--Ads--

ಈದ್ ಮಿಲಾದ್ ವಿಶ್ವಮಾನವತೆಗೆ ಕರುಣೆಯಾಗಿ ಬಂದ ಪ್ರವಾದಿಯವರ ಸ್ಮರಣೆ

On: August 25, 2026 4:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಈದ್ ಮಿಲಾದ್ ವಿಶ್ವಮಾನವತೆಗೆ ಕರುಣೆಯಾಗಿ ಬಂದ ಪ್ರವಾದಿಯವರ ಸ್ಮರಣೆ

ಈದ್ ಮಿಲಾದ್ (ಮೌಲಿದ್-ಉನ್-ನಬಿ) ಎಂಬುದು ಇಸ್ಲಾಂ ಧರ್ಮದ ಅಂತಿಮ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಸ ಅ.ಅವರ ಜನ್ಮಸ್ಮರಣೆಯ ಪವಿತ್ರ ಸಂದರ್ಭವಾಗಿದೆ ಇದು ಕೇವಲ ಒಂದು ಹಬ್ಬವಲ್ಲ ಮಾನವಕುಲಕ್ಕೆ ಸತ್ಯ ನ್ಯಾಯ ಕರುಣೆ ಸಹೋದರತ್ವ ಮತ್ತು ದೇವಭಕ್ತಿಯ ಸಂದೇಶವನ್ನು ನೀಡಿದ ಮಹಾನ್ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳುವ ದಿನವಾಗಿದೆ

ಪ್ರವಾದಿ ಮುಹಮ್ಮದ್ ಸ.ಅ.  ಅವರು ಅರೇಬಿಯಾದ ಮಕ್ಕಾ ನಗರದಲ್ಲಿ ಖುರೈಶ್ ಕುಲದ ಬನು ಹಾಶಿಮ್ ವಂಶದಲ್ಲಿ ಜನಿಸಿದರು ಅವರ ತಂದೆ ಅಬ್ದುಲ್ಲಾ ಹಾಗೂ ತಾಯಿ ಆಮಿನ. ಜನಿಸುವ ಮೊದಲುವೇ ತಂದೆಯನ್ನು ಕಳೆದುಕೊಂಡ ಅವರು ಬಾಲ್ಯದಲ್ಲೇ ತಾಯಿಯನ್ನೂ ಕಳೆದುಕೊಂಡು ಅನಾಥ ಜೀವನದ ನೋವನ್ನು ಅನುಭವಿಸಿದರು ಅಜ್ಜ ಅಬ್ದುಲ್ ಮುತ್ತಲಿಬ್ ಮತ್ತು ನಂತರ ಚಿಕ್ಕಪ್ಪ ಅಬೂ ತಾಲಿಬ್ ಅವರ ಆರೈಕೆಯಲ್ಲಿ ಬೆಳೆದರು

ಬಾಲ್ಯದಿಂದಲೇ ಅವರ ಪ್ರಾಮಾಣಿಕತೆ ಸತ್ಯನಿಷ್ಠೆ ಮತ್ತು ಉತ್ಕೃಷ್ಟ ನಡವಳಿಕೆ ಜನರ ಮೆಚ್ಚುಗೆಗೆ ಪಾತ್ರವಾಯಿತು ಆದ್ದರಿಂದಲೇ ಜನರು ಅವರನ್ನು ಅಲ್-ಅಮೀನ್ (ವಿಶ್ವಾಸಾರ್ಹರು) ಎಂದು ಗೌರವದಿಂದ ಕರೆಯುತ್ತಿದ್ದರು

ಇಪ್ಪತ್ತೈದನೇ ವಯಸ್ಸಿನಲ್ಲಿ ಅವರು ಹಜರತ್ ಖದೀಜಾ (ರ.ಅ) ಅವರನ್ನು ವಿವಾಹವಾದರು ಕುಟುಂಬ ಜೀವನದಲ್ಲಿ ಅವರು ಆದರ್ಶ ಪತಿ ಆದರ್ಶ ತಂದೆ ಮತ್ತು ಆದರ್ಶ ನಾಯಕನಾಗಿದ್ದರು ಅವರ ಪುತ್ರಿಯರಲ್ಲಿ ಹಜರತ್ ಫಾತಿಮಾ (ರ.ಅ) ಅವರಿಗೆ ವಿಶೇಷ ಸ್ಥಾನವಿದೆ ಕುಟುಂಬದ ಮೇಲೆ ಪ್ರೀತಿ ಮಕ್ಕಳ ಮೇಲಿನ ಕಾಳಜಿ ಮತ್ತು ಮಹಿಳೆಯರ ಗೌರವದ ಕುರಿತು ಅವರು ನೀಡಿದ ಬೋಧನೆಗಳು ಇಂದಿಗೂ ಮಾದರಿಯಾಗಿವೆ

