--Ads--

ದೇಶದ ಅಖಂಡತೆಗಾಗಿ ರಾಜೀವ್ ಗಾಂಧಿ, ರಾಜ್ಯದ ಅಭಿವೃದ್ಧಿಗೆ ದೇವರಾಜ ಅರಸು ಕೊಡುಗೆ ಅಪಾರ :ಎಂ.ಕೆ.ಸೋಮಶೇಖರ್.

On: August 20, 2026 4:11 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ದೇಶದ ಅಖಂಡತೆಗಾಗಿ ರಾಜೀವ್ ಗಾಂಧಿ, ರಾಜ್ಯದ ಅಭಿವೃದ್ಧಿಗೆ ದೇವರಾಜ ಅರಸು ಕೊಡುಗೆ ಅಪಾರ :ಎಂ.ಕೆ.ಸೋಮಶೇಖರ್

ತಾಂಡವಪುರ ಆಗಸ್ಟ್ 20 ಮೈಸೂರು ಜಿಲ್ಲಾ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಗರ ಕಾಂಗ್ರೆಸ್ ಘಟಕ ಹಾಗೂ ಗ್ರಾಮಾಂತರ ಕಾಂಗ್ರೆಸ್ ಘಟಕದ ವತಿಯಿಂದ ದೇಶ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಾಗೂ ರಾಜ್ಯ ಕಂಡಂತಹ ಧೀಮಂತ ರಾಜಕಾರಣಿ,ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಜಯಂತಿಯನ್ನು ಆಚರಿಸಲಾಯಿತು.

ಬಳಿಕ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅವರು ಮಹಾತ್ಮರಿಗೆ ಮಾತನಾಡುತ್ತಾ ದಿವಂಗತ ಡಿ ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ರವರ ಕೊಡುಗೆ ಅಪಾರವಾಗಿದ್ದು ಅವರು ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ, ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಅವರ ಸೇವೆಯನ್ನು ಸ್ಮರಿಸಿಕೊಂಡರು

ಮೈಸೂರು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಮೂರ್ತಿ,ಪ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಭಾಸ್ಕರ್. ಎಲ್. ಗೌಡ,ಈಶ್ವರ ಚಕ್ಕಡಿ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ನಲಿತಾದ್ರಿಪುರ ಬಸವರಾಜು ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮಹಾಪೌರರು ಬಿ.ಕೆ ಪ್ರಕಾಶ್ , ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಸೇವಾದಳ ಘಟಕದ ಅಧ್ಯಕ್ಷ ಅಶೋಕ್, ಶಾ.ಮಾ.ಯೋಗೇಶ್, ಗ್ರಾಮಾಂತರ ಕಾಂಗ್ರೆಸ್ ಕಾರ್ಯದರ್ಶಿ ಶಿವಪ್ರಸಾದ್, ಹೆಡತಲೆ ಮಂಜುನಾಥ್, ಗಿರೀಶ್, ಡೈರಿ ವೆಂಕಟೇಶ್,ಮಾಲೇಗೌಡ, ಹೇಮಂತ್ ಕುಮಾರ್ ಹಾಗೂ ಇನ್ನೂ ಹಲವಾರು ಕಾಂಗ್ರೆಸ್ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now