--Ads--

ಬ್ರಾಹ್ಮಣರ ಏಳಿಗೆಗಾಗಿ ಮಹಾಸಭಾದ ಶ್ರೇಯೋಭಿವೃದ್ಧಿಗಾಗಿ ವಿಶೇಷಪೂಜೆ ಮತ್ತು ಹೋಮ ಕಾರ್ಯಕ್ರಮ-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

On: September 9, 2026 11:16 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬ್ರಾಹ್ಮಣರ ಏಳಿಗೆಗಾಗಿ ಮಹಾಸಭಾದ ಶ್ರೇಯೋಭಿವೃದ್ಧಿಗಾಗಿ ವಿಶೇಷಪೂಜೆ ಮತ್ತು ಹೋಮ ಕಾರ್ಯಕ್ರಮ-ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

ಬೆಂಗಳೂರು: ಪದ್ಮನಾಭನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ಬ್ರಾಹ್ಮಣ ಸಮುದಾಯ ಏಳಿಗೆಗಾಗಿ ಮತ್ತು ಮಹಾಸಭಾದ ಶ್ರೇಯೋಭಿವೃದ್ಧಿಗಾಗಿ ಮೂರು ದಿನಗಳ ಕಾಲ ಮಹಾ ಸುದರ್ಶನ ಹೋಮ, ಅಘೋರಾಸ್ತ್ರ ಹೋನ, ಜಾತವೇದಾಸೆ ಹೋಮ, ಭಾಗ್ಯ ಸೂಕ್ತ ಹೋಮ, ಐಕ್ಯಮತ್ಯ ಸೂಕ್ತ ಹೋಮ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ರವರ ನೇತೃತ್ವದಲ್ಲಿ ವಿಶೇಷಪೂಜೆ ಮತ್ತು ಹೋಮ ಕಾರ್ಯಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ವರದಾಚಾರ್ ತಂತ್ರಿಗಳು, ಸುಧಾಮಚಾರ್, ನರಸಿಂಹಚಾರ್ ಮತ್ತು ಅರ್ಚಕರು ಪಾಲ್ಗೊಂಡಿದ್ದರು.

ಎಲ್ಲ ಸಮಾಜವನ್ನು ಸುಖ, ಶಾಂತಿ ನೆಮ್ಮದ್ದಿಗಾಗಿ ಲೋಕ ಸಮಸ್ತ ಸುಖಿನೋ ಭವಂತು ಎಂದು ಶ್ರಮಿಸುವವರು ಬ್ರಾಹ್ಮಣ ಸಮಾಜ ಅವರ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗಲಿ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದೃಡವಾಗಿ ಬೆಳಯಲಿ ಎಂದು ಹೋಮ, ವಿಶೇಷ ಪೂಜೆಯನ್ನು ಮೂರು ದಿನಗಳ ಕಾಲ ನಡೆಯುತ್ತಿದೆ.

ಮಹಾ ಸುದರ್ಶನ ಹೋಮ ಮಹಾಸಭಾ ಜಾಗದಲ್ಲಿ ಯಾವುದೇ ತಂತ್ರಗಳು, ಕೆಟ್ಟ ದೃಷ್ಟಿ ಬೀಳದಿರಲು ,ದುರ್ಗ ಶಕ್ತಿಯ ದೋಷ ಪರಿಹಾರಕ್ಕಾಗಿ ಮತ್ತು ಅಘೋರಾಸ್ತ್ರ ಪೇತ, ಭೂತ ಭಾಧೆಯಿಂದ ಮುಕ್ತಿ ಪಡೆಯಲು ಭಾಗ್ಯ ಸೂಕ್ತ ಹೋಮದಿಂದ ಲಕ್ಷ್ಮೀ ದೇವಿ ಕೃಪಕಟಾಕ್ಷ ಸಿಗಲಿ ಎಂದು ಐಕ್ಯಮತ್ಯ ಸೂಕ್ತ ಹೋಮದಿಂದ ಸಂಘದಲ್ಲಿ ಎಲ್ಲರು ಸಹೋದರಂತೆ, ಸಂಘಟಿತರಾಗಿ ಮಹಾಸಭಾದ ಬೆಳವಣಿಗೆ ಶ್ರಮಿಸಲು ಸಹಕಾರಿಯಾಗುತ್ತದೆ. ಗಾಯಿತ್ರಿ ಹೋಮದಿಂದ ಬಂದ ಸಂಕಷ್ಟಗಳು, ಮುಂದೆ ಬರುವ ಸಂಕಷ್ಟಗಳ ನಿವಾರಣೆಗಾಗಿ ಹೋಮ ಮಾಡಲಾಗುತ್ತಿದೆ.

ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ವಿಪ್ರ ಮುಖಂಡರುಗಳಾದ ಎನ್.ಎಲ್.ಚಿದಾನಂದ, ಸತ್ಯಪ್ರಕಾಶ್, ಪ್ರಹ್ಲಾದ್ ಬಾಬು, ಎಲ್.ಪುರುಷೋತ್ತಮ್ ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್.ರವಿಕುಮಾರ್, ಎಸ್.ಎಸ್.ಪ್ರಸಾದ್, ಪಿ.ಆರ್.ಪ್ರಕಾಶ್, ನಾಗೇಶ್, ರಾಜಶೇಖರ್, ದಿಲೀಪ್, ಸತೀಶ್ ಉರಾಳ್, ಮತ್ತು ರಾಮ್ ಪ್ರಸಾದ್, ಜೆ.ಹೆಚ್.ಆನಿಲ್ ಕುಮಾರ್, ರಥಯಾತ್ರೆ ಸುರೇಶ್ ರವರು ವಿಪ್ರ ಭಾಂದವರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now