ವಿಜಯ ದರ್ಪಣ ನ್ಯೂಸ್……..
ಗುರುವಾಗುವುದಕ್ಕಿಂತ ನರ್ತಕಿಯಾದರೆ ಮನೋಲ್ಲಾಸ ಹೆಚ್ಚುತ್ತದೆ : ಡಾ.ನರ್ತಕಿ ನಟರಾಜನ್

ಬೆಂಗಳೂರು : ಮಲ್ಲೇಶ್ವರದ ಸೇವಾ ಸದನ ರಂಗಮಂದಿರದಲ್ಲಿ ಕಲಾಗ್ರಣಿ ಪ್ರತಿಷ್ಠಾನ, ನೆಲಮಂಗಲ ಮತ್ತು ನಂದಿತಾಳವಾದ್ಯ ಅಕಾಡೆಮಿ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಳವಾದ್ಯ ಪ್ರಸ್ತುತಿ ಮತ್ತು ತಾಯಿ ಮಗಳ ಭರತನಾಟ್ಯ ಜುಗಲ್ ಬಂದಿ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅಂತರರಾಷ್ಟ್ರೀಯ ಖ್ಯಾತ ನೃತ್ಯ ಗುರು ಡಾ. ನರ್ತಕಿ ನಟರಾಜನ್ ಮತ್ತು ವಿದ್ವಾನ್ ಎಸ್.ವಿ.ಗಿರಿಧರ್ ರವರು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು ಭರತನಾಟ್ಯವನ್ನು ಕಲಿತು ಗುರುವಾಗುವುದಕ್ಕಿಂತ ನರ್ತಕಿಯಾದರೆ ಮನೋಲ್ಲಾಸ ಹೆಚ್ಚುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಂತರ ವೇದಿಕೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ತಾಳವಾದ್ಯ ಗುರು ವಿದ್ವಾನ್ ಎಸ್.ವಿ. ಗಿರಿಧರ್ ಅವರ ಶಿಷ್ಯಂದಿರಾದ ನಂದಿ ತಾಳವಾದ್ಯ ಅಕಾಡೆಮಿಯ ಕಲಾವಿದರು ಬಹಳ ಅಮೋಘವಾಗಿ ಮೃದಂಗ, ಘಟಂ, ವೀಣೆ, ವಯಲೀನ್ ಕೊನ್ನಕ್ಕೋಲ್, ಮೋರ್ಚಿಂಗ್ , ಡೋಲಕ್, ಸಂಯೋಜನೆ ಪ್ರೇಕ್ಷಕರ ಕಣ್ಮನ ಸೆಳೆಯಿತು.
ನಂತರ ತಾಯಿ ಗುರುವಾಗಿ ಮಗಳು ಶಿಷ್ಯೆಯಾಗಿ ವಿದುಷಿ ಸೋನಿಯಾ ಪೊದುವಾಳ್ ಮತ್ತು ಕುಮಾರಿ ನಕ್ಷತ್ರರವರ ನೃತ್ಯಬಂಧಗಳು ಅನಾವರಣ ಗೊಳ್ಳುತ್ತಿದ್ದರೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ನೋಡಿ ಇಡಿ ಸಭಾಂಗಣವೇ ಚಪ್ಪಾಳೆಯ ಮಳೆಗರಿದದ್ದು ಅದ್ಭುತವೆನಿಸಿತು.
ತಾಯಿಯ ಗರ್ಭದಲ್ಲಿದ್ದಾಗಲೆ ತಟ್ಡುಮಣೆಯ ಸಪ್ಪಳವನ್ನು ಕೇಳುತ್ತಾ ಹೆಜ್ಜೆಯ ಗೆಜ್ಜೆ ನಾದವನ್ನು ಆಲಿಸುತ್ತಾ ಭುವಿಗೆ ಬಂದ ಕುಮಾರಿ ನಕ್ಷತ್ರ ಶ್ರೀ ಪ್ರವೀಣ್ ಕುಲಕರ್ಣಿ ಮತ್ತು ವಿದುಷಿ ಸೋನಿಯಾ ಪೊದುವಾಳ್ ರವರ ಏಕೈಕ ಪುತ್ರಿ.
ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬ ನಾಣ್ಣುಡಿಯಂತೆ ಮಗುವಾಗಿದ್ದಾಗಲೇ ನಕ್ಷತ್ರ ತಾಯಿಯನ್ನೇ ಗುರುವಾಗಿ ಸ್ವೀಕರಿಸಿ ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿದ್ದು ಪ್ರಸ್ತುತ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಭರತನಾಟ್ಯದ ಜೊತೆಗೆ ಸಂಗೀತ, ವೀಣೆ ಮತ್ತು ಮೃದಂಗವನ್ನು ಅಭ್ಯಾಸ ಮಾಡುತ್ತಿರುವ ಈಕೆ ಮುಂದೆ ನಾಡಿನ ಹೆಸರಾಂತ ನೃತ್ಯಗಾರ್ತಿ ಯಾಗಲಿದ್ದಾಳೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ನರ್ತಕಿ ನಟರಾಜನ್ ರವರು ಶುಭ ಹಾರೈಸಿದ್ದಾರೆ.









