--Ads--

ಓಣಂ: ಮಹಾಬಲಿಯ ನೆನಪು ಮತ್ತು ಮಾನವೀಯತೆಯ ಸಂಭ್ರಮ

On: August 25, 2026 5:56 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಓಣಂ: ಮಹಾಬಲಿಯ ನೆನಪು ಮತ್ತು ಮಾನವೀಯತೆಯ ಸಂಭ್ರಮ

ಹಬ್ಬಗಳು ಕೇವಲ ಆಚರಣೆಗಳಲ್ಲ ಅವು ಒಂದು ಜನಾಂಗದ ಇತಿಹಾಸ ಸಂಸ್ಕೃತಿ ನಂಬಿಕೆ ಮತ್ತು ಬದುಕಿನ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸೇತುವೆಗಳಾಗಿವೆ ಅಂತಹ ಹಬ್ಬಗಳಲ್ಲಿ ಕೇರಳದ ಓಣಂ ವಿಶಿಷ್ಟ ಸ್ಥಾನವನ್ನು ಪಡೆದಿದೆ ಓಣಂ ಅದು ಒಂದು ಸಂಸ್ಕೃತಿ ಒಂದು ನೆನಪು ಮತ್ತು ಒಂದು ಜೀವನದರ್ಶನ

ಓಣಂ ಹಬ್ಬದ ಹಿಂದೆ ಮಹಾಬಲಿ ಚಕ್ರವರ್ತಿಯ ಕಥೆ ಇದೆ. ಪುರಾಣಗಳ ಪ್ರಕಾರ ಮಹಾಬಲಿ ಅಸುರ ವಂಶದಲ್ಲಿ ಜನಿಸಿದ ರಾಜನಾಗಿದ್ದರೂ ತನ್ನ ನ್ಯಾಯಪ್ರಿಯ ಆಡಳಿತ ದಾನಶೀಲತೆ ಮತ್ತು ಪ್ರಜೆಗಳ ಮೇಲಿನ ಅಪಾರ ಪ್ರೀತಿಯಿಂದ ಜನಮನ ಗೆದ್ದವನಾಗಿದ್ದನು ಅವನ ರಾಜ್ಯದಲ್ಲಿ ಬಡತನ ಅನ್ಯಾಯ ಶೋಷಣೆ ಮತ್ತು ಭೇದಭಾವಕ್ಕೆ ಸ್ಥಾನವಿರಲಿಲ್ಲ ಎಂದು ಜನಪದ ನಂಬಿಕೆಗಳು ಹೇಳುತ್ತವೆ ರಾಜನ ಅರಮನೆಗಿಂತ ಪ್ರಜೆಯ ಮನೆ ಮುಖ್ಯ ಎಂಬುದು ಅವನ ಆಡಳಿತದ ಮೂಲತತ್ವವಾಗಿತ್ತು

ಮಹಾಬಲಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಾಗ ವಿಷ್ಣುವು ವಾಮನ ಅವತಾರದಲ್ಲಿ ಬಂದು ಅವನನ್ನು ಪರೀಕ್ಷಿಸಿದನೆಂದು ಪುರಾಣಗಳು ಹೇಳುತ್ತವೆ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದ ವಾಮನನಿಗೆ ಮಹಾಬಲಿ ತನ್ನ ಮಾತಿನಂತೆ ದಾನ ನೀಡಿದನು. ಅಂತಿಮವಾಗಿ ತನ್ನ ತಲೆಯನ್ನೇ ಅರ್ಪಿಸಿದ ಮಹಾಬಲಿಯ ಸತ್ಯನಿಷ್ಠೆ ಮತ್ತು ದಾನಶೀಲತೆಯಿಂದ ಸಂತುಷ್ಟನಾದ ವಿಷ್ಣು ವರ್ಷಕ್ಕೊಮ್ಮೆ ತನ್ನ ಪ್ರಜೆಗಳನ್ನು ಭೇಟಿ ಮಾಡಲು ಅವಕಾಶ ನೀಡಿದನೆಂಬ ನಂಬಿಕೆ ಇದೆ ಆ ನೆನಪಿನಲ್ಲೇ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ

ಕೇರಳದ ಜನರ ಪಾಲಿಗೆ ಓಣಂ ಹಬ್ಬವಲ್ಲ ಒಂದು ಭಾವನೆ ಮಳೆಗಾಲದ ನಂತರದ ಸಮೃದ್ಧಿಯ ಸಂಕೇತವಾಗಿ ಕುಟುಂಬಗಳ ಪುನರ್ಮಿಲನದ ಸಂದರ್ಭವಾಗಿ ಮತ್ತು ಸಂಸ್ಕೃತಿಯ ಉತ್ಸವವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಮನೆಗಳ ಮುಂದೆ ಹೂವಿನ ಪೂಕಳಂ ಅರಳುತ್ತದೆ ಕುಟುಂಬದವರು ಒಂದೆಡೆ ಸೇರುತ್ತಾರೆ. ಸಾಂಪ್ರದಾಯಿಕ ಸದ್ಯದ ಊಟ ಸಿದ್ಧವಾಗುತ್ತದೆ ಜನಪದ ಕಲೆಗಳು ದೋಣಿ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ

