--Ads--

ಕೊಡವ ಸ್ನೇಹ ಕೂಟ ತಿಪ್ಪಸಂದ್ರ ಬೆಂಗಳೂರು ಇವರ ವತಿಯಿಂದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಸನ್ಮಾನ

On: October 7, 2026 3:05 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಕೊಡವ ಸ್ನೇಹ ಕೂಟ ತಿಪ್ಪಸಂದ್ರ ಬೆಂಗಳೂರು ಇವರ ವತಿಯಿಂದ  ಶಾಸಕ ಅಜ್ಜಿಕುಟಿರ ಎಸ್. ಪೊನ್ನಣ್ಣ ಅವರಿಗೆ ಸನ್ಮಾನ

ಬೆಂಗಳೂರು ಕೊಡವ ಸ್ನೇಹ ಕೂಟ ತಿಪ್ಪಸಂದ್ರ, ಇವರು ಆಯೋಜಿಸಿದ್ದ 39ನೇ ಕೈಲ್ ಪೊಳ್ದ್ ನಮ್ಮೆರ ಒತ್ತೋರ್ಮೆ ಕೂಟ ಕಾರ್ಯಕ್ರಮವನ್ನು, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು, ಕೊಡವ ಸಮಾಜದ ಜನಸಂಖ್ಯೆ ಕಡಿಮೆಯಾದರೂ, ದೇಶ ಸೇವೆ ಮತ್ತು ಕ್ರೀಡೆಯಲ್ಲಿನ ಸಾಧನೆ ಬಹು ದೊಡ್ಡ ಇದೆ. ಇದು ನಾವುಗಳು ಹೆಮ್ಮೆ ಪಡುವಂತ ಸಂಗತಿ ಆಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ರವರ ಸಾಧನೆಯನ್ನು ನಾವು ಎಂದಿಗೂ ಮರೆಯುವಂತಿಲ್ಲ. ಇದೀಗ ಏಷ್ಯನ್ ಗೇಮ್ಸ್ ನಲ್ಲಿ ಎಂ. ಪೂವಮ್ಮ ರವರು ಚಿನ್ನದ ಪದಕ ಪಡೆಯುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ನಾವೆಲ್ಲರೂ ದೇಶ ಸೇವೆ ಮತ್ತು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಿ ಮುನ್ನಡೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಡವ ಸಮಾಜದ ಅಧ್ಯಕ್ಷ ರವಿ ನಾಣಯ್ಯ, ಖಾಜಾಂಚಿ ವಿನೋದ ಉತ್ತಪ್ಪ, ಗೌರವ ಕಾರ್ಯದರ್ಶಿ ಸುಧಾ ಸುಬ್ಬಯ್ಯ ಹಾಗೂ ಕೊಡವ ಸ್ನೇಹ ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now