--Ads--

ಹಿಂದುಳಿದ ವರ್ಗಗಳ ಸಭೆ ನಡೆಸಿದ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ

On: September 18, 2026 4:33 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಹಿಂದುಳಿದ ವರ್ಗಗಳ ಸಭೆ ನಡೆಸಿದ ಸಚಿವ ಡಾಯತೀಂದ್ರ ಸಿದ್ದರಾಮಯ್ಯ 

ಮಂಗಳೂರು ಸೆಪ್ಟೆಂಬರ್ 18: ಮಂಗಳೂರಿನ ತುಳು ಭವನದಲ್ಲಿ ಏರ್ಪಡಿಸಿದ ಹಿಂದುಳಿದ ವರ್ಗಗಳ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ನಗರ ವೃದ್ಧಿ ಸಚಿವರು ಆದ ಡಾಕ್ಟರ್ ಎಸ್ ಯತೀಂದ್ರ ಸಿದ್ರಾಮಯ್ಯನವರು ಭಾಗವಹಿಸಿ ಮಾತನಾಡಿ ಹಿಂದುಳಿದ ವರ್ಗಗಳು ರಾಜಕೀಯವಾಗಿ ಶಕ್ತಿ ಬರಬೇಕಾದರೆ ಒಗ್ಗಟ್ಟು ಬಹಳ ಮುಖ್ಯ ಎಂದು ಸಚಿವರು ಅಭಿಪ್ರಾಯಪಟ್ಟರು

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಧಿಕಾರ, ಭೂಮಿ ಮತ್ತು ಆರ್ಥಿಕ ಸಂಪನ್ಮೂಲಗಳು ಕೆಲವೇ ಬಲಶಾಲಿ ವರ್ಗಗಳ ಕೈಯಲ್ಲೇ ಕೇಂದ್ರೀಕೃತವಾಗಿದ್ದವು. ಈ ಹಿನ್ನೆಲೆಯಲ್ಲಿ ಅಹಿಂದ ಸಂಘಟನೆಯ ಮುಖ್ಯ ಉದ್ದೇಶವೇ ಅಧಿಕಾರವನ್ನು ಕೆಳಹಂತದ ಶೋಷಿತ ವರ್ಗಗಳಿಗೆ ತಲುಪಿಸುವುದು ಮತ್ತು ಶಾಸನಸಭೆಗಳಲ್ಲಿ ಅವರಿಗೆ ಅರ್ಹ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವುದಾಗಿದೆ ಎಂದು ತಿಳಿಸಿದರು
.

ಡಾ. ಬಿ.ಆರ್. ಅಂಬೇಡ್ಕರ್ ಅವರ “ಶಿಕ್ಷಣ, ಸಂಘಟನೆ, ಹೋರಾಟ” ಎನ್ನುವ ಸಾರ್ವಕಾಲಿಕ ಸಂದೇಶದಂತೆ, ಈ ವರ್ಗಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ಮತ್ತು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸಲು ಜಾಗೃತ ಸಂಘಟನೆ ಅತ್ಯಂತ ಅಗತ್ಯವಾಗಿದೆ ಎಂದು ಮನದಟ್ಟು ಮಾಡಿದ ಸಚಿವರುಅಹಿಂದ ಚಳುವಳಿಯ ನಿಜವಾದ ಶಕ್ತಿ ಅಡಗಿರುವುದು ಸಣ್ಣ ಮತ್ತು ಅತಿಸಣ್ಣ ಸಮುದಾಯಗಳನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸುವುದರಲ್ಲಿ. ಪ್ರತಿಯೊಂದು ಸಣ್ಣ ಸಮುದಾಯವೂ ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಪ್ರತ್ಯೇಕವಾಗಿ ಬಗೆಹರಿಸುವುದಕ್ಕಿಂತ ಬೃಹತ್ ಸಾಮಾಜಿಕ ಒಕ್ಕೂಟವಾಗಿ ಶಕ್ತಿ ಪ್ರದರ್ಶಿಸಿದಾಗ ಮಾತ್ರ ಸೂಕ್ತ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು

ಜೊತೆಗೆ, ಭಾರತದ ಸಂವಿಧಾನ ನೀಡಿದ ಸಮಾನತೆ, ಸ್ವಾತಂತ್ರ್ಯ ಹಾಗೂ ಸಾಮಾಜಿಕ ನ್ಯಾಯದ ತತ್ವಗಳನ್ನು ರಕ್ಷಿಸುವುದು ಮತ್ತು ಮೀಸಲಾತಿಯಂತಹ ಸಂವಿಧಾನಾತ್ಮಕ ಹಕ್ಕುಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಗಟ್ಟಿ ಧ್ವನಿ ಎತ್ತುವುದು ಈ ಸಂಘಟನೆಯ ಪ್ರಮುಖ ಹೊಣೆಗಾರಿಕೆಯಾಗಿದೆ. ಪ್ರತಿಯೊಂದು ಸಣ್ಣ-ಪುಟ್ಟ ಸಮಾಜವೂ ತನ್ನ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಕೈಜೋಡಿಸಿದಾಗ ಮಾತ್ರ ಈ ದೇಶದಲ್ಲಿ ನಿಜವಾದ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಬದಲಾವಣೆ ಸಾಧಿಸಲು ಸಾಧ್ಯ ಎಂದು ಡಾ ಯತೀಂದ್ರ ಸಿದ್ದರಾಮಯ್ಯನವರು ಹೇಳಿದರು

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಮೇಯರ್ ಎಂ. ಶಶಿಧರ್ ಹೆಗಡೆ, ಕರಾವಳಿ ಕುರುಬ ಸಂಘದ ಅಧ್ಯಕ್ಷ ನಿರಂಜನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ರಾಜ್ಯ ಕುರುಬ ಸಂಘದ ನಿರ್ದೇಶಕ ಶಿವಾನಂದ್, ಮೊಗವೀರ ಸಮುದಾಯದ ಮುಖಂಡರಾದ ಜಿ. ಶಂಕರ್, ಕುಲಾಲ ಸಮುದಾಯದ ಮುಖಂಡರಾದ ಸುರೇಶ್ ಕುಲಾಲ್, ವಿಶ್ವಕರ್ಮ ಸಮುದಾಯದ ಮುಖಂಡರಾದ ಉದಯ ಆಚಾರ್ ಸೇರಿದಂತೆ ಹಲವು ಸಮಾಜಗಳ ಹಿರಿಯ ಮುಖಂಡರು ಭಾಗಿಯಾಗಿ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡರು.

WhatsApp

Join Now

Telegram

Join Now

Instagram

Join Now