ಇಂದು ಓಣಂ ಕೇರಳದ ಗಡಿಗಳನ್ನು ದಾಟಿ ವಿಶ್ವದಾದ್ಯಂತ ಹರಡಿರುವ ಮಲಯಾಳಿ ಸಮುದಾಯಗಳ ಹಬ್ಬವಾಗಿದೆ ಧರ್ಮ ಜಾತಿ ಮತ್ತು ಭಾಷೆಗಳ ಭೇದವನ್ನು ಮೀರಿ ಜನರು ಈ ಹಬ್ಬವನ್ನು ಸಾಂಸ್ಕೃತಿಕ ಸಂಭ್ರಮವಾಗಿ ಆಚರಿಸುತ್ತಾರೆ

ಓಣಂನ ನಿಜವಾದ ಸಂದೇಶ ಮಹಾಬಲಿಯ ಕಥೆಯಲ್ಲೇ ಅಡಗಿದೆ ಅಧಿಕಾರವು ಜನಸೇವೆಗೆ ಇರಬೇಕು ಸಮಾಜದಲ್ಲಿ ಸಮಾನತೆ ಇರಬೇಕು ಯಾರೂ ಹಸಿವಿನಿಂದ ಬಳಲಬಾರದು ಮತ್ತು ಮನುಷ್ಯ ಮನುಷ್ಯನನ್ನು ಗೌರವಿಸಬೇಕು ಎಂಬ ಮೌಲ್ಯಗಳನ್ನು ಅದು ನಮಗೆ ನೆನಪಿಸುತ್ತದೆ

ಹೂವುಗಳು ಒಣಗಬಹುದು ಹಬ್ಬದ ದಿನಗಳು ಕಳೆಯಬಹುದು ಆದರೆ ಮಾನವೀಯತೆ ಸಹೋದರತ್ವ ಮತ್ತು ಸಮಾನತೆಯ ಮೌಲ್ಯಗಳು ಎಂದಿಗೂ ಒಣಗಬಾರದು ಇದೇ ಓಣಂ ಹಬ್ಬದ ನಿಜವಾದ ಅರ್ಥ ಮತ್ತು ಶಾಶ್ವತ ಸಂದೇಶ

ಎಲ್ಲರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು

✍️ ಎಂ.ಎಂ. ದಾವುದ್
9945385180

£££££££££££££¢£££££££££

ಕರಾಮುವಿ ಪರೀಕ್ಷಾ ಶುಲ್ಕ ಪಾವತಿಗೆ ಅವಕಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.25 :

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2021-22 ರಿಂದ 2025-26ನೇ ಸಾಲಿನ ಜುಲೈ ಆವೃತ್ತಿವರೆಗಿನ ನಾನ್ ಸಿಬಿಸಿಎಸ್ ಹಾಗೂ 2021-22 ರಿಂದ 2025-26ನೇ ಶೈಕ್ಷಣಿಕ ಸಾಲುಗಳ ಜುಲೈ/ಜನವರಿ ಆವೃತ್ತಿ ಸಿಬಿಸಿಎಸ್ ಯು.ಜಿ./ಪಿ.ಜಿ. ಕೋರ್ಸುಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಿದೆ.

ಪರೀಕ್ಷಾ ಶುಲ್ಕವನ್ನು ದಂಡ ಶುಲ್ಕವಿಲ್ಲದೆ ಪಾವತಿಸಲು ಸೆಪ್ಟಂಬರ್ 18 ಹಾಗೂ ರೂ. 200/- ದಂಡ ಶುಲ್ಕದೊಡನೆ ಪಾವತಿಸಲು ಸೆಪ್ಟಂಬರ್ 25 ಕೊನೆಯ ದಿನಾಂಕವಾಗಿದೆ.

ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್‌ ಬಸ್‌ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-560026, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805-26439/ 90195-26439 ಅನ್ನು ಸಂಪರ್ಕಿಸಬಹುದಾಗಿದೆ.

ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.ksoumysuru.ac.in ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು ಎಂದು ಕರಾಮುವಿ ಪ್ರಾದೇಶಿಕ ಕೇಂದ್ರ-01ರ ಪ್ರಾದೇಶಿಕ ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್. ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now