ವಿಜಯ ದರ್ಪಣ ನ್ಯೂಸ್….
ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಮಹಾ ಸಭೆ

ಶಿವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಎಸ್ ವಿ ಸುರೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ ಸಂಘವು ಪ್ರಸ್ತುತ ವರ್ಷ 886690/- ರೂಗಳ ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ವಿಷಯ ಸಂಘವು ಸ್ವಂತ ಕಟ್ಟಡ ಹೊಂದಿದ್ದು ಬ್ಯಾಂಕ್ ನಲ್ಲಿ 23 ಲಕ್ಷಕ್ಕು ಹೆಚ್ಚು ಹಣ ಉಳಿತಾಯವಿದೆ ನಿತ್ಯ ೬೮ ಹಾಲು ಉತ್ಪಾದಕರಿಂದ 12೦೦ ರಿಂದ 15೦೦ ಲೀಟರ್ ನಷ್ಟು ಹಾಲು ಸಂಘಕ್ಕೆ ಸರಬರಾಜು ಆಗುತ್ತಿದ್ದು, ಹಾಲು ಉತ್ಪಾದಕರಿಗೆ ಶೇ% 1.9೦ ಪೈಸೆ ಭೋನಸ್ ನೀಡಲಾಗುವುದು ಎಂದು ಹೇಳುತ್ತಾ ಉತ್ಪಾದಕರ ವಿಧ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ ಎಂದು ಹೇಳುತ್ತಾ ರೈತರು ಉತ್ತವ ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಸ್ವವಲಂಬಿಗಳಾಗಬೇಕೆಂದು ಕರೆ ನೀಡಿದರು
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಕನಕಪುರ ಶಿಭಿರದ ವಿಸ್ತರಣಾಧಿಕಾರಿ ಶ್ರೀ ಪ್ರಭಾಕರ್ ಅವರು ಮಾತನಾಡಿ ರೈತರು ವೈಜ್ಞಾನಿಕವಾಗಿ ಹೈನುಗಾರಿಕೆ ಮಾಡಬೇಕು ದನಗಳ ಹಸಿರು ಮೇವನ್ನು ಚಾಪ್ ಕಟ್ಟರ್ ನಿಂದ ಕತ್ತರಿಸಿ ಹಾಕಬೇಕು. ರಾಸುಗಳು ಹಾಲು ಕೊಡುವ ಅನುಗುಣವಾಗಿ ಪಶು ಆಹಾರ ನೀಡಬೇಕು. ರಾಸುಗಳನ್ನು ಕಟ್ಟಿ ಹಾಕುವ ಸ್ಥಳ ಸ್ವಚ್ಚವಾಗಿರಬೇಕು ಖನಿಜ ಮಿಶ್ರಿತ ಪೌಡರ್ ಅನ್ನು ನಿಯಮಿತವಾಗಿ ನೀಡಬೇಕು ಹೆಚ್ಚಿನ ಸಲಹೆಗಳಿಗಾಗಿ ಪಶು ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಕೃಷಿ ಅಧಿಕಾರಿ ಸುನೀಲ್ ರವರು ಮಾತನಾಡಿ ಸಂಘವು ಲಾಭದಲ್ಲಿ ನಡೆಯುತ್ತಿದ್ದು, ಸಂಘದ ಸಿಬ್ಬಂದಿಗಳು, ಮತ್ತು ಹಾಲು ಉತ್ಪಾದಕರು ಹಾಗೂ ಆಡಳಿತ ಮಂಡಳಿಯವರನ್ನು ಅಭಿನಂದಿಸುತ್ತಾ, ಪ್ರಸ್ತುತ ವರ್ಷದಿಂದ ರೈತರಿಗೆ ರಾಸುಗಳ ಮ್ಯಾಟ್ ಗಳನ್ನು ಸರಬರಾಜು ಮಾಡುವುದಾಗಿ ಹೇಳುತ್ತಾ ಗುಣಮಟ್ಟದ ಪಶು ಆಹಾರ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಸಂಘದ ಸಿಇಓ ಶ್ರೀಮತಿ ರೂಪ ರವರು ಎಲ್ಲರನ್ನು ಸ್ವಾಗತಿಸಿ 2025-26 ನೇ ಸಾಲಿನ ವಾರ್ಷಿಕ ಸಭೆಯ ನಡವಳಿಕೆಗಳನ್ನು ಓದಿ 2026-27 ನೇ ಸಾಲಿನ ಆಯ ವ್ಯಯವನ್ನು ಮಂಡಿಸಿ ಸರ್ವಾನುಮತದಿಂದ ಒಪ್ಪಿಗೆಯನ್ನು ಪಡೆದರು.
ಇದೆ ಸಂದರ್ಭದಲ್ಲಿ ಹೆಚ್ಚು ಹಾಲು ಉತ್ಪಾದಿಸಿ ಸರಬರಾಜು ಮಾಡಿದ 6 ಜನ ರೈತರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಮಹದೇವಯ್ಯ ನಿರ್ದೇಕರುಗಳಾದ ಎಸ್ ಎಂ ನಿರಂಜನಮೂರ್ತಿ, ಎಸ್ ಹೆಚ್ ಹಲಗಪ್ಪ, ಎಸ್ ವಿ ವಿಜಯಕುಮಾರ್, ಸತೀಶ್, ಕೆಂಚಪ್ಪ, ಕವಿತ, ಹುಚ್ಚೇಗೌಡ, ಮಹದೇವಮ್ಮ, ಜ್ಯೋತಿ, ಭ್ಯಾಗ್ಯಮ್ಮ, ವೀರಮಾದಯ್ಯ ಹಾಲು ಪರೀಕ್ಷಕ ದೊಡ್ಡವೀರೇಗೌಡ, ಸಹಾಯಕ ಮಲ್ಲವೀರಯ್ಯ ಸೇರದಂತೆ ಸಂಘದ ಸದಸ್ಯರು ಹಾಜರಿದ್ದು, ಸಭೆಯನ್ನು ಯಶಸ್ವಿಗೊಳಿಸಿದರು











