮ್ಮ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ಸಿಗಬೇಕು
*ಇದಕ್ಕಾಗಿ ಜನರೊಂದಿಗೆ ನಿರಂತರವಾಗಿ ನಿಂತು ಅರಕಲಗೂಡಿನ ಪರವಾಗಿ ಬಲವಾದ ಧ್ವನಿಯಾಗುವ ನಾಯಕತ್ವವನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ*
ಮುಂದಿನ ಹೆಜ್ಜೆ ಅಭಿವೃದ್ಧಿಯ ನಾಯಕತ್ವ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡಿನಿಂದ ಡಾ. ಮಹದೇಶ್ ಪ್ರಸಾದ್ ಅವರು ಜನರ ಆಶೀರ್ವಾದದೊಂದಿಗೆ* *ಶಾಸಕರಾಗಿ ಆಯ್ಕೆಯಾಗಲಿ ಅರಕಲಗೂಡಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಆರಂಭವಾಗಲಿ ಎಂಬುದು ನಮ್ಮ ಆಶಯ
ಅವರನ್ನು ಕೇವಲ ಒಬ್ಬ ವ್ಯಕ್ತಿಯಾಗಿ ನೋಡದೆ ಅರಕಲಗೂಡಿನ ಅಭಿವೃದ್ಧಿಯ ಕನಸಿನೊಂದಿಗೆ ಅವರನ್ನು ಬೆಳೆಸೋಣ
*ನಸೇವೆಯ ದಾರಿಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ,
ಅರಕಲಗೂಡಿನ ಧ್ವನಿಯಾಗಿ ವಿಧಾನಸಭೆಯಲ್ಲಿ ಮೊಳಗಲಿ, ತಾಲೂಕಿನ ಅಭಿವೃದ್ಧಿಗಾಗಿ ಶ್ರಮಿಸುವ ಶಕ್ತಿಯಾಗಿ ರೂಪುಗೊಳ್ಳಲಿ,ಮುಂದಿನ ದಿನಗಳಲ್ಲಿ ರಾಜ್ಯದ ನಾಯಕತ್ವದಲ್ಲೂ ಗುರುತಿಸಿಕೊಳ್ಳುವಷ್ಟು ಜನಪರ ಸೇವೆಯ ಅವಕಾಶ ದೊರೆಯಲಿ ಎಂಬುದು ನಮ್ಮ ಹಾರೈಕೆ.
ವ್ಯಕ್ತಿಯ ಬೆಳವಣಿಗೆಯೊಂದಿಗೆ, ಅರಕಲಗೂಡಿನ ಬೆಳವಣಿಗೆ, ಅರಕಲಗೂಡಿನ ಬೆಳವಣಿಗೆಯೊಂದಿಗೆ ಜನರ ಬದುಕಿನ ಬೆಳವಣಿಗೆ
ಬನ್ನಿ ಅಭಿವೃದ್ಧಿಯ ಕನಸನ್ನು ನನಸು ಮಾಡಲು ಕೈಜೋಡಿಸೋಣ
*ಬಡವರಿಗಾಗಿ
*ರೈತರಿಗಾಗಿ
*ಯುವಕರಿಗಾಗಿ
*ಮಹಿಳೆಯರಿಗಾಗಿ
*ವಿದ್ಯಾರ್ಥಿಗಳಿಗಾಗಿ
*ಅರಕಲಗೂಡಿನ ಭವಿಷ್ಯಕ್ಕಾಗಿ
*ನಾವೆಲ್ಲರೂ ಒಂದಾಗಿ ಸಾಗೋಣ
*ನಮ್ಮ ಸಂಕಲ್ಪ
*ಬಲಿಷ್ಠ ಅರಕಲಗೂಡು
*ಸಮೃದ್ಧ ಅರಕಲಗೂಡು
*ಸ್ವಚ್ಛ ಅರಕಲಗೂಡು
*ಸುಂದರ ಅರಕಲಗೂಡು
*ಅಭಿವೃದ್ಧಿಯ ಅರಕಲಗೂಡು
*ಅರಕಲಗೂಡಿನ ಅಭಿವೃದ್ಧಿ ನಮ್ಮ ಕನಸು
*ಜನರ ಬದುಕಿನ ಬದಲಾವಣೆ ನಮ್ಮ ಗುರಿ
*ಜನಸೇವೆ ನಮ್ಮ ಸಂಕಲ್ಪ
80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು
ಸ್ವಾತಂತ್ರ್ಯದ 80ನೇ ವರ್ಷದ ಈ ಐತಿಹಾಸಿಕ ಸಂದರ್ಭದಲ್ಲಿ ಅರಕಲಗೂಡು ತಾಲೂಕಿನ ಸಮಸ್ತ ಮಹಾಜನತೆಗೆ ಹೃದಯಪೂರ್ವಕ ಶುಭಾಶಯಗಳು
ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಪಯಣವನ್ನು ಮುಂದುವರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಊರು ನಮ್ಮ ತಾಲೂಕು ಮತ್ತು ನಮ್ಮ ರಾಜ್ಯವೂ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪಲಿ
ದೇಶ ಅಭಿವೃದ್ಧಿಯಾಗಲಿ
ಕರ್ನಾಟಕ ಸಮೃದ್ಧಿಯಾಗಲಿ
ಅರಕಲಗೂಡು ಮಾದರಿ ತಾಲೂಕಾಗಲಿ
ಜೈ ಹಿಂದ್
ಜೈ ಕರ್ನಾಟಕ
ಜೈ ಅರಕಲಗೂಡು
✍️ಎಂ ಎಂ ದಾವುದ್
9945375180