ನಲವತ್ತನೇ ವಯಸ್ಸಿನಲ್ಲಿ ಹಿರಾ ಗುಹೆಯಲ್ಲಿ ಧ್ಯಾನದಲ್ಲಿದ್ದಾಗ ಅಲ್ಲಾಹನ ಮೊದಲ ವಹೀ ಅವತರಿಸಿತು ಇಕ್ರಾ (ಓದು) ಎಂಬ ಮೊದಲ ಸಂದೇಶದೊಂದಿಗೆ ಜ್ಞಾನ ಚಿಂತನೆ ಮತ್ತು ಸತ್ಯದ ಹೊಸ ಯುಗ ಆರಂಭವಾಯಿತು ನಂತರ ಸುಮಾರು ಇಪ್ಪತ್ತ್ಮೂರು ವರ್ಷಗಳ ಕಾಲ ಅವತರಿಸಲ್ಪಟ್ಟ ದೈವಿಕ ಸಂದೇಶಗಳ ಸಂಕಲನವೇ ಪವಿತ್ರ ಕುರ್‌ಆನ್

ಕುರ್‌ಆನ್ ಕೇವಲ ಧಾರ್ಮಿಕ ಗ್ರಂಥವಲ್ಲ ಅದು ಮಾನವ ಜೀವನದ ಎಲ್ಲ ಕ್ಷೇತ್ರಗಳಿಗೆ ಮಾರ್ಗದರ್ಶಕವಾಗಿದೆ ನ್ಯಾಯ ಕರುಣೆ ಕುಟುಂಬ ಮೌಲ್ಯಗಳು ಬಡವರ ಹಕ್ಕುಗಳು
ಮಹಿಳೆಯರ ಗೌರವ ಶಿಕ್ಷಣ ಶಾಂತಿ ಮತ್ತು ಮಾನವೀಯತೆಯ ಸಂದೇಶಗಳನ್ನು ಅದು ಒಳಗೊಂಡಿದೆ

ಪ್ರವಾದಿ ಮುಹಮ್ಮದ್ ಸ.ಅ.ಅವರ ಜೀವನದ ಕೇಂದ್ರಬಿಂದು ಸಮಾಜ ಸೇವೆಯಾಗಿತ್ತು ಅವರು ಹಸಿದವರಿಗೆ ಆಹಾರ ನೀಡಲು ಅನಾಥರನ್ನು ರಕ್ಷಿಸಲು ಬಡವರಿಗೆ ನೆರವಾಗಲು ನೆರೆಹೊರೆಯವರ ಹಕ್ಕುಗಳನ್ನು ಕಾಪಾಡಲು ಮತ್ತು ಮಾನವರ ನಡುವೆ ಪ್ರೀತಿ ಬೆಳೆಸಲು ಕರೆ ನೀಡಿದರು ದ್ವೇಷಕ್ಕೆ ಬದಲಾಗಿ ಪ್ರೀತಿ ಪ್ರತೀಕಾರಕ್ಕೆ ಬದಲಾಗಿ ಕ್ಷಮೆ ಮತ್ತು ಅನ್ಯಾಯಕ್ಕೆ ಬದಲಾಗಿ ನ್ಯಾಯವನ್ನು ಬೋಧಿಸಿದರು

ಅವರನ್ನು ಪವಿತ್ರ ಕುರ್‌ಆನ್
ರಹ್ಮತುಲ್ಲಿಲ್ ಆಲಮೀನ್
ಸಕಲ ಲೋಕಗಳಿಗೆ ಕರುಣೆಯಾಗಿ ಕಳುಹಿಸಲ್ಪಟ್ಟವರು ಎಂದು ವರ್ಣಿಸುತ್ತದೆ ಆದ್ದರಿಂದ ಅವರ ಸಂದೇಶವು ಒಂದು ಸಮುದಾಯಕ್ಕೆ ಮಾತ್ರವಲ್ಲ ಇಡೀ ಮಾನವಕುಲಕ್ಕೆ ಸೇರಿದೆ

ಈದ್ ಮಿಲಾದ್ ಆಚರಣೆಯ ನಿಜವಾದ ಅರ್ಥ ಪ್ರವಾದಿಯವರ ಜೀವನ ಸಂದೇಶಗಳನ್ನು ಅರ್ಥಮಾಡಿಕೊಳ್ಳುವುದುಅವರ ಆದರ್ಶಗಳನ್ನು ಅನುಸರಿಸುವುದು ಮತ್ತು ಸಮಾಜದಲ್ಲಿ ಪ್ರೀತಿ ಶಾಂತಿ ಹಾಗೂ ಸಹೋದರತ್ವವನ್ನು ಬೆಳೆಸುವುದಾಗಿದೆ

ಪ್ರವಾದಿಯವರ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಶ್ರೇಷ್ಠ ಗೌರವ

ಈದ್ ಮಿಲಾದ್ ಉನ್ ನಬಿಯ ಹಾರ್ದಿಕ ಶುಭಾಶಯಗಳು.

ಸಲ್ಲಲ್ಲಾಹು ಅಲಾ ಮುಹಮ್ಮದ್
ಸಲ್ಲಲ್ಲಾಹು ಅಲೈಹಿ ವಸಲ್ಲಂ

✍️ಎಂ ಎಂ ದಾವುದ್

WhatsApp

Join Now

Telegram

Join Now

Instagram

Join Now