--Ads--

ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಶರನ್ನವ ರಾತ್ರೋತ್ಸವ ತ್ಸವ

On: October 7, 2026 8:50 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಶರನ್ನವ ರಾತ್ರೋತ್ಸವ

ಬೆಂಗಳೂರು : ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯ ಪಕ್ಕದಲ್ಲಿರುವ ಶ್ರೀ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರ ವರೆಗೆ ಶರನ್ನವ ರಾತ್ರೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳು :

ಸಮಾರಂಭದ ಎಲ್ಲಾ ದಿನಗಳಲ್ಲೂ ಶ್ರೀ ಅಮ್ಮನವರಿಗೆ ವಿಧ ವಿಧವಾದ ಅಲಂಕಾರಗಳು, ಮಧ್ಯಾಹ್ನ 1-00 ಗಂಟೆಗೆ ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಪ್ರತಿದಿನ ಸಂಜೆ 6-30ಕ್ಕೆ. ಅಕ್ಟೋಬರ್ 11-ಉದ್ಘಾಟನೆ, ಅಕ್ಟೋಬರ್ 12-ಕು|| ನಿರೀಕ್ಷಾ ಮಂಜುನಾಥ್ ರಾವ್ ಮತ್ತು ಸಂಗಡಿಗರಿಂದ “ಹರಿನಾಮ ಸಂಕೀರ್ತನೆ”, ಅಕ್ಟೋಬರ್ 13-ಆದಿಶಕ್ತಿ ಗಂಗಮ್ಮ ಭಕ್ತ ಮಂಡಲಿಯ ಸದಸ್ಯರಿಂದ “ಭಜನೆ”, ಅಕ್ಟೋಬರ್ 14-ಶ್ರೀಮತಿ ರಂಜಿತಾ ಪ್ರಸಾದ್, ಶ್ರೀಮತಿ ಭಾವನಾ ಮೂರ್ತಿ ಮತ್ತು ಸಂಗಡಿಗರಿಂದ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳ ಗಾಯನದ “ಮಿಶ್ರ ಮಾಧುರ್ಯ”, ಅಕ್ಟೋಬರ್ 15-ಶಿವರಂಜನಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯರಿಂದ “ಭಜನೆ”, ಅಕ್ಟೋಬರ್ 16-ಶ್ರೀಮತಿ ಶ್ರೀದೇವಿ ಮತ್ತು ಸಂಗಡಿಗರಿಂದ “ಸಂಗೀತ ಸಂಭ್ರಮ”, ಅಕ್ಟೋಬರ್ 17-ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ “ವೀಣಾ ವಾದನ”, ಅಕ್ಟೋಬರ್ 18-ಲಲಿತ ಕಲಾ ಕೇಂದ್ರದ ಮಕ್ಕಳಿಂದ “ಭರತನಾಟ್ಯ”, ಅಕ್ಟೋಬರ್ 19-ಶ್ರೀಮತಿ ಗಿರಿಜಾ ಶ್ಯಾಮಣ್ಣ ಮತ್ತು ಸಂಗಡಿಗರಿಂದ “ದೇವರನಾಮಗಳು”, ಅಕ್ಟೋಬರ್ 20-ಮಾಯಾ ಖರ ಭಕ್ತಿ ವೃಂದದವರಿಂದ “ಸಂಗೀತ” ಮತ್ತು ಅಕ್ಟೋಬರ್ 21ರಂದು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗಣಪತಿ ಮತ್ತು ಶ್ರೀ ಅಮ್ಮನವರ ಮೆರವಣಿಗೆಯ ಉತ್ಸವ ಜರುಗುತ್ತವೆ ಎಂದು ದೇವಸ್ಥಾನದ ಪದಾಧಿಕಾರಿಗಳು ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now