ವಿಜಯ ದರ್ಪಣ ನ್ಯೂಸ್…
ಬೆಂಗಳೂರಿನಲ್ಲಿ ಶ್ರೀ ಲಲಿತಾ ಕಲಾನಿಕೇತನದ ೨೬ನೇ ವಾರ್ಷಿಕೋತ್ಸವ
ಕರ್ನಾಟಕದ ಸಾಂಸ್ಕೃತಿಕ ಲೋಕಕ್ಕೆ ದಿಗ್ಗಜರ ಕೊಡುಗೆ ಅನನ್ಯ ಶ್ರೀ ದಿನೇಶ್ ಗುಂಡೂರಾವ್

ಬೆಂಗಳೂರು:ಕಲೆ ಮತ್ತು ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ನೃತ್ಯ ಪ್ರದರ್ಶನ ಹಾಗೂ ವೈವಿಧ್ಯಮಯ ಸಾಂಸ್ಕೃತಿಕನೃತ್ಯ ಗಳ ಪ್ರದರ್ಶನ ಕರ್ನಾಟಕದ ಸಾಂಸ್ಕೃತಿಕ ನೃತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ ರಾಜ್ಯದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಕಲಾವಿದರು ಹಾಗೂ ಗುರುಗಳನ್ನು ಗುರುತಿಸಿ ವಿವಿಧ ಅತ್ಯುನ್ನತ ನೃತ್ಯ ಪ್ರಶಸ್ತಿಗಳನ್ನು ದಿಗ್ಗಜರ ಸಮ್ಮುಖದಲ್ಲಿ ನೀಡಿ ಗೌರವಿಸುವವದು ನನ್ನ ಸೌಭಾಗ್ಯ ಎಂದು ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.
ಬೆಂಗಳೂರು ನಗರದ ಹೆಸರಾಂತ ನೃತ್ಯ ಸಂಸ್ಥೆಯಾದ ‘ಶ್ರೀ ಲಲಿತಾ ಕಲಾನಿಕೇತನ’ದ ೨೬ನೇ ವಾರ್ಷಿಕೋತ್ಸವದ ಅಂಗವಾಗಿ ನೃತ್ಯದಲ್ಲಿನ ಸಾಧಕರಿಗೆ ಗೌರವ ಪ್ರಶಸ್ತಿಗಳನ್ನ ಪ್ರದಾನ ಮಾಡಿ ಮಾತನಾಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭವ್ಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು
ಖ್ಯಾತ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆ, ಗುರುಗಳು ಹಾಗೂ ಪ್ರಸ್ತುತ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಶ್ರೀಮತಿ ಶುಭಾ ಧನಂಜಯ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ‘ಲಲಿತಶ್ರೀ ಪ್ರಶಸ್ತಿ’ ಸುದೀರ್ಘ ಅವಧಿಯಿಂದ ನೃತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಗುರು ಡಾ. ಸಂಜಯ್ ಶಾಂತಾರಾಂ ಅವರಿಗೆ ‘ಕಲಾತಪಸ್ವಿ ಪ್ರಶಸ್ತಿ
ಪ್ರಸಿದ್ಧ ಭರತನಾಟ್ಯ, ಕೂಚಿಪುಡಿ ನೃತ್ಯ ಕಲಾವಿದ, ನಟ ಹಾಗೂ ಕಲಾ ಗುರು ಡಾ. ಸಂಜಯ್ ಶಾಂತಾರಾಂ ಅವರಿಗೆ ಉನ್ನತ ಮಟ್ಟದ ‘ಕಲಾತಪಸ್ವಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ ಹೆಸರಾಂತ ಭರತನಾಟ್ಯ ಗುರುಗಳಾದ ಗುರು ಶ್ರೀಮತಿ ಡಾ. ರಾಧಾ ಶ್ರೀಧರ್ ಮತ್ತು ಪ್ರಸಿದ್ಧ ಕೂಚಿಪುಡಿ ನೃತ್ಯ ಪ್ರತಿಭೆ, ಗುರುಗಳಾದ ಗುರು ಶ್ರೀಮತಿ ಡಾ. ವೀಣಾ ಮೂರ್ತಿ ವಿಜಯ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು
ಶ್ರೀ ಲಲಿತಾ ಕಲಾನಿಕೇತನದ 26ನೇ ವಾರ್ಷಿಕೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಗೌರವಾನ್ವಿತ ಶಾಸಕ ದಿನೇಶ್ ಗುಂಡೂರಾವ್ ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ವೀಣಾ ಮೂರ್ತಿ ವಿಜಯ್ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ವಾರ್ಷಿಕೋತ್ಸವದಲ್ಲಿ ಸಂಸ್ಥೆಯ ಗುರುಗಳು ಮತ್ತು ವಿದ್ಯಾರ್ಥಿಗಳ ಕಲಾ ಸಾಧನೆಗಳು ಅನಾವರಣಗೊಂಡವು.
ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನ ಸ್ವಾಗತಿಸಿದ ಸಂಸ್ಥೆಯ ಮುಖ್ಯಸ್ಥೆ ವಿದುಷಿ ಶ್ರೀಮತಿ ರೇಖಾ ಜಗದೀಶ್ ಅವರು ಈ ರೀತಿಯ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹವಿರಲಿ ಎಂದು ವಿನಂತಿಸಿದರು
ಬೆಂಗಳೂರಿನ ಶ್ರೀ ಲಲಿತ ಕಲಾನಿಕೇತನದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ ರೂಪಕ ಸಮೂಹ ನೃತ್ಯ ಭರತನಾಟ್ಯ ಪ್ರದರ್ಶನಗಳು ಪ್ರೇಕ್ಷಕರನ್ನ ರಂಜಿಸಿದವು
ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಕುಮಾರ್ ಮನು ಜಗದೀಶ್
ನಿರೂಪಿಸಿದರು.
ಶ್ರೀಮತಿ ವಾಣಿ ಬೆಂಗಳೂರು ವಂದನಾರ್ಪಣೆ ಮಾಡಿದರು










