ವಿಜಯ ದರ್ಪಣ ನ್ಯೂಸ್….
ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶದ್ವಾರ ವೈಟ್ ಟಾಪಿಂಗ್ ರಸ್ತೆ ಶಾಸಕ ಎಸ್.ಸುರೇಶ್ ಕುಮಾರ್ ಅವರಿಂದ ಚಾಲನೆ

ಬೆಂಗಳೂರು:ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗೂ 1.8 ಕಿಲೋ ಮೀಟರ್ ವೈಟ್ ಟಾಪಿಂಗ್ ರಸ್ತೆ ಲೋಕಾರ್ಪಣೆ ಮಾಡಿದರು.
ಶಾಸಕ ಎಸ್.ಸುರೇಶ್ ಕುಮಾರ್ ರವರು, ಕುಣಿಗಲ್ ಡಿಪೋ ಬಸ್ ಚಾಲಕನ ಜೊತೆಯಲ್ಲಿ ಉದ್ಘಾಟನೆ ಮಾಡಿದರು. ಕಾರ್ಯಪಾಲಕ ಅಭಿಯಂತರು ಬಾಲಾಜಿ, ಸಹಾಯಕ ಕಾರ್ಯಪಾಲಕ ಅಭಿಯಂತರುಗಳಾದ ಮಂಜುನಾಥ್, ಶೈಲಾ ರವರು, ಬಿ.ಸ್ಮೈಲ್ ಅಧಿಕಾರಿಗಳು ಉಪಸ್ಥಿತಿರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶ ದ್ವಾರದವರೆಗೂ ಸರಿಸುಮಾರು 1.8ಕಿಲೋ ಮೀಟರ್ ವೈಟ್ ಟಾಪಿಂಗ್ ರಸ್ತೆ ಇಂದಿನಿಂದ ಸಾರ್ವಜನಿಕರ ವಾಹನ ಓಡಾಟಕ್ಕೆ ಲೋಕರ್ಪಣೆಯಾಗಿದೆ.

ಈ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆಯ 4500ಹೆಚ್ಚು ಬಸ್ ಗಳು, ಸಾವಿರಾರು ವಾಹನಗಳು ಪ್ರತಿದಿನ ಸಂಚರಿಸಲಿದೆ. ಈ ರಸ್ತೆ ಇಂದಿನಿಂದ ಪ್ರಾರಂಭವಾಗಿರುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಮತ್ತು ವಿಶೇಷವೆಂದರೆ ಈ ರಸ್ತೆಯಲ್ಲಿ ಮಳೆ ನೀರು ಸಂಗ್ರಹಕ್ಕೆ 10ಕಡೆಗಳಲ್ಲಿ ಮಾಡಲಾಗಿದೆ. ನೀರಿನ ಮತ್ತು ಒಳಚರಂಡಿ ವ್ಯವಸ್ಥೆ ಹಾಗೂ ಓ.ಎಫ್ ಸಿ.ಕೇಬಲ್ ಡಕ್ ಗಳನ್ನು ಮತ್ತು ಸಸಿ ನೆಡಲು ಜಾಗಗಳನ್ನು ಬಿಡಲಾಗಿದೆ ಪರಿಸರ ರಕ್ಷಣೆಗೂ ಆದ್ಯತೆ ನೀಡಲಾಗಿದೆ. ವೈಟ್ ಟಾಪಿಂಗ್ ರಸ್ತೆಯನ್ನು ಓಷನ್ ಕನ್ಸ್ಟ್ರಕ್ಷನ್ ರವರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಪಾಲಿಕೆ ಸದಸ್ಯರುಗಳಾದ ಹೆಚ್.ಆರ್.ಕೃಷ್ಣಪ್ಪ, ದೀಪಾ ನಾಗೇಶ್ ಮತ್ತು ಬಿಜೆಪಿ ಪ್ರಮುಖ ಮುಖಂಡರುಗಳು ಭಾಗವಹಿಸಿದ್ದರು.